ಬಂಟ್ಸ್ ನ್ಯೂಸ್, ಮುಂಬಯಿ: ವಸಾಯಿಯ ರುದ್ರ ಶೆಲ್ಟರ್
ಗ್ರೂಫ್ ಮತ್ತು ಫಾರ್ಮ ಹೌಸ್
ಗ್ರೂಫ್ ಆಫ್ ಹೋಟೇಲ್ಸನವರು ವಸಾಯಿ
- ವಿರಾರ್ ಮಹಾನಗರ ಪಾಲಿಕೆಯ ಸಹಾಯದಿಂದ
ಮೇಘಾ ಕಮ್ಯೂನಿಟಿ ಕಿಚನ್ ಮೂಲಕ ದಿನನಿತ್ಯ
25,000 ಜನರಿಗೆ ಅನ್ನದಾನ ಮಾಡುತ್ತಾ ಬಡವರ
ಕಣ್ಣೀರೊರಸುವ ಕಾರ್ಯವನ್ನು ವಸಾಯಿ - ವಿರಾರ್ ಮೇಯರ್
ಪ್ರವೀಣ್ ಸಿ. ಶೆಟ್ಟಿಯವರ ಮಾರ್ಗದರ್ಶನದಲ್ಲಿ
ಉದ್ಯಮಿಗಳಾದ ಪಾಂಡು ಎಲ್ ಶೆಟ್ಟಿ,
ಹರೀಶ್ ಪಾಂಡು ಶೆಟ್ಟಿ, ಭರತ್
ಪಾಂಡು ಶೆಟ್ಟಿ ಮಾಡುತ್ತಿದ್ದಾರೆ.
ಈ ಬಗ್ಗೆ ಶೆಲ್ಟರ್ ಗ್ರೂಫ್
ಹರೀಶ್ ಪಾಂಡು ಶೆಟ್ಟಿ ಮಾತನಾಡಿ,
ನಮ್ಮನ್ನು ಈ ಮಟ್ಟಕ್ಕೆ ತಂದ
ನಮ್ಮ ಪರಿಸರದ ಜನರು ಇಂದು
ಕಷ್ಟದ ಪರಿಸ್ಥಿತಿಯಲ್ಲಿದಾಗ ಅವರಿಗೆ ಸಹಾಯ ನೀಡಬೇಕಾದದ್ದು ನಮ್ಮ
ಆದ್ಯ ಕರ್ತವ್ಯ. ನಮ್ಮ ಈ ಪರಿಸರದಲ್ಲಿ
ಯಾರೂ ಹಸಿವಿನಿಂದ ಇರಬಾರದು. ಹೋಟೇಲು ನೌಕರರು ಕೂಡಾ
ಇಂದು ಅನಾನುಕೂಲತೆಯನ್ನು ಎದುರಿಸುತ್ತಿದ್ದು ಈ ಸಮಯದಲ್ಲಿ ಅವರಿಗೂ
ಸಹಕರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿ ಮಾತನಾಡಿ, ಈ ಸಂದಿಗ್ಧ
ಸಂದರ್ಭದಲ್ಲಿ ಆಶಕ್ತ ಕುಟುಂಬ ಬಂಧುಗಳಿಗೆ
ಅನ್ನದಾನವನ್ನು ನೀಡುತ್ತಿರುವ ಪಾಂಡು ಎಲ್ ಶೆಟ್ಟಿ
ಅವರ ಪರಿವಾರದವರ ಹರೀಶ್ ಪಾಂಡು ಶೆಟ್ಟಿ,
ಭರತ್ ಪಾಂಡು ಶೆಟ್ಟಿ ಮತ್ತು
ಹೋಟೆಲ್ ಸಿಬ್ಬಂದಿಯ ಸೇವಾ ಕಾರ್ಯ ಶ್ಲಾಘನೀಯ
ಎಂದರು.
ಈ ಸಂದರ್ಭ
ಬಂಟರ ಸಂಘ ಮುಂಬಯಿಯ ಅಧ್ಯಕ್ಷ
ಪದ್ಮನಾಭ ಪಯ್ಯಡೆ, ಶೆಲ್ಟರ್ ಗ್ರೂಫ್
ರವಿನಾಥ್ ಶೆಟ್ಟಿ ತೋನ್ಸೆ, ಬಂಟರ
ಸಂಘದ ವಸಾಯಿ - ಡಹಾಣು ಪ್ರಾದೇಶಿಕ
ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಪಕ್ಕಳ, ಸಂಚಾಲಕ
ಶಶಿಧರ್ ಶೆಟ್ಟಿ ಇನ್ನಂಜೆ ಎಂಎಂ
ಹೋಟೆಲಿನ್ ಹರೀಶ್ ಶೆಟ್ಟಿ ಗುರ್ಮೆ
ಮತ್ತಿತರರು ಹಾಗೂ ವಸಯಿ ತಾಲೂಕಿನ
ಸಂಘ-ಸಂಸ್ಥೆಗಳು ವಸಾಯಿ ತಾಲೂಕು ಹೋಟೆಲ್
ಅಸೋಷಿಯೇಶನ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
ಈ ಸೇವೆಯು ಲಾಕ್
ಡೌನ್ ಆದ ದಿನದಿಂದಲೇ ಪ್ರಾರಂಭಗೊಂಡಿದ್ದು
ಸುಮಾರು 50 ಸ್ಥಳಗಳಲ್ಲಿ ವಿತರಣೆ ನಡೆಯುತ್ತಿದೆ. ಬೆಳಗಿನ ಉಪಹಾರ
ಮಧ್ಯಾಹ್ನ ಊಟ ಹೀಗೆ ಪ್ರತಿದಿನ
ಸುಮಾರು 25 ಸಾವಿರ ಜನರಿಗೆ ಆಹಾರ ನೀಡುತ್ತಿದ್ದಾರೆ.
(ವರದಿ/ಚಿತ್ರ : ದಿನೇಶ್ ಕುಲಾಲ್)