ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ – ಹರಿಕಥೆ ಪರ್ಬ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ – ಹರಿಕಥೆ ಪರ್ಬ

Share This

ಮಂಗಳೂರು: ತುಳುಭವನದ ಸಿರಿ ಚಾವಡಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ಹರಿಕಥಾ ಪರಿಷತ್ ಜಂಟಿ ಸಂಯೋಜನೆಯಲ್ಲಿ ಹತ್ತು ದಿನಗಳ ಹರಿಕಥೆ ಪರ್ಬ ಕಾರ್ಯಕ್ರಮ ನಡೆಯುತ್ತಿದೆ.

Karnataka Tulu sahitya academy 10 day’s Harikatha Festival ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಹೋತೋಭಾರ ಶ್ರಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ
Karnataka Tulu sahitya academy 10 day’s Harikatha Festival ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಹೋತೋಭಾರ ಶ್ರಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ
Karnataka Tulu sahitya academy 10 day’s Harikatha Festival ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಹೋತೋಭಾರ ಶ್ರಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ

ಮೂರನೇ ದಿನದ ಕಾರ್ಯಕ್ರಮವನ್ನು ಮಹೋತೋಭಾರ ಶ್ರಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಉದ್ಘಾಟಿಸಿ, ಧಾರ್ಮಿಕ ಕ್ಷೇತ್ರಗಳಲ್ಲಿ ತುಳುನಾಡಿನ ಸಂಸ್ಕಾರವನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ತವರೂರು ಆಗಿ ಪರಿವರ್ತನೆಯಾಗಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ವಹಿಸಿ ಮಾತನಾಡಿ, ಹರಿಕಥೆಯು ಪೌರಾಣಿಕ, ಸಾಮಾಜಿಕ ಕಥಾನಕವನ್ನು ಜನರಿಗೆ ಸುಲಭವಾಗಿ ತಲುಪುವ ಬಹು ಮಾಧ್ಯಮವಾಗಿದೆ, ಮನದ ಆಳಕ್ಕೆ ಉಪ ಕಥೆಗಳಿಂದ ಸಮಾಜವನ್ನು ಪರೋಕ್ಷವಾಗಿ ತಿದ್ದುವ ಕೆಲಸ ನಡೆಯಿತ್ತಿದೆ. ತುಳು ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಿಂದ ಹೊಸತನದ ಮೂಲಕ ಹತ್ತಾರು ಇಂತಹ ಸಂಸ್ಕೃತಿ ಮತ್ತು ಸಂಸ್ಕಾರ ಅರಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್ ಕಂಪನಿಯ[MCF] ವೈದ್ಯಾಧಿಕಾರಿ ಡಾ.ಯೋಗೀಶ್ ಅವರು ಎಂ.ಸಿ.ಎಫ್ ಸಿಎಸ್ಆರ್ ನಿಧಿಯಿಂದ 5 ಲಕ್ಷ ರೂ ಮೊತ್ತದ ಚೆಕ್ಕನ್ನು ತುಳುನಾಡಿನ ದೈವಾರಾಧನಾ ಕ್ಷೇತ್ರದ ಅಧ್ಯಯನಕ್ಕಾಗಿ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭ ಹಾರೈಸಿ, ಅಕಾಡೆಮಿಯ ಕಾರ್ಯಗಳನ್ನು ಶ್ಲಾಘಿಸಿದರು.


ಸಂದರ್ಭದಲ್ಲಿ ಕಲಾವಿದರನ್ನು ವಿಶೇಷವಾಗಿ ಅಕಾಡೆಮಿಯಿಂದ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ಸಾರ್ ಗೌರವಿಸಿದರು. ಎಂಸಿಎಫ್ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವಿನಂದನ್ ಉಪಸ್ಥಿತರಿದ್ದರು. ತುಳು ಅಕಾಡೆಮಿಯ ಸದಸ್ಯರಾದ ನರೇಂದ್ರ ಎಂ.ಪೂಜಾರಿ ಸ್ವಾಗತಿಸಿದರು.ಹಾಗೂ ನಾಗೇಶ್ ಕುಲಾಲ್ ವಂದಿಸಿದರು. ಹರಿಕಥಾ ಪರಿಷತ್ ಸುಧಾಕರರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಕೀರ್ತನಾ ಕೇಸರಿ ಯಜ್ಞೇಶ್ ಹೊಸಬೆಟ್ಟು ಇವರಿಂದ ತಪ್ಪುಗ್ ತೆರೆದಂಡಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ರವಿರಾಜ್ ಶೆಟ್ಟಿ ಒಡಿಯೂರು, ಮಂಗಲ್ದಾಸ್ ಗುಲ್ವಾಡಿ ಸಹಕರಿಸಿದರು

Pages