ಜನರ ಕಷ್ಟಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸ್ಪಂದನೆ ಶ್ಲಾಘನೀಯ : ಕುಸುಮೋದರ ಡಿ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜನರ ಕಷ್ಟಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸ್ಪಂದನೆ ಶ್ಲಾಘನೀಯ : ಕುಸುಮೋದರ ಡಿ ಶೆಟ್ಟಿ

Share This
BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದು ಸಮಾಜ ಬಾಂಧವರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸಿ ಕೆಲಸ ಮಾಡುವ ಕಾರ್ಯ ಶ್ಲಾಘನೀಯ ಎಂದು ಭವಾನಿ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕುಸುಮೋದರ ಡಿ ಶೆಟ್ಟಿ ತಿಳಿಸಿದರು.
ಅವರು ಬಂಟ್ಸ್ ಹಾಸ್ಟೆಲ್ನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಫಲಾನುಭವಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದರು. ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ಹೀಗೆ ಬೇರೆ ಬೇರೆ ಕಷ್ಟಗಳಿಗೆ ನೆರವು ನೀಡಿ ಎಂದು ಅರ್ಜಿ ಸಲ್ಲಿಸುವ ಫಲಾನುಭವಿಗಳು ಯಾವುದೇ ಅಂಜಿಕೆ-ಅಳುಕು ಇಲ್ಲದೆ ಸಹಾಯಧನವನ್ನು ಪಡೆದುಕೊಳ್ಳಿಶ್ರೀಮಂತಿಕೆ ಯಾವತ್ತೂ ಸ್ಥಿರ ಇಲ್ಲ. ಅದೇ ರೀತಿ ಬಡತನ ಕೂಡ ಶಾಶ್ವತ ವಲ್ಲ. ಆತ್ಮಸ್ಥೈರ್ಯದಿಂದ ಜೀವನ ಸಾಗಿಸಿದಾಗ ಬಡತನ ದೂರವಾಗುತ್ತದೆ ಎಂದು ಕುಸುಮೋದರ ಡಿ ಶೆಟ್ಟಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ದಾನಿಗಳ ನೆರವಿನಿಂದ 112 ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ. ಶ್ರೀಮಂತರ ಸಂಪತ್ತಿನಲ್ಲಿ ಒಂದಂಶ ಬಡತನದಲ್ಲಿರುವ ಕುಟುಂಬಗಳಿಗೆ ವಿನಿಯೋಗವಾಗಲಿಈಗಾಗಲೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ಫಲಾನುಭವಿಗಳಿಗೆ 1 ಕೋಟಿ 80 ಲಕ್ಷಕ್ಕೂ ಮಿಕ್ಕಿದ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾದ ಬಳಿಕ  ಒಕ್ಕೂಟಕ್ಕೆ ಹೊಸರೂಪ ನೀಡಿದರು. ಪ್ರತೀ ತಿಂಗಳಲ್ಲಿ ಎರಡು ಬಾರಿ  ಫಲಾನುಭವಿಗಳಿಗೆ ನೆರವನ್ನು ನೀಡುತ್ತಾ ಬಂದಿರುತ್ತದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜದ ಕೈಗನ್ನಡಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಪ್ರತೀ ಬಂಟರ ಸಂಘಗಳಿಗೂ ಒಕ್ಕೂಟ ಶೇಕಡಾ 25ರಷ್ಟು ಸಹಾಯಧನ ವನ್ನು ನೀಡುತ್ತಾ ಬಂದಿರುತ್ತದೆ. ಕೆಳಸ್ತರದಲ್ಲಿರುವ ಬಂಟರಿಗೆ ಧೈರ್ಯ ತುಂಬಿ ಅವರ ಬದುಕಿಗೆ ಆಸರೆಯಾಗುವುದೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶಯವಾಗಿದೆ ಎಂದರು.

ಮದುವೆಗೆ ನೆರವು: ಸ್ವಾತಿ ಕೊಡ್ಲಾಡಿ, ಬೇಬಿ ಶೆಟ್ಟಿ ಬೋಳಿಯಾರ್, ಭವ್ಯಾ ಶೆಟ್ಟಿ ನೆಟ್ಟಳಿಗೆ, ಸುಧಾ ಕುಮಾರಿ  ಭಜಗೋಳಿ, ದಿವ್ಯಾ ರೈ ಪುತ್ತೂರು, ವಿನುತ ಆರ್ ಶೆಟ್ಟಿ ಪಡುಬಿದ್ರೆ, ರಕ್ಷಿತಾ ರೈ ಪುತ್ತೂರು, ಶೋಭಾ ಶೆಟ್ಟಿ ಕಿನ್ಯಾ, ಸ್ವಾತಿ ಎಣ್ಮಕಜೆ, ಗುಡ್ಡಪ್ಪ ರೈ ಪುತ್ತೂರು, ಸರಸ್ವತಿ ಒಳಮೊಗರು, ತುಕರಾಮ ಶೆಟ್ಟಿ ತೆಂಕ ಎಡಪದವು, ಪೂಜಾ ಶೆಟ್ಟಿ ಮುಳಿಹಿತ್ಲು ಸರೋಜಿನಿ ಶೆಟ್ಟಿ ಬಳ್ಕುಂಜೆ, ರಮ್ಯಾ ಶೆಟ್ಟಿ ಕುಂದಾಪುರ, ಸಮೀಕ್ಷಾ ಹರೇಕಳ, ರೇಖಾ ಶೆಟ್ಟಿ ಕೊಳ್ನಾಡ್, ಭವ್ಯಾ ಶೆಟ್ಟಿ ಕುಳಾಯಿ, ಜಲಜಾ ಕಟಪಾಡಿ, ಅರ್ಪಿತಾ ಬೆಳ್ತಂಗಡಿ ಮೊದಲಾದವರಿಗೆ ಮದುವೆಗೆ ನೆರವು ನೀಡಲಾಯಿತು.

