BUNTS NEWS, ಮುಂಬೈ: ವಸಯಿ ವಿರಾರ್ ಪರಿಸರದಲ್ಲಿ
ಅಜಾತ ಶತ್ರುವಾಗಿ, ಸಂಘಟನಾ ಚತುರನಾಗಿ ಸರ್ವ
ಸಂಘ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು
ಎಲ್ಲರಿಗೂ ಪ್ರಿಯನೆನಿಸಿಕೊಂಡಿದ್ದ ದಿ.ಕರ್ನಿರೆ ಶ್ರೀಧರ ಶೆಟ್ಟಿಯವರ
ಸಂಸ್ಮರಣೆಯಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ
2019ನ್ನು ಶ್ರೀ
ಪ್ರವೀಣ್ ಶೆಟ್ಟಿ ಕಣಂಜಾರು ನೇತೃತ್ವದ
ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ
ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು
ಸಮಾಜ ಸೇವಕ ಶಶಿಧರ ಕೆ ಶೆಟ್ಟಿಯವರು
ಹೇಳಿದರು.
ಕಳೆದ ಹಲವು ವರುಷಗಳಿಂದ ಸಾಂಸ್ಕೃತಿಕವಾಗಿ
ಯುವ ಕಲಾವಿದರಿಗೆ ಅವಕಾಶವನ್ನು ನೀಡಿದ ಸಂಸ್ಥೆಯು ಪ್ರಪ್ರಥಮವಾಗಿ
ತುಳು ಕನ್ನಡಿಗ ಕ್ರೀಡಾಳುಗಳಿಗೆ ಕ್ರಿಕೆಟ್
ಪಂದ್ಯಾಟವನ್ನು ಬಹಳಷ್ಟು ವ್ಯವಸ್ಥಿತವಾಗಿ ನಿರ್ವಹಿಸಿದ್ದು
ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ
ಹೊರಹೊಮ್ಮಿದೆ. ಈ ಸಂಘದ ಸರ್ವ
ಕೆಲಸ ಕಾರ್ಯಗಳಿಗೆ ನನ್ನ ಸಹಕಾರ ಸದಾ
ಕಾಲ ಇದೆ ಹಾಗೂ ದಿ.ಕರ್ನಿರೆ ಶ್ರೀಧರ ಶೆಟ್ಟಿ
ಸಂಸ್ಮರಣಾರ್ಥ ನಡೆದ ಕ್ರೀಕೆಟ್ ಪಂದ್ಯಾಟದ
ಬಹುಮಾನ ವಿತರಣಾ ಸಭಾ ಕಾರ್ಯಕ್ರಮದ
ಅಧ್ಯಕ್ಷತೆಯ ಜವಬ್ಧಾರಿಯನ್ನು ನನಗೆ ನೀಡಿ ಗೌರವಿಸಿದ
ಈ ಸಂಸ್ಥೆಗೆ ನಾನು
ಸದಾ ಕಾಲ ಚಿರಹೃಣಿ ಎಂದು
ಬಂಟರ ಸಂಘ ಮುಂಬಯಿ ಇದರ
ವಸಯಿ ಡಹಾಣು ಪ್ರಾದೇಶಿಕ ಸಮಿತಿಯ
ಸಮನ್ವಯಕ, ಉದ್ಯಮಿ, ಸಮಾಜ ಸೇವಕ
ಶ್ರೀ ಶಶಿಧರ ಕೆ ಶೆಟ್ಟಿಯವರು
ನುಡಿದರು.
ಅವರು ದಿನಾಂಕ
1.5.2019, ಸಿಟಿ ಮೈದಾನ
ವಸಯಿ ಪಶ್ಚಿಮ ಇಲ್ಲಿ ಫ್ರೆಂಡ್ಸ್
ಸರ್ಕಲ್ ಕಣಂಜಾರು ಮುಂಬಯಿ ಇವರು
ಆಯೋಜಿಸಿದ ದಿ.ಕರ್ನಿರೆ ಶ್ರೀಧರ
ಶೆಟ್ಟಿ ಸಂಸ್ಮರಣಾರ್ಥ ತುಳು ಕನ್ನಡಿಗರಿಗಾಗಿ ಸೀಮಿತ
ಓವರುಗಳ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ
2019 ಕ್ರಿಕೆಟ್
ಪಂದ್ಯಾಟದ ಬಹುಮಾನ ವಿತರಣಾ ಸಭಾ
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಅಭಿಪ್ರಾಯ ಪಟ್ಟರು.
