BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟವು 20 ಮಂದಿ ಫಲಾನುಭವಿಗಳಿಗೆ (ಮದುವೆಗೆ-01,
ವೈದ್ಯಕೀಯ ಚಿಕಿತ್ಸೆಗೆ-05, ವಸತಿ ಯೊಜನೆಗೆ – 13 ಹಾಗೂ
ಇತರೆ ಯೋಜನೆಗೆ-01) ಆರ್ಥಿಕ ಸಹಾಯಧನದ ಚೆಕ್’ನ್ನು ಜೂ.3ರಂದು
ವಿತರಿಸಿತು.
ಒಕ್ಕೂಟದ
ಆಡಳಿತ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶಶಿಧರ್
ಶೆಟ್ಟಿ ಬಂಟ್ಸ್ ಓಮನ್, ಒಕ್ಕೂಟದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,
ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ,
ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್
ಇವರು ವಿತರಿಸಿದರು.
ಶಶಿಧರ್
ಶೆಟ್ಟಿ (ಬಂಟ್ಸ್ ಓಮನ್) ಅವರನ್ನು
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ
ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಶಶಿಧರ್ ಶೆಟ್ಟಿ ಮಾತನಾಡಿ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್
ಶೆಟ್ಟಿಯವರ ಮುಂದಾಳತ್ವದಲ್ಲಿ ಸಾಮಾಜಿಕ ಕಾರ್ಯಕ್ರಮ ಆರ್ಥಿಕವಾಗಿ
ಹಿಂದುಳಿದ ಸಮಾಜಬಾಂಧವರಿಗೆ ನೆರವು ನೀಡಿದ ಬಗ್ಗೆ
ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ತಮ್ಮ ಸಹಕಾರ
ಮತ್ತು ಬೆಂಬಲ ಸದಾ ನೀಡುವುದಾಗಿ
ಭರವಸೆ ನೀಡಿದರು.
ಈ ಸಂದರ್ಭ ವಿವಿಧ ಬಂಟರ
ಸಂಘಗಳ ಅಧ್ಯಕ್ಷರು, ಪದಾದಿಕಾರಿಗಳು, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿವರ್ಗದವರು,
ಫಲಾನುಭವಿಗಳು, ಫಲಾನುಭವಿಗಳ ಪೋಷಕರು, ಸಂಬಂಧಿಕರು ಹಾಗೂ
ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ
ಸ್ವಾಗತಿಸಿ, ಜೊತೆ-ಕಾರ್ಯದರ್ಶಿ ಸತೀಶ್
ಅಡಪ್ಪ ಸಂಕಬೈಲ್ ಇವರ ವಂದಿಸಿದರು.