ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ಸ್ಥಾನಮಾನ ನೀಡಿ, ಜಾತಿಗೆ ಸೀಮಿತಗೊಳಿಸಿ ಮಂತ್ರಿ ಮಾಡಬೇಡಿ : ಹಾಲಾಡಿ ಶ್ರೀನಿವಾಸ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ಸ್ಥಾನಮಾನ ನೀಡಿ, ಜಾತಿಗೆ ಸೀಮಿತಗೊಳಿಸಿ ಮಂತ್ರಿ ಮಾಡಬೇಡಿ : ಹಾಲಾಡಿ ಶ್ರೀನಿವಾಸ ಶೆಟ್ಟಿ

Share This
BUNTS NEWS, ಮಂಗಳೂರುಜಾತಿಯ ಲೆಕ್ಕಚಾರದಲ್ಲಿ ಹಾಗೂ ಜಾತಿಯನ್ನೇ ಅರ್ಹತೆಯ ಮಾನದಂಡವಾಗಿರಿಸಿ ನನಗೆ ಮಂತ್ರಿ ಸ್ಥಾನ ನೀಡಬೇಡಿಒಂದು ವೇಳೆ ಮಂತ್ರಿ ಸ್ಥಾನ ನೀಡುವುದಾದರೆ ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ಸ್ಥಾನಮಾನ ನೀಡಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕೇವಲ ಜಾತಿಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ನನಗೆ ಮಂತ್ರಿ ಪದವಿ ಕೊಡಬೇಡಿ,  ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಪರಿಗಣಿಸಿ, ನನಗೆ ಜಾತಿ ಹೊರತು ಪಡಿಸಿ ಇರುವ ಅರ್ಹತೆಯನ್ನು ಪರಿಗಣಿಸಿ,  ಸಾಮಾಜಿಕ ನ್ಯಾಯಕ್ಕಾಗಿ ದುಡಿದವನು ನಾನು,  ನನ್ನ ಅರ್ಹತೆಯನ್ನಷ್ಟೇ ಪರಿಗಣಿಸಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನವಿ ಮಾಡಿದರು.

ನನ್ನ ಪರವಾಗಿ ಬಂಟ್ಸ್ ಸಂಘದವರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿರುವುದಕ್ಕೆ ನನ್ನ ಸಹಮತವಿಲ್ಲ, ನಾನು ಎಲ್ಲಾ ಜಾತಿಯವರ, ಎಲ್ಲಾ ಧರ್ಮದವರ ಪ್ರತಿನಿಧಿ. ನಾನು ಯಾವತ್ತೂ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಂಡವನಲ್ಲ, ಯಾವ ಸಂಘಟನೆಯವರು ನನ್ನ ಪರವಾಗಿ ಲಾಭಿ ಮಾಡಬೇಕೆಂದು ನಾನು ಬಯಸುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದರು.

ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷವನ್ನು ಸಂಘಟಿಸಿದ್ದೇನೆ, ಪ್ರತಿ ಚುನಾವಣೆಯಲ್ಲಿಯೂ ನನ್ನ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮಿಸಿದ್ದೇನೆ. ಒಂದು ಅವಧಿಯಲ್ಲಿ ಪಕ್ಷೇತರನಾಗಿ ಶಾಸಕನಾಗಿದ್ದಾಗಲೂ ಬಿಜೆಪಿ ಸಂಘಟನೆಗಾಗಿ ದುಡಿದ್ದೇನೆ.  ಪಕ್ಷೇತರನಾಗಿದ್ದ ಅವಧಿಯಲ್ಲೂ ವಿಧಾನ ಪರಿಷತ್ ಸದಸ್ಯರ ಆಯ್ಕೆ, ರಾಜ್ಯಸಭಾ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಯಾವುದೇ ದುಡ್ಡು ಪಡೆಯದೆ ಬಿಜೆಪಿ ಅಭ್ಯರ್ಥಿಗಳಿಗನೇ ಮತ ಹಾಕಿದ್ದೇನೆ. ಬೇರೆ ಪಕ್ಷಗಳಿಂದ ಆಫರ್ ಬಂದಾಗ ಪಕ್ಷಾಂತರ ಮಾಡಿಲ್ಲ, ಆಮಿಷ ಬಂದಾಗ ದುಡ್ಡು ತೆಗೊಂಡಿಲ್ಲ. ನನ್ನ ಅರ್ಹತೆಗಳು ಮಂತ್ರಿ ಮಾಡಲು ಸಾಕಾಗುವುದಿಲ್ಲವೇ , ನನಗೆ ಮಂತ್ರಿಯಾಗುವ ಯೋಗ ಭಾಗ್ಯ ಇಲ್ಲವೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.

Pages