ಬೆಳಗ್ಗೆ
9ಕ್ಕೆ ಸರಿಯಾಗಿ ಕಟೀಲು ಶ್ರೀ
ದೇವರಿಗೆ ದೀಪವನ್ನು ಬೆಳಗಿಸಿ, ದಿ.ಕರ್ನಿರೆ ಶ್ರೀಧರ
ಶೆಟ್ಟಿಯವ ಭಾವಚಿತ್ರಕ್ಕೆ ಪುಷ್ಪ ಹಾರವನ್ನು ಹಾಕುವುದುರ
ಮೂಲಕವಾಗಿ ಶ್ರೀ ಶಶಿಧರ ಕೆ
ಶೆಟ್ಟಿಯವರು ಕ್ರಿಕೆಟ್ ಪಂದ್ಯಾಟಕ್ಕೆ ಪರಿಸರದ ಗಣ್ಯರ ಉಪಸ್ಥಿತಿಯಲ್ಲಿ
ಚಾಲನೆ ನೀಡಿದರು. ಅಹ್ವಾನಿತ 16 ತುಳು ಕನ್ನಡಿಗ ತಂಡಗಳು ಭಾಗವಹಿಸಿದ
ಈ ಕ್ರಿಕೆಟ್ ಪಂದ್ಯಾಟದಲ್ಲಿ
ಶಾನ್ವಿ ಸ್ಟಾರ್ ತಂಡ ಮುಂಡ್ಕೂರು
ಫ್ರೆಂಡ್ಸ್ ತಂಡವನ್ನು ಸೋಲಿಸಿ ಶ್ರೀ ಬ್ರಹ್ಮಲಿಂಗೇಶ್ವರ
ಟ್ರೋಫಿ 2019 ಹಾಗೂ ನಗದು ಬಹುಮಾನ
ರೂಪಾಯಿ 55,555/- ನ್ನು ತನ್ನದಾಗಿಸಿಕೊಂಡರೆ, ಉತ್ತಮ
ಸ್ಪರ್ಧಾತ್ಮಕ ತಂಡವಾದ ಮುಂಡ್ಕೂರು ಫ್ರೆಂಡ್ಸ್
ದ್ವಿತೀಯ ಬಹುಮಾನ ಹಾಗೂ ನಗದು
ಬಹುಮಾನ ರೂಪಾಯಿ 33,333/- ರಲ್ಲಿ ತೃಪ್ತಿ ಹೊಂದಿತು.
ಕ್ರಿಕೆಟ್
ಪಂದ್ಯಾಟದ ನಂತರ ನಡೆದ ಬಹುಮಾನ
ವಿತರಣಾ ಸಭಾ ಕಾರ್ಯಕ್ರಮಕ್ಕೆ ಬಹುಮಾನ
ವಿತರಕರಾಗಿ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ
ಶೆಟ್ಟಿ ಅವರು ಆಗಮಿಸಿದ್ದರು. ಉದ್ಘಾಟಕರಾಗಿ
ಸೌತ್ ಇಂಡಿಯನ್ ಸೆಲ್ ಫೆಡರೇಶನ್
ವಸಯಿ ತಾಲೂಕ ಇದರ ಅಧ್ಯಕ್ಷ,ಸಮಾಜ ಸೇವಕ, ಛತ್ರಪತಿ
ಶಿವಾಜಿ ಮಹಾರಾಜ್ ಪ್ರಶಸ್ತಿ ಪುರಸ್ಕೃತ
ಡಾ.ವಿರಾರ್ ಶಂಕರ್.ಬಿ.ಶೆಟ್ಟಿ,ಮುಖ್ಯ ಅತಿಥಿಗಳಾಗಿ
ವಸಯಿ ಕರ್ನಾಟಕ ಸಂಘದ ಅಧ್ಯಕ್ಷರಾದ
ಶ್ರೀ ಪಾಂಡು ಎಲ್ ಶೆಟ್ಟಿಯವರು
ಆಗಮಿಸಿದ್ದರು. ದೀಪ ಪ್ರಜ್ವಲನೆಯ ಮೂಲಕ
ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಭಾರತೀಯ
ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಕ್ರೀಡಾ ಪಟು ಶ್ರೀ
