ಪ್ರಕಾಶಾಭಿನಂದನೆಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ: ಧನ್ಯೋತ್ಸವದಲ್ಲಿ ಕೆ ಪ್ರಕಾಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರಕಾಶಾಭಿನಂದನೆಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ: ಧನ್ಯೋತ್ಸವದಲ್ಲಿ ಕೆ ಪ್ರಕಾಶ್ ಶೆಟ್ಟಿ

Share This
BUNTS NEWS, ಮಂಗಳೂರು: ಎಂಆರ್ಜಿ ಗ್ರೂಫ್  ಅಧ್ಯಕ್ಷ  ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ  ಹಿನ್ನಲೆಯಲ್ಲಿ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ಜರಗಿದ ಪ್ರಕಾಶಾಭಿನಂದ 60 ಸಂಭ್ರಮದ ಯಶಸ್ಸಿಗೆ  ದುಡಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಮರವೂರಿನ ಗ್ರಾಂಡ್ ಬೇ ಗಾರ್ಡ್ನಲ್ಲಿ ನಡೆಯಿತು.
ಧನ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆ. ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಅಭಿನಂದನೆ ನಾನು ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಸಾರ್ವಜನಿಕರ ಪ್ರೀತಿ, ಅಭಿಮಾನದ ಸನ್ಮಾನದಿಂದ ನನ್ನ  ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಕಾರ್ಯಕ್ರಮದ ಯಶಸ್ಸಿಗೆ  ರಚನೆಗೊಂಡ ಎಲ್ಲಾ ಸಮಿತಿ ಸದಸ್ಯರು ಸ್ವಯಂ ಸೇವಕರಾಗಿ ದುಡಿದಿದ್ದಾರೆ. ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ಉದ್ಯೋಗ  ಹರಸಿ ಬೆಂಗಳೂರಿಗೆ ಹೊರಟಾಗ ಮನಸ್ಸಿನಲ್ಲಿ ಒಂದು ಧೃಢ  ನಿರ್ಧಾರಕ್ಕೆ ಬಂದಿದ್ದೆ. ಜೀವನದಲ್ಲಿ ಒಂದು ಮಟ್ಟ ತಲುಪಿದರೆ ನನ್ನ ತುಳುನಾಡ ಮತ್ತು ಇಲ್ಲಿಯ  ತುಳುವರಿಗೆ ಮತ್ತು ನನ್ನ ಬಂಟ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನಿಸಿದ್ದೆ. ಕಳೆದ ಡಿ. 19ರಂದು ಬಡವರಿಗೆ ಧನ  ಸಹಾಯ ನೀಡುವಾಗ ಕಣ್ಣಲ್ಲಿ ನೀರು ತುಂಬಿ ಬಂತು. ಇಂತಹ ಕಷ್ಟ ಸ್ಥಿತಿಯಲ್ಲಿ ಸಾವಿರರು ಜನರು ನಮ್ಮ ನಡುವೆ ಇದ್ದಾರೆ. ಅಂತವರಿಗೆ ಸಹಾಯ  ಮಾಡಬೇಕೆನಿಸಿತು. ಪ್ರತೀ ವರ್ಷ ಸಮಾಜದಲ್ಲಿರುವ ಕಡು ಬಡತನದಲ್ಲಿರುವ ಜನರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪ್ರಕಾಶಾಭಿನಂದನೆ ಸಮಿತಿಯ  ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ  ಮಾತನಾಡಿ ಪ್ರಕಾಶಾಭಿನಂದನೆ ಸಮಿತಿಯಲ್ಲಿ ನಾನು ಅಧ್ಯಕ್ಷ  ಎನ್ನುವುದು ನೆಪ ಮಾತ್ರ. ಎಲ್ಲರ ಪರಿಶ್ರಮ ಬೆವರಿನ ಹನಿ ಪ್ರಕಾಶಾ ಭಿನಂದನೆಯ ಯಶಸ್ಸಿನಲ್ಲಿದೆ. ಬಂಟ ಸಮುದಾಯದ ಎಲ್ಲರನ್ನೂ ಒಟ್ಟು ಗೂಡಿಸಲು ಇದೊಂದು ವೇದಿಕೆ ಆಯಿತು ಎನ್ನುವ ಸಮಾಧಾನವಿದೆ. ಸಮಾಜಮುಖಿಯಾಗಿ ಮನುಷ್ಯ  ಬದುಕಿರುವಾಗ ಇಂತಹ ಅಭಿನಂದನೆಗಳು ಅವನನ್ನು ಹರಸಿ ಬರುತ್ತದೆ. ಪ್ರಕಾಶಾಭಿನಂದನೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಸಮಿತಿ ಪದಾಧಿಕಾರಿಗಳು ಅಹರ್ನಿಶಿಯಾಗಿ ದುಡಿದಿದ್ದಾರೆ ಅವರಿಗೆಲ್ಲರಿಗೂ ಕೃತಜ್ಞತೆ  ಸಲ್ಲಿಸುವುದಾಗಿ ಅವರು ತಿಳಿಸಿದರು

ಪ್ರಕಾಶಾಭಿನಂದನೆ ಸಮಿತಿಯ ಪ್ರಧಾನ ಸಂಚಾಲಕ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ವಿ ಶೆಟ್ಟಿ  ಪ್ರಸ್ತಾವಿಕ ಮಾತನಾಡಿ, ಪ್ರಕಾಶ್ ಶೆಟ್ಟಿ  ತಾನು ಬದುಕು ಕಟ್ಟುವುದರ ಜತೆಗೆ ಸಮಾಜ ಬಾಂಧವರ ಬದುಕನ್ನೂ ಕಟ್ಟಿದ್ದಾರೆ. ಪ್ರಕಾಶಾಭಿನಂದನೆಯ ಮೂಲಕ ಅವರಿಗೆ ನೀಡಿದ ಸಾರ್ವಜನಿಕ ಸನ್ಮಾನ ಅರ್ಥಪೂರ್ಣವಾದದ್ದು, ಇನ್ನೂ ಮುಂದೆಯೂ ಅವರು ಸಮಾಜ ಪರ ಕೆಲಸವನ್ನು  ಮಾಡುವಂತಾಗಲಿ ಎಂದರು.

ಪ್ರಕಾಶಾಭಿನಂದನೆ ಕಾರ್ಯ ಕ್ರಮದ ಮಾರ್ಗದರ್ಶಕ ಡಾ. ಎಂ ಮೋಹನ್ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ವಿದ್ಯಾ ಸಂಸ್ಥೆಯ ಚೆಯರ್‍ಮೆನ್ ಎ. ಸದಾನಂದ ಶೆಟ್ಟಿ,  ಪ್ರಕಾಶಾಭಿನಂದನೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಸಮಿತಿಯ  ದ.ಕ ಜಿಲ್ಲಾ ಸಂಚಾಲಕ ಎಂ ಸುರೇಶ್ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಸಂಚಾಲಕ ಮನೋಹರ ಎಸ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರೆ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಡಾ. ಎಂ ಮೋಹನ್ ಆಳ್ವರನ್ನು ಗೌರವಿಸಲಾ ಯಿತು. ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ, ಸ್ವಯಂ ಸೇವಕರಿಗೆ ಸ್ಮರಣಿಕೆ ನೀಡಲಾಯಿತು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

Pages