BUNTS NEWS, ಮಂಗಳೂರು:
ಬಂಟರ ಯಾನೆ ನಾಡವರ ಮಾತೃಸಂಘ(ರಿ) ಮಂಗಳೂರು ತಾಲೂಕು
ಸಮಿತಿ ಆಶ್ರಯದಲ್ಲಿ 2018-19ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ
ಪರೀಕ್ಷೆಯಲ್ಲಿ ಅತ್ಯಧಿಕ ಅಂಕ
ಗಳಿಸಿದ ವಿದ್ಯಾರ್ಥಿಗಳಿಗೆ
ಆರ್ಥಿಕ ಪ್ರೋತ್ಸಾಹ ಧನ ವಿತರಣೆ ಮತ್ತು
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ಸ್ ಹಾಸ್ಟೆಲ್
ಅಮೃತೋತ್ಸವ ಕಟ್ಟಡದ
ಸಭಾ ಭವನದಲ್ಲಿ ಜರಗಿತು.
ಮಂಗಳೂರು
ಗುರದೇವ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಸಿಎ ರಾಮ ಮೋಹನ
ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಿಗೆ
ವಿದ್ಯಾರ್ಜನೆ ಮಾಡಲು ಪ್ರೇರಣೆಯಾಗಲಿದೆ.
ವಿದ್ಯೆ ಕಲಿತು ವಿದ್ಯಾವಂತರಾದರೆ
ಎಲ್ಲೂ ಬದುಕು ಸಾಗಿಸಬಹುದು ಎಂದು ಸಿಎ
ರಾಮ ಮೋಹನ್ ರೈ ತಿಳಿಸಿದರು.
ದ್ವಿತೀಯ
ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ
ಶ್ರವಣ್ ಶೆಟ್ಟಿ, ಪೂರ್ವಿಶ್ ರೈ,
ಕಾರ್ತಿಕ್ ಶೆಟ್ಟಿ ಹಾಗೂ ಎಸ್ಎಸ್ಎಲ್ಸಿಯಲ್ಲಿ
ಅತ್ಯಧಿಕ ಅಂಕ ಗಳಿಸಿದ ರಾಜೇಶ್ವರಿ ಜೆ
ಶೆಟ್ಟಿ, ಸಹಜ ಆಳ್ವ, ಪ್ರೇರಣಾ ಶೆಟ್ಟಿ,
ಪ್ರತೀತ ಪಿ ಶೆಟ್ಟಿ, ದೇವಿಕಾ
ಸಂತೋಷ್ ರೈ, ಶಿವಾನಿ ರೈ, ವೈಷ್ಣವಿ ಜೆ
ಶೆಟ್ಟಿ, ಅನುಶ್ರೀ ರೈ, ಆಶಯ್
ಶೆಟ್ಟಿ, ನಿಖಿಲ್ ಶೆಟ್ಟಿ, ಪ್ರಖ್ಯಾತ್
ವೈ. ಬಿ ಹಾಗೂ 45 ಮಂದಿ ಆರ್ಥಿಕವಾಗಿ
ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ ಧನ
ವಿತರಿಸಲಾಯಿತು.
ಸಮಾರಂಭದ
ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ
ಅಧ್ಯಕ್ಷ ಅಜಿತ್ ರೈ
ಮಾಲಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟರ ಮಾತೃ ಸಂಘದ
ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಕೋಶಾಧಿಕಾರಿ
ರವೀಂದ್ರನಾಥ ಎಸ್
ಶೆಟ್ಟಿ, ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಮಿತಿಯ
ಸಂಚಾಲಕ ಕೆ. ಉಮೇಶ್ ರೈ
ವಂದಿಸಿದರು. ಪ್ರತಿಭಾ ಪುರಸ್ಕಾರ ಸಮಿತಿಯ
ಸಂಚಾಲಕ ಗೋಪಾಲಕೃಷ್ಣ ಶೆಟ್ಟಿ ಕೆ. ಎಮ್
ಕಾರ್ಯಕ್ರಮ ನಿರ್ವಹಿಸಿದರು.