ವೈದ್ಯಕೀಯ ನೆರವು: ರಘುರಾಮ ಪೂಂಜ ಸರಪಾಡಿ, ವನಿತಾ ಶೆಟ್ಟಿ ಕರ್ನಿರೆ, ಯೋಗಿನಿ ಶೆಟ್ಟಿ ತೆಂಕ ಎಡಪದವು, ಜಯರಾಮ ಭಂಡಾರಿ ಮಂಜೇಶ್ವರ, ನಾರಾಯಣ ರೈ ಕಾಸರಗೋಡು, ಕೃಷ್ಣಪ್ರಸಾದ್ ರೈ ಕಾಸರಗೋಡು, ಕಲಾವತಿ ಮಂಜೇಶ್ವರ, ಪೂರ್ಣಿಮಾ ಶೆಟ್ಟಿ  ಕೆಂಜಾರು, ರಮೇಶ್ ಬಾಬು ಶೆಟ್ಟಿ ಉಡುಪಿ, ಸುರೇಶ್ ಶೆಟ್ಟಿ ಕುಂದಾಪುರ, ರಜನಿ ಶೆಟ್ಟಿ ಸಾಲೆತ್ತೂರು, ರಮೇಶ್ ರೈ ನೇರಳಕಟ್ಟೆ, ಕೃಷ್ಣಪ್ಪ ರೈ ವಿಟ್ಲ, ಚಿಕ್ಕಮ್ಮ ಶೆಟ್ಟಿ ಕುಂದಾಪುರ, ಮನೋಜ್ ಕುಮಾರ್ ಶೆಟ್ಟಿ ಉಡುಪಿ, ಪ್ರಮೋದ್ ಕುಮಾರ್ ರೈ ಪುತ್ತೂರು, ಬಾಲಕೃಷ್ಣ ರೈ ಪುತ್ತೂರು, ಲೀಲಾವತಿ  ಶೆಟ್ಟಿ ಕೋಟೆಕಾರ್, ಸುಂದರ ಶೆಟ್ಟಿ ನಿಟ್ಟೂರು ಮೊದಲಾದವರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಅದೇ ರೀತಿ ಮನೆ ರಿಪೇರಿ ಮತ್ತು ಮನೆ ಕಟ್ಟಲು ಪಾರ್ವತಿ ಶೆಟ್ಟಿ ಪೆರ್ಡೂರು, ಗಿರಿಜಾ ಶೆಟ್ಟಿ ಪರ್ಡೂರು, ನಾಗರತ್ನ ಕುಂದಾಪುರ, ಬೇಬಿ ಜಗನ್ನಾಥ ಶೆಟ್ಟಿಸರಿತಾ ಕೆ. ಕೇಪು, ಪ್ರೇಮಾ ಶೆಟ್ಟಿ ಪೆರ್ಡೂರು, ಭಜಂಗ ಶೆಟ್ಟಿ, ರಮೇಶ್ ಬೆಳವಾಯಿ ಮೊದಲಾದವರಿಗೆ ಸಹಾಯಧನ ನೀಡಲಾಯಿತು.

ಸಮಾರಂಭದಲ್ಲಿ ಬೆಂಗಳೂರಿನಲ್ಲಿ ಜರಗಿದ ದೇಹದಾಡ್ಯ ಸ್ಪರ್ಧೆಯಲ್ಲಿ  ಮಿಸ್ಟರ್ ಇಂಡಿಯಾ ಪ್ರಶಸ್ತಿ ಪಡೆದು ಈಗ ಮಿಸ್ಟರ್ ಏಷ್ಯಾ ಸ್ಫರ್ದೆಗೆ ಆಯ್ಕೆಯಾಗಿರುವ ಆದರ್ಶ ಶೆಟ್ಟಿ ನಿಟ್ಟೂರು ಉಡುಪಿ ಅವರಿಗೆ ನಗದು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ  ಸತೀಶ ಅಡಪ ಸಂಕಬೈಲ್,  ಕಾರ್ಯಕಾರಿ ಸಮಿತಿ ಸದಸ್ಯ ಕೊಲ್ಲಾಡಿ ಬಾಲಕೃಷ್ಣ ರೈ, ರಾಧಾಕೃಷ್ಣ ಶೆಟ್ಟಿ ವಿಟ್ಲ ಪಡ್ನೂರು, ಜಯರಾಮ ಸಾಂತ ಜಗನ್ನಾಥ ಶೆಟ್ಟಿ ಬಾಳ, ಚಂದ್ರ ಶೇಖರ ಹೆಗ್ಡೆ ಶಾನಾಡಿ, ಸುರೇಶ್ ಶೆಟ್ಟಿ ಸೂರಿಂಜೆ, ಹೇಮನಾಥ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಉಪಸ್ಥಿತರಿದ್ದರು. ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತನಾಡಿದರು. ಸತೀಶ್ ಅಡಪ ಸಂಕಬೈಲ್ ಸ್ವಾಗತಿಸಿ ನಿರ್ವಹಿಸಿದರು.

Pages