ದುಬಾಯಿಯಲ್ಲಿ ಅದ್ಧೂರಿಯಾಗಿ ನಡೆದ ಯು.ಎ.ಇ. ಬಂಟರ 45ನೇ ವಾರ್ಷಿಕ ಸ್ನೇಹಮಿಲನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದುಬಾಯಿಯಲ್ಲಿ ಅದ್ಧೂರಿಯಾಗಿ ನಡೆದ ಯು.ಎ.ಇ. ಬಂಟರ 45ನೇ ವಾರ್ಷಿಕ ಸ್ನೇಹಮಿಲನ

Share This
BUNTS NEWS, ಯುಎಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು... ಬಂಟರ ಸಂಘಟನೆಯ 45ನೇ ವಾರ್ಷಿಕ ಸ್ನೇಹಮಿಲನ ಹಾಗೂಬಂಟ ವಿಭೂಷಣ ಪ್ರಶಸ್ತಿಪ್ರದಾನ ಸಮಾರಂಭವು ದುಬಾಯಿ ಇಂಡಿಯನ್ ಸ್ಕೂಲ್, ಶೇಖ್ ರಾಶೀದ್ ಸಭಾಂಗಣದಲ್ಲಿ ಅತ್ಯಂತ ವರ್ಣ ರಂಜಿತವಾಗಿ ನೆರವೇರಿತು. 
ಯು... ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಸಾಂಪ್ರದಾಯಿಕವಾಗಿ ಸರ್ವವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯು... ಬಂಟ್ಸ್ ಮಹಾ ಪೋಷಕರಾದ ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು ಹಾಗೂ ಅಲ್ ಕಾರ್ಗೊ ಲಾಜಿಸ್ಟಿಕ್ ಗ್ಲೋಬಲ್ ಸಿ... ಮತ್ತು ವ್ಯವಸ್ಥಾಪಕ ನಿರ್ದೇಶಕರು ಡಾ| ಶಶಿಕಿರಣ್ ಶೆಟ್ಟಿ, ಕರ್ನಾಟಕ ಚಂದನವನದ ಪ್ರಖ್ಯಾತ ನಿರ್ದೇಶಕರು, ನಿರ್ಮಾಪಕರು, ಸಾಹಿತಿ ಮತ್ತು ನಾಯಕ ನಟ ರಿಶಬ್ ಶೆಟ್ಟಿ,ಬಂಟ ವಿಭೂಷಣ ಪ್ರಶಸ್ತಿಪುರಸ್ಕೃತ ಡಾ ಇಂದಿರಾ ಹೆಗ್ಡೆ, ಎನ್. ಎಂ. ಸಿ. ಟ್ರೇಡಿಂಗ್ ಸಿ... ನಿರ್ಮನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಅದಿಕೃತ ಚಾಲನೆ ನೀಡಲಾಯಿತು.

ಶ್ರೀಮತಿ ಸಂಗೀತ ಶೆಟ್ಟಿಯವರ ತ್ಂಡದಿಂದ ಪ್ರಾರ್ಥನೆ, ಸುಶ್ಮಾ ಶೆಟ್ಟಿ ನಿರ್ದೇಶನದಲ್ಲಿ ಮಕ್ಕಳ ಸ್ವಾಗತ ನೃತ್ಯ ಹಾಗೂ ನಿತ್ಯಾನಂದ ಶೆಟ್ಟಿಯವರಿಂದ ಸ್ವಾಗತದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿನುತಾ ರೈ ನಿರ್ದೇಶನದ ಬಂಟ್ಸ್ ರಾಕರ್,  ಕೀರ್ತಿ ಶೆಟ್ಟಿ ನಿರ್ದೇಶನದ ಜಂಪಿನ್ ಜಿಲ್ಲ್ಸ್,  ರಮ್ಯಾ ಶೆಟ್ಟಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 2,  ವಿಧ್ಯಾ ಶೆಟ್ಟಿ ನಿರ್ದೇಶನದ ಚುರುಕ್ ಪಾರ್ಟಿ, ದೇವಿಕಾ ಮಲ್ಲಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 1, ಪ್ರಿಯ ಶೆಟ್ಟಿ ನಿರ್ದೇಶನದ ಸಮರ್ಪಣ್ ಎಲ್ಲಾ ತಂಡ ಮಕ್ಕಳಿಂದ ಆಕರ್ಷಕ ಸಮೂಹ ನೃತ್ಯ ಸರ್ವರ ಮನ ಸೆಳೆಯಿತುಪ್ರಖ್ಯಾತ ಯುವ ಗಾಯಕ ನಿಶಾನ್ ರೈ ಯವರ ಸುಮಧುರ ಕಂಠಸಿರಿಯಲ್ಲಿ ಸುಶ್ರಾವ್ಯ ಗಾಯನ ಕಾರ್ಯಕ್ರಮ ಸರ್ವ ಮೆಚ್ಚುಗೆಯನ್ನು ಪಡೆಯಿತು. ನಿತೇಶ್ ಶೆಟ್ಟಿ ನಿರೂಪಿಸಿರು.

