ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ ಪಾಲ್ಗೊಳ್ಳುವುದು ಮುಖ್ಯ: ಅಜಿತ್ ಕುಮಾರ್ ರೈ ಮಾಲಾಡಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ ಪಾಲ್ಗೊಳ್ಳುವುದು ಮುಖ್ಯ: ಅಜಿತ್ ಕುಮಾರ್ ರೈ ಮಾಲಾಡಿ

Share This

ಬಂಟ ಕಲಾವೀಳ್ಯ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

BUNTS NEWS, ಮಂಗಳೂರು: ಗುರುಪುರ ಬಂಟರ ಮಾತೃ ಸಂಘ(ರಿ) ಇದರ ರಾಷ್ಟ್ರೀಯ ಬಂಟರ ಭಾವೈಕ್ಯ ಸಂಗಮ ಹಾಗೂ ಬಂಟ ಕಲಾ ಪ್ರತಿಭೆ ಬಿಂಬಿಸುವಬಂಟ ಕಲಾವೀಳ್ಯಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಮೃತೋತ್ಸವ ಕಟ್ಟಡ ಸಭಾಂಗಣದಲ್ಲಿ ನಡೆಯಿತು.
ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದ ಒಂದು ಉತ್ತಮ ಕೆಲಸಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಇಂತಹ ಸ್ಪರ್ಧೆಗಳ ಮೂಲಕ ಸಮಾಜ ಬಾಂಧವರ ಒಗ್ಗಟ್ಟು ವ್ಯಕ್ತವಾಗಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ, ಪಾಲ್ಗೊಳ್ಳುವಿಕೆ ಮುಖ್ಯ. ಫಲಿತಾಂಶ ಏನೇ ಇದ್ದರೂ, ಕೆಟ್ಟ ಮಾತುಗಳನ್ನಾಡದೆ ಒಮ್ಮತ, ಒಗ್ಗಟ್ಟು ಪ್ರದರ್ಶಿಸಬೇಕು. ತೀರ್ಪುಗಾರರ ದೃಷ್ಟಿಕೋನ ಭಿನ್ನವಾಗಿದ್ದು, ಅವರು ನೀಡುವ ತೀರ್ಪಿಗೆ ನಾವೆಲ್ಲರೂ ಬದ್ಧರಾಗಬೇಕು ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ ಮಾತನಾಡಿ, ಕಲಾವೀಳ್ಯ ಸ್ಪರ್ಧೆಯು ಗುರುಪುರ ಬಂಟರ ಮಾತೃ ಸಂಘದಿಂದ ಉತ್ತಮವಾಗಿ ಮೂಡಿಬರಲಿದೆ ಎಂಬ ವಿಶ್ವಾಸವಿದೆ. ಇತರ ಬಂಟರ ಸಂಘಗಳಿಗೆ ಇದು ಮಾದರಿ ಕಾರ್ಯಕ್ರಮವಾಗಬೇಕು ಎಂದರು.

