BUNTS NEWS, ದುರ್ಗಾಪುರ: ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ
ಯುವಕ ಮಂಡಲ ಕಿನ್ಯಾ ದುರ್ಗಾಪುರ
ಇದರ ಸುವರ್ಣ ಮಹೋತ್ಸವ ಸಮಾರಂಭ
ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ
ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು
ಯಕ್ಷಗಾನ, ಸಾಹಿತ್ಯ ಹಾಗೂ ಸಾಮಾಜಿಕ
ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ
ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ
ಮತ್ತು ಕದ್ರಿ ನವನೀತ ಶೆಟ್ಟರನ್ನು
ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಮಂಗಳೂರು
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಸನ್ಮಾನವನ್ನು
ನೆರವೇರಿಸಿದರು. ಶಾಸಕ ಯು.ಟಿ.
ಖಾದರ್ `ಯಕ್ಷದುರ್ಗಾ' ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು. ಶಾರದಾ ವಿದ್ಯಾಲಯದ ಸಂಚಾಲಕ
ಪ್ರೊ.ಎಂ.ಬಿ. ಪುರಾಣಿಕ್
ಅಧ್ಯಕ್ಷತೆ ವಹಿಸಿದ್ದರು.
ತುಳು ಚಲನಚಿತ್ರ ನಟ ಅರವಿಂದ ಬೋಳಾರ್,
ಬಿಜೆಪಿ ನಾಯಕ ಸಂತೋಷ್ ಕುಮಾರ್
ಬೊಳಿಯಾರ್, ಕಿನ್ಯ ಗ್ರಾಮಪಂಚಾಯತ್ ಉಪಾಧ್ಯಕ್ಷ
ಸಿರಾಜುದ್ದೀನ್ ಕಿನ್ಯಾ, ಪ್ರಸಾದ್ ರೈ
ಕಲ್ಲಿಮಾರು ಮುಖ್ಯ ಅತಿಥಿಗಳಾಗಿದ್ದವರು. ಸಂಘದ
ಗೌರವಾಧ್ಯಕ್ಷ ಟಿ. ರಾಮಯ್ಯ ಕಿಲ್ಲೆ,
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ
ಕೆ.ಟಿ. ಸುವರ್ಣ, ಅಧ್ಯಕ್ಷ
ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ
ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ
ರಾಜೇಂದ್ರ ಶೆಟ್ಟಿ ವಂದಿಸಿದರು. `ಪೊಸ
ಕುರಲ್'ನ ವಿದ್ಯಾಧರ ಶೆಟ್ಟಿ
ನಿರೂಪಿಸಿದರು.