ಶ್ರೀ ಸರ್ವೋತ್ತಮ ಶೆಟ್ಟಿ ಯವರು 2018-19ನೇ ಸಾಲಿನ ಯು... ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯ ದಂಪತಿಗಳನ್ನು ವೇದಿಕೆಗೆ ಬರಮಾಡಿಕೊಂಡು ವಿವಿದ ಕಾರ್ಯಕ್ರಮಗಳ ಮೂಲಕ ತಮ್ಮ ವಿಸ್ವಾರ್ಥ ಸೇವೆಯನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. 2019-20 ನೇ ಸಾಲಿನ ನೂತನ ಸಮಿತಿಯವರನ್ನು ವೇದಿಕೆಗೆ ಬರಮಾಡಿಕೊಂಡು ನೂತನ ಸಾಲಿನ ಜವಬ್ಧಾರಿಯನ್ನು ನೀಡಲಾಯಿತು. ಯು... ಬಂಟ್ಸ್ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ಪ್ರೋತ್ಸಾಹ, ಪ್ರಾಯೊಜಕತ್ವವನ್ನು ನೀಡಿರುವ ಉಧ್ಯಮಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ಲಾಟಿನಂ ಪ್ರಾಯೋಜಕರು ನಿಹಾಲ್ ಅಬ್ದುಲ್ಲಾ- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಶ್ರೇಯಾ ಶೆಟ್ಟಿ - ಅಲ್ಫಾ ಗ್ಳೊಬಲ್ ಕನೆಕ್ಟ್, ಸುದೇಶ್ ಗಿರಿಯನ್ - ಸಿ... ಎಕ್ಸ್ ಪ್ರೆಸ್ಸ್ ಮನಿ -ಗ್ಲೋಬಲ್ ಟ್ರಾನ್ಸ್ ಫರ್, ವಿನೋದ್ ನಂಬಿಯಾರ್- ಯು... ಎಕ್ಸೆಂಜ್.

