ಬಂಟ್ಸ್ ನ್ಯೂಸ್, ಮಂಗಳೂರು: ಕೊರೋನಾ ಮಹಾಮಾರಿಯ ಸಂಕಷ್ಟ
ಸಮಯದಲ್ಲಿ ದೈವಾರಾಧನೆಯನ್ನೇ ನಂಬಿ ಜೀವನ ನಡೆಸುತ್ತಿರುವ
ಬಂಟ ಸಮಾಜದ ದೈವ ಪಾತ್ರಿ
/ ಮುಕ್ಕಾಲ್ದಿಗಳಿಗೆ ಜಾಗತಿಕ ಬಂಟರ
ಸಂಘಗಳ ಒಕ್ಕೂಟವು ಸಹಾಯಧನ ನೀಡಿದ್ದು ಈ ಮೂಲಕ
ಮುಂದಿನ ಸಂಭಾವ್ಯ ಆತಂಕದ ದಿನಗಳನ್ನು
ಕಳೆಯಲು ನಮಗೆ ಆನೆಬಲ ದೊರಕಿದಂತಾಗಿದೆ
ಎಂದು ಬಂಟ ಸಮುದಾಯದ ರಾಜನ್ ದೈವಗಳ ದರ್ಶನ
ಪಾತ್ರಿ / ಮುಕ್ಕಾಲ್ದಿಗಳು ಹೇಳಿದ್ದಾರೆ.
ಲಾಕ್’ಡೌನ್
ಕಷ್ಟಕ್ಕೆ ಮನವಿ ಸಲ್ಲಿಸಿದಾಗ ತುರ್ತಾಗಿ
ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರತರಾದ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ
ಶ್ರೀಯುತ ಐಕಳ ಹರೀಶ್ ಶೆಟ್ಟಿಯವರು
ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಈ
ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬಂಟರ ಕುಲದೈವ
ಶ್ರೀ ಕಾಂತೇರಿ ಧೂಮಾವತಿ, ಶ್ರೀ ಕೊಡಮಣಿತ್ತಾಯ ಸಮಸ್ತ ಸರ್ವ ಧರ್ಮದೈವಗಳ
ಪೂರ್ಣಾನುಗ್ರಹ ನಿಮಗಿರಲೆಂದು ಧರ್ಮದೈವಗಳಲ್ಲಿ ಪ್ರಾರ್ಥಿಸುವುದಾಗಿ ಬಂಟ ಸಮುದಾಯದ ರಾಜನ್ ದೈವಗಳ
ದರ್ಶನ ಪಾತ್ರಿ / ಮುಕ್ಕಾಲ್ದಿಗಳು ಕತೃಜ್ಞತಾಪೂರ್ವಕವಾಗಿ ಪ್ರಕಟಣೆಯಲ್ಲಿ
ಹೇಳಿದ್ದಾರೆ. (ಸುದ್ದಿ ಕೃಪೆ: ಅಭಿಲಾಷ್ ಚೌಟ)