BUNTS NEWS, ಮಂಗಳೂರು: ಗುರುಪುರ ಬಂಟರ ಮಾತೃ ಸಂಘದ ಆಯೋಜನೆಯಲ್ಲಿ ಫೆ.2ರಂದು
ವಾಮಂಜೂರು ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮ
“ಬಂಟ ಕಲಾವೀಳ್ಯ 2020” ಸ್ಪರ್ಧೆಯಲ್ಲಿ ಬೆಂಗಳೂರು ಬಂಟರ ಸಂಘದ ತಂಡವು ಪ್ರಥಮ ಸ್ಥಾನದೊಂದಿಗೆ 1
ಲಕ್ಷ ರೂ ಬಹುಮಾನ ಪಡೆದಿದೆ.
ಬೆಂಗಳೂರು ಬಂಟರ
ಸಂಘದ ತಂಡವು ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ವೀರ ಭಗತ್ ಸಿಂಗ್ ಬಗೆಗೆ ನೀಡಿದ ಕಲಾ ಪ್ರದರ್ಶನವು
ಪ್ರಥಮ ಸ್ಥಾನ ಪಡೆಯಿತು. ವೀರ ರಾಣಿ ಚೆನ್ನಮ್ಮ ಕಲಾ ಪ್ರದರ್ಶನ ನೀಡಿದ ಜಪ್ಪು ಬಂಟರ ಸಂಘವು ದ್ವಿತೀಯ ಸ್ಥಾನ – 60,000 ರೂ ಬಹುಮಾನ, ರಾಜ ಅಶೋಕನು ಹಿಂಸೆ
ತ್ಯಜಿಸಿ ಭೌದ್ಧ ಧರ್ಮ ಸ್ವೀಕಾರ ಮಾಡಿದ ಬಗೆಗೆ ಸುರತ್ಕಲ್ ಬಂಟರ ಸಂಘವು ನೀಡಿದ ಕಲಾ ಪ್ರದರ್ಶನಕ್ಕೆ
ತೃತೀಯ ಸ್ಥಾನ – 40,000 ರೂ ಬಹುಮಾನ ಹಾಗೂ ಕಾರ್ಕಳ ಬಂಟರ ಕಲಾ ಪ್ರದರ್ಶನಕ್ಕೆ ನಾಲ್ಕನೆಯ ಸ್ಥಾನದೊಂದಿಗೆ
20,000 ರೂ ಬಹುಮಾನ ಲಭಿಸಿದೆ. ಇದಲ್ಲದೆ ಭಾಗವಹಿಸಿದ ಪ್ರತಿ ತಂಡಕ್ಕೂ 10,000 ರೂ ಗೌರವ ಧನ ನೀಡಲಾಗಿದೆ.
ಕುಕ್ಕೂಂದೂರು ಬಂಟರ
ಸಂಘದ ಅದೀಶ್ ಶೆಟ್ಟಿ ಹಾಗೂ ತುಳುನಾಡ ಬಂಟೆರ್ ಬಂಟರ ಮಕ್ಕಳು ವಿಶೇಷ ಬಹುಮಾನಕ್ಕೆ ಪಾತ್ರರಾದರು. ಇನ್ನುಳಿದಂತೆ
ಉತ್ತಮ ನೃತ್ಯ ಜಪ್ಪು ಬಂಟರ ಸಂಘ, ಉತ್ತಮ ಸಂಗೀತ ಕಾರ್ಕಳ ಬಂಟರ ಸಂಘ, ಉತ್ತಮ ವೇಷಭೂಷಣ ಕಲ್ಲಡ್ಕ ಬಂಟರ
ಸಂಘ, ಉತ್ತಮ ಅಭಿನಯ ಬೆಂಗಳೂರು ಬಂಟರ ಸಂಘ, ಉತ್ತಮ ನಟ ಸುರತ್ಕಲ್ ಬಂಟರ ಸಂಘದ ಅಶೋಕ ಪಾತ್ರಧಾರಿ,
ಉತ್ತಮ ನಟಿ ಜೆಪ್ಪು ಬಂಟರ ಸಂಘದ ಚೆನ್ನಮ್ಮ ಪಾತ್ರಧಾರಿ, ಉತ್ತಮ ನಿರೂಪಣೆ ಜೆಪ್ಪು ಬಂಟರ ಸಂಘದ ಸಾಹಿಲ್
ರೈ ಬಹುಮಾನ ಪಡೆದರು.
ಬಂಟರ ಕಲಾವೀಳ್ಯ
ಸ್ಪರ್ಧೆಯಲ್ಲಿ ವಿವಿಧ ಭಾಗದ ಬಂಟರ ಸಂಘಗಳ ಒಟ್ಟು 7 ತಂಡಗಳು ಭಾಗವಹಿಸಿದ್ದವು. ರಾಷ್ಟ್ರೀಯ ಬಂಟರ
ಭಾವೈಕ್ಯ ಸಂಗಮವೆಂಬಂತೆ ಪ್ರತಿಯೊಂದು ತಂಡವು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಶೌರ್ಯ,
ಸಾಹಸ, ದೇಶಾಭಿಮಾನದ ಕಿಚ್ಚಿನ್ನು ವಿಷಯ ವಸ್ತುವಾಗಿಸಿ ಅಪೂರ್ವವಾಗಿ ಸಾದರ ಪಡಿಸಿದರು. ಪ್ರತಿಯೊಂದು
ತಂಡದ ಕಲಾ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಗುರುಪುರ ಬಂಟರ ಮಾತೃ
ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲು ಗುತ್ತು ಹಾಗೂ ಸಂಘದ ಸರ್ವರೂ ಜೊತೆಗೂಡಿ ವಿಜೇತ ತಂಡಕ್ಕೆ
ಬಹುಮಾನ ಹಸ್ತಾಂತರಿಸಿ ಶುಭ ಹಾರೈಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಜೀವನ್ ರಾಮ್ ಸುಳ್ಯ, ಆಶೋಕ್
ಆಳ್ವಾ, ಮೈಮ್ ರಮೇಶ್ ಹಾಗೂ ಸಮನ್ವಯಕಾರರಾಗಿ ಪದ್ಮನಾಭ ಸಾಲಿಯಾನ್ ಕಾರ್ಯ ನಿರ್ವಹಿಸಿದ್ದರು. ಅಡ್ಯಾರು
ಪುರುಷೋತಮ ಭಂಡಾರಿ, ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.