ಗೋಲ್ಡ್ ಸ್ಪಾನರ್ಸ್ : ರವಿ ರೈ ಎನ್.ಎಂ.ಸಿ.ಗ್ರೂಪ್, ದಿವಾಕರ್ ಶೆಟ್ಟಿ- ರಾಯಲ್ ವಿಶನ್ ಗ್ಲಾಸ್, ಸತೀಶ್ ಹೆಗ್ಡೆ ವೈಟ್ ಫೀಲ್ದ್ ಜೆನರಲ್ ಟ್ರಾನ್ಸ್ಪೋರ್ಟ್ ಅಬುಧಾಬಿ, ರವಿ ಶೆಟ್ಟಿ ಸ್ಟ್ರಕ್ಟನ್ ಕನ್ಸ್ಟ್ರಕ್ಶನ್, ಕಾರ್ತೀಕೆಯನ್-ಯೂನಿಯನ್ ಇನ್ಸೂರೆನ್ಸ್ ಕಂಪೆನಿ.
ಸಿಲ್ವರ್ ಸ್ಪಾನ್ಸರ್ಸ್ : ಶ್ರೀಯುತರುಗಳಾದ ದಿನೇಶ್ ಶೆಟ್ಟಿ - ಡ್ಯೂಮೆಕ್ ಇಂಜಿನಿಯರಿಂಗ್, ಪ್ರತಾಪ್ ಕಿರಣ್ ಶೆಟ್ಟಿ- ರಿಯಾ ಫೈನಾನ್ಸಿಯಲ್ ಸರ್ವಿಸಸ್, ಸ್ತೈರ್ಯ ಕರುಣಾಕರ್ ಎಸ್. ಫ್ಯೂಚರ್ ಹೆವಿ ಎಕ್ಯೂಪ್ಮೆಂಟ್ ದುಬಾಯಿ, ದೀವೆಶ್ ಆಳ್ವ- ವುಡ್ ಲ್ಯಾಂಡ್ಸ್ ರೆಸ್ಟೊರೆಂಟ್, ರತ್ನಾಕರ್ ಶೆಟ್ಟಿ- ಮಹೆಂದ್ರ ಅಶೆರ್ ಅಂಡ್ ಕಂಪೆನಿ, ಸುಂದರ್ ಶೆಟ್ಟಿ ನಿಹಾಲ್ ರೆಸ್ಟೊರೆಂಟ್, ಪ್ರೇಮನಾಥ್ ಶೆಟ್ಟಿ - ಹೀಟ್ ಶೀಲ್ಡ್, ಗುಣಶೀಲ್ ಶೆಟ್ಟಿ ಏಸ್ ಕ್ರೇನ್ / ಉಪಾಸನ ಕುದುರೆಮುಖ್, ಪ್ರವೀ ಣ್ ಕುಮಾರ್ ಶೆಟ್ಟಿ- ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ಸ್ ಯು... ಮತ್ತು ಜಾರ್ಜೀಯ.

ವೆಲ್ ವಿಶರ್ಸ್ : ಸರ್ವೋತ್ತಮ್ ಶೆಟ್ಟಿ - ಸಿರಿನ್ ಆಟೋ ಸರ್ವಿಸಸ್, ಶೇಕರ್ ಶೆಟ್ಟಿ - ಸಾಯಿಬಾ ಕ್ಯಾಟರಿಂಗ್. ಉಡುಗೊರೆ ಪ್ರಾಯೋಜಕರು : ಜಯರಾಂ ರೈ - ಬಿನ್ ಫರ್ದಾನ್ ಗ್ರೂಪ್, ಬಾಲಕೃಷ್ಣ ಶೆಟ್ಟಿ - ಮುಂಬೈ ಎಕ್ಸ್ ಪ್ರೆಸ್ಸ್ ರೆಸ್ಟೊರೆಂಟ್, ಶಿವ ಶೆಟ್ಟಿ - ಹಿಮಾಲಯ, ವಾಸು ಶೆಟ್ಟಿ -ಬ್ರಿಟಾನಿಯ, ನಿಕಾನ್ ಕ್ಯಾಮೆರಾ , ಶ್ರೀಮತಿ ಶಶಿ ಶೆಟ್ಟಿ ಎಸ್ಕಾಟ್ ವೋಚರ್ ಒಮಾನ್ ಮತ್ತು ಟರ್ಕಿ.

ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರೀಯವಾಗಿರುವ ಪ್ರತಿಭಾವಂತ ಹಿರಿಯರಾದ ಡಾ| ಇಂದಿರಾ ಹೆಗ್ಡೆಯವರಿಗೆ ಯು... ಬಂಟ್ಸ್ ಕೊಡಮಾಡುವ 2018-19ನೇ ಸಾಲಿನಬಂಟ ವಿಭೂಷಣ ಪ್ರಶಸ್ತಿಯನ್ನು ಪ್ರದಾನಿಸಲಾಯಿತು ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು ಹಾಗೂ ಡಾ| ಶಶಿಕಿರಣ್ ಶೆಟ್ಟಿ ಯವರು ಸನ್ಮಾನ ಪ್ರಕ್ರಿಯೆಯನ್ನು ನೆರವೇರಿಸಿಕೊಟ್ಟರು. ಸಂಪತ್ ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.

