ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್’ಶಿಪ್: ಪೂಜಾ ಶೆಟ್ಟಿಗೆ ಬೆಳ್ಳಿ ಪದಕ - BUNTS NEWS WORLD

ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್’ಶಿಪ್: ಪೂಜಾ ಶೆಟ್ಟಿಗೆ ಬೆಳ್ಳಿ ಪದಕ

Share This
BUNTS NEWS, ಉಡುಪಿ: ವರ್ಲ್ಡ್ ಕರಾಟೆ ಫೆಡರೇಷನ್ ಇತ್ತೀಚೆಗೆ ಜರ್ಮನಿಯ ಬುರ್ಗಕಿರ್ಖೆನ್ನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನಶಿಪನಲ್ಲಿ ಪೂಜಾ ಶೆಟ್ಟಿ ಅವರು ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಇವರು ಈ ಹಿಂದೆ ಇಸ್ತಾಂಬುಲ್ ಓಪನ್ ಹಾಗೂ ಹೆಲ್ಸಿಂಕಿ ಓಪನ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಚಿಲ್ಲಿಯ ಸಾಂತಿಯಾಗೋದಲ್ಲಿ ಹಾಗೂ ಇಸ್ತಾಂಬುಲ್ ನಲ್ಲಿ ನಡೆದ ಢಬ್ಲೂಕೆಎಫ್ ಕರಾಟೆ ಸಿರೀಸ್ - ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ತಂಡದಿಂದ ಭಾಗವಹಿಸಿದ್ದಾರೆ.

ಇದು ಟೋಕಿಯೋ 2020 ಒಲಿಂಪಿಕ್ಸ್ ಕ್ವಾಲಿಫಿಕೇಷನ್ ಟೂರ್ನಮೆಂಟ್ಸಗಳಾಗಿದ್ದು ಇವರು ಪ್ರಸ್ತುತ ಟೋಕಿಯೋ 2020 ಸ್ಟ್ಯಾಂಡ್ ಡಿಂಗ್ 173ವಾಗಿದೆ. ಇವರು ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯೆಯಾಗಿದ್ದು ಜಿಇ ಏವಿಯೇಷನ್ನಲ್ಲಿ ತರ್ಮಲ್ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಪಣಿಯೂರು ಗುತ್ತು ಪ್ರತಿಭಾ ಜಯರಾಮ ಶೆಟ್ಟಿ ಕಟೀಲ್ ದಂಪತಿಯ ಪುತ್ರಿ.

Pages