ಕಲಾ ತಂಡದ ನಿರ್ದೇಶಕ ಪರಮಾನಂದ ಸಾಲ್ಯಾನ್ ಅನಿಸಿಕೆ ವ್ಯಕ್ತಪಡಿಸುತ್ತ, ಒಂದು ಸಮಾಜದ ಕಲಾವಿದರು ನೀಡುವ ಸಮೂಹ ಸ್ಪರ್ಧೆಯಲ್ಲಿ ತೀರ್ಪು ನೀಡುವುದು ಅತ್ಯಂತ ಕಷ್ಟದ ಕೆಲಸ. ತೀರ್ಪುಗಾರರು ಸಾಕಷ್ಟು ಬೈಗುಳ ಕೇಳಬೇಕಾಗುತ್ತದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲ ತಂಡಗಳ ಪ್ರದರ್ಶನಗಳ ಮೇಲೆ ಸೂಕ್ಷ್ಮ ಹಾಗೂ ಪಾರದರ್ಶಕ ದೃಷ್ಟಿಕೋನ ಬೀರಬೇಕಾಗುತ್ತದೆ. ಸ್ಪರ್ಧಾ ತಂಡಗಳಿಂದ ಸಣ್ಣ ತಪ್ಪುಗಳಿಗೂ ಆಸ್ಪದ ಇರಬಾರದು. ಆವಾಗಲೇ ತೀರ್ಪುಗಾರರ ತೀರ್ಪು ಎಷ್ಟು ಸಮಂಜಸ ಎಂಬುದು ಗೊತ್ತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ, ತಂಡಗಳು ಮುಂಬೈ ಅಥವಾ ದುಬೈಯಿಂದ ಬರಲಿ, ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡುತ್ತೇವೆ. ತಂಡಗಳು ಆಯ್ಕೆ ಮಾಡುವ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಪುಗಾರರಿಗೆ ಮೊದಲೇ ಮನದಟ್ಟು ಮಾಡಿಕೊಡುತ್ತೇವೆ. ಆದ್ದರಿಂದ ತಂಡಗಳು ಆಯ್ಕೆ ಮಾಡುವ ವಿಷಯದಲ್ಲಿ ತೀರ್ಪುಗಾರರಲ್ಲಿ ಯಾವುದೇ ಗೊಂದಲ ಇರಲಾರದು ಎಂದರು.

ವೇದಿಕೆಯಲ್ಲಿ ರವೀಂದ್ರನಾಥ ಮಾರ್ಲ ಪೆರ್ಮಂಕಿ, ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ಶೆಟ್ಟಿ 'ವಿಜೇತ', ಚಂದ್ರಹಾಸ ಶೆಟ್ಟಿ ನಾರಳ ಉಪಸ್ಥಿತರಿದ್ದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಬಂಟ ಸಮಾಜದ ಕೊಡುಗೈ ದಾನಿ ಸುಬ್ಬಯ್ಯ ಶೆಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುರತ್ಕಲ್ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಸಹಿತ ಬೇರೆ ಬೇರೆ ಸಂಘದ ಪದಾಧಿಕಾರಿಗಳು ತಮ್ಮ ಅನಿಸಿಕೆ ಮತ್ತು ಸಲಹೆ ನೀಡಿದರು. ಸಂಘದ ಪ್ರಧಾನ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಕ ಮಾತನಾಡಿದರು. ರಾಜಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಜಯರಾಮ ಶೆಟ್ಟಿ ಉಳಾಯಿಬೆಟ್ಟು ಮತ್ತು ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ನಿರೂಪಿಸಿದರು. ಸಂಘದ ಯುವ ವಿಭಾಗದ ಕಾರ್ಯದರ್ಶಿ ಮನೋಜ್ ರೈ ಶೆಡ್ಡೆ ವಂದಿಸಿದರು.

ಕಲಾವೀಳ್ಯ ಮಾಹಿತಿ: ಬಂಟ ಕಲಾವೀಳ್ಯ-2020 ಸ್ಪರ್ಧಾ ಕಾರ್ಯಕ್ರಮ ಫೆ. 2ರಂದು ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಜರುಗಲಿದೆ. ವಿಜೇತ ಪ್ರಥಮ ತಂಡಕ್ಕೆ ಒಂದು ಲಕ್ಷ ರೂ, ದ್ವಿತೀಯ 60 ಸಾವಿರ ರೂ, ತೃತೀಯ 40 ಸಾವಿರ ರೂ, ಚತುರ್ಥ ತಂಡಕ್ಕೆ 20 ಸಾವಿರ ರೂ ಬಹುಮಾನವಿದೆ. ವಿಜೇತ ನಾಲ್ಕು ತಂಡ ಹೊರತುಪಡಿಸಿ ಉಳಿದೆಲ್ಲ ತಂಡಗಳಿಗೆ ತಲಾ 10,000 ರೂ ಪ್ರೋತ್ಸಾಹಕರ ಬಹುಮಾನವಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಇದೆ. ಮುಂಬೈ ಉದ್ಯಮಿ ಸೀತಾರಾಮ ಜಾಣು ಶೆಟ್ಟಿಯವರ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯಕ್ರಮ ಮುಂದುವರಿಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

Pages