ಯು... ಬಂಟ್ಸ್ ಸ್ಥಾಪಕರು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶಂಕರ್ ಶೆಟ್ಟಿ ಮತ್ತು ಶ್ರೀಮತಿ ಮಲ್ಲಿಕಾ ಶೆಟ್ಟಿ ದಂಪತಿಗಳನ್ನು ಸನ್ಮಾನಿ ಗೌರವಿಸಲಾಯಿತು. ಯು...ಯಲ್ಲಿ ಕಳೆದ ಎರಡು ದಶಕಗ ಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಬಿ. ಕೆ. ಗಣೇಶ್ ರೈಯವರು ಯು... ಬಂಟ್ಸ್ ಗೆ ಆಕರ್ಷಕ ಲಾಂಚನ ವಿನ್ಯಾಸ, ವೇದಿಕೆಯ ಚಿತ್ರಪಟ ವಿನ್ಯಾಸ, ಡಿಜಿಟಲ್ ಡಿಸ್ ಪ್ಲೆ ವಿನ್ಯಾಸ, ಯು... ಬಂಟ್ಸ್ ಡೈರಕ್ಟರಿ ವಿನ್ಯಾಸ, ಸಾಮೂಹಿಕ ಸತ್ಯನಾರಾಯಣ ಪೂಜಾ ವೇದಿಕೆವಿನ್ಯಾಸ, ರಕ್ತದಾನ ಶಿಬಿರ ಆಯೋಜನೆ, ಎಲ್ಲಾ ಕಾರ್ಯಕ್ರಮಗಳ ಆಮಂತ್ರಣ ವಿನ್ಯಾಸ ಹಾಗೂ ಸನ್ಮಾನ ಪತ್ರಗಳ ವಿನ್ಯಾಸ ಹಾಗೂ ಯು... ಬಂಟ್ಸ್ ಎಲ್ಲಾ ಕಾರ್ಯಕ್ರಮಗಳ ಲೇಖನಗಳನ್ನು ಮಾಧ್ಯಮಗಳಲ್ಲಿ ಪ್ರಕಟಣೆಗಳ ಮೂಲಕ ಯು... ಬಂಟ್ಸ್ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿರುವುದನ್ನು ಅಭಿನಂದಿಸಿ, ಧರ್ಮ ಪತ್ನಿ, ಶ್ರೀಮತಿ ಮಂಜುಳಾ ಗಣೇಶ್ ರೈ, ಮಕ್ಕಳು ಮೋನಿಶ್ ರೈ ಮತ್ತು ಐಶ್ವರ್ಯ ರೈ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಪತ್ ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಹರೈನ್ ನಿಂದ ಆಗಮಿಸಿದ ಅಮರನಾಥ್ ಶೆಟ್ಟಿ ಶ್ರೀ ಆಸ್ಟೀನ್ ಸಂತೋಷ್, ಪ್ರದೀಪ್ ಶೆಟ್ಟಿ ಹಾಗೂ ತಂಡದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಯು... ಬಂಟ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಬಿಲ್ಲವಾಸ್ ದುಬಾಯಿ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಯವರ್ನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸ್ನೇಹಮಿಲನ ಕಾರ್ಯಕ್ರಮವನ್ನು ಪ್ರಸಾರದ ಮೂಲಕ ವಿಶ್ವಕ್ಕೆ ಮುಟ್ಟಿಸಿರುವ ಮಾಧ್ಯಮ ಕ್ಷೇತ್ರದ ಇನ್ನಿತರ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಗೌರವ ಅತಿಥಿಯಾಗಿ ಆಗಮಿಸಿದ ಶ್ರೀ ರಿಶಬ್ ಶೆಟ್ಟಿಯವರ ನೂತನ ಚಿತ್ರದ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯಕ ನಿಶಾನ್ ರೈ ಮತ್ತು ಕಾರ್ಯಕ್ರಮ ನಿರೂಪಕ ನಿತೇಶ್ ಶೆಟ್ಟಿಯವರನ್ನು ಸನ್ಮಾನಿ ಗೌರವಿಸಲಾಯಿತು.

ಯು... ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜೆಯ ಜವಬ್ಧಾರಿಯನ್ನು ವಹಿಸಿಕೊಂಡಿರುವ ರವಿರಾಜ್ ಶೆಟ್ಟಿ ದಂಪತಿಗಳು, ರಕ್ತದಾನ ಶಿಬಿರದ ರುವಾರಿ ಉದಯ ಶೆಟ್ಟಿ ದಂಪತಿಗಳು, ಕ್ರೀಡಾ ಕೂಟದ ವ್ಯಸ್ಥೆ ಜವಬ್ಧಾರಿಯ ಕಿರಣ್ ಶೆಟ್ಟಿ ದಂಪತಿಗಳು ಹಾಗೂ ವೇದಿಕೆಯ ಹಿಂಬದಿಯ ಶಕ್ತಿಗಳಾದ ಶ್ರೀ ವಾಸು ಶೆಟ್ಟಿ, ವಿಶ್ವನಾಥ್ ಶೆಟ್ಟಿ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಆಶಾ ಜಯರಾಂ ರೈ ನಿರ್ದೇಶನದಗುಂಗುರು’ ನೃತ್ಯ ಪ್ರದರ್ಶನ,  ಸೀಮಾ ಶೆಣವಾ ನಿರ್ದೇಶನದರಕ್ತಬೀಜಾಸುರ ವದಾನೃತ್ಯ ರೂಪಕ, ಡಾ| ಪ್ರೀತಿ ಶೆಟ್ಟಿ ನಿರ್ದೇಶನದ ಅಭುಧ್ಯಯ ತಂಡದ ನೃತ್ಯ, ಸುಶ್ಮಾ ಪ್ರಕಾಶ್ ಶೆಟ್ಟಿ ನಿರ್ದೇಶನದ ಕಾಳಿಕಾ ತಾಂಡವ ನೃತ್ಯ, ನಿತ್ಯಾನಂದ ಶೆಟ್ಟಿ ನಿರ್ದೇಶನದ ಕ್ರಿಕೆಟ್ ನೃತ್ಯ ಕಾರ್ಯಕ್ರಮ ನಡೆಯಿತು.

ಮಕ್ಕಳ ಛದ್ಮ ವೇಷ ಸ್ಪರ್ಧಾ ವಿಜೆತರಿಗೆ ಬಹುಮಾನ ವಿತರಣೆ: 7 ರಿಂದ 12 ವಯೋಮಿತಿ - ಪ್ರಥಮ - ಸಾನ್ವಿ ಸುಕುಮಾರ್ ಶೆಟ್ಟಿ, ದ್ವಿತೀಯಾ - ಸ್ಥೈರ್ಯ ಕರುಣಾಕರ್ ಶೆಟ್ಟಿ, ತೃತಿಯ -ಮನಸ್ವಿ ಮಹೇಶ್ ಶೆಟ್ಟಿ, 12 ರಿಂದ 16 ವಯೋಮಿತಿ - ಪ್ರಥಮ - ಸಾಹನಿಯ ಸದಾನಂದ ಶೆಟ್ಟಿ, ದ್ವಿತೀಯಾ - ಭೌತಿಕ್ ಧನ್ಪಾಲ್ ಶೆಟ್ಟಿ, ತೃತಿಯಾ - ಸ್ಪರ್ಶಾ ಶೆಟ್ಟಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತುಅದೃಷ್ಟ ಚೀಟಿ ವಿಜೇತರಿಗೆ ಬಹುಮಾನ ನೀಡಿದ ನಂತರ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರಿಗೂ ವಂದನೆ ಸಲ್ಲಿಸಿದರು. (ಬಿ. ಕೆ. ಗಣೆಶ್ ರೈ - ಯು... ಛಾಯ ಚಿತ್ರಗಳು :ಸಮೀಹಾ ಸ್ಟುಡಿಯೊ ಅಬುಧಾಬಿ)

Pages