ಕೈಲಾಶ್ ಘಾನೆಕರ್ ಹಾಗೂ ದಿ.ಕರ್ನಿರೆ ಶ್ರೀಧರ ಶೆಟ್ಟಿ
ಅವರ ಧರ್ಮಪತ್ನಿ ಶ್ರೀಮತಿ ಉಷಾ ಶ್ರೀಧರ
ಶೆಟ್ಟಿ ಮತ್ತು ಸುಪುತ್ರ ಶ್ರೀ
ಪೃಥ್ವಿರಾಜ್ ಶ್ರೀಧರ ಶೆಟ್ಟಿ ಅವರನ್ನು
ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಅತಿಥಿ ಗಣ್ಯರ ಪರವಾಗಿ ಮಣಿಕಂಠ
ಸೇವಾ ಸಮಿತಿ ವಸಯಿಯ ಗೌರವ
ಅಧ್ಯಕ್ಷರಾದ ಶ್ರೀ ಕರ್ನೂರು ಶಂಕರ
ಆಳ್ವ ಅವರು ಶುಭ ಹಾರೈಸುತ್ತಾ
ಇಂದಿನ ಕ್ರಿಕೆಟ್ ಪಂದ್ಯಾಟವನ್ನು ಫ್ರೆಂಡ್ಸ್
ಸರ್ಕಲ್ ಕಣಂಜಾರು ಆಯೋಜಿಸಿದೆಯಾದರೂ ಅದರ
ಯಶಸ್ಸಿಗೆ ಪರಿಸರದ ಸರ್ವರೂ ಜೊತೆಗೂಡಿ
ಶ್ರಮಿಸಿರುವುದು ಸಂತೋಷದಾಯಕ. ಭಾರತೀಯ ಕ್ರಿಕೆಟ್ ತಂಡಕ್ಕೆ
ಕನ್ನಡಿಗರ ಕೊಡುಗೆ ಅಪಾರ. ಇಂತಹ
ಕ್ರಿಕೆಟ್ ಪಂದ್ಯಾಟಗಳಿಂದ ತುಳು ಕನ್ನಡಿಗ ಕ್ರೀಡಾ
ಪಟುಗಳಿಗೆ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು
ಪ್ರತಿನಿಧಿಸುವ ಯೋಗ ಭಾಗ್ಯ ಭಗವಂತನು
ಕರುಣಿಸಲಿ ಎಂದು ನುಡಿದರು.
ವೇದಿಕೆಯಲ್ಲಿ
ಬಂಟರ ಸಂಘ ಮುಂಬಯಿ ವಸಯಿ
ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ
ಜಯಂತ್ ಆರ್ ಪಕ್ಕಳ,ಕರ್ನಾಟಕ
ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ
ಲಿಮಿಟೆಡ್ ಇದರ ಗೌರವ ಪ್ರಧಾನ
ಕಾರ್ಯದರ್ಶಿ ಶ್ರೀ ಓ.ಪಿ.ಪೂಜಾರಿ, ಜೀವದಾನಿ ಬಿಲ್ಡರ್ಸ್
ಅಂಡ್ ಡೆವಲಪರ್ಸ್ ಇದರ ಮಾಲಿಕ ಲಯನ್
ಶಂಕರ್ ಕೆ.ಟಿ,ಉದ್ಯಮಿ
ಶ್ರೀ ವಾಸು ಶೆಟ್ಟಿ ವಿರಾರ್,
ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆಯ ಗೌರವ
ಪ್ರಧಾನ ಕಾರ್ಯದರ್ಶಿ ಶ್ರೀ ಕೃಷ್ಣ ಹೆಗ್ಡೆ,
ಕ್ರೀಡಾಭಿಮಾನಿ ಶ್ರೀ ವಸೀಮ್ ಸಯ್ಯದ್
ಇವರುಗಳು ಉಪಸ್ಥಿತರಿದ್ದರು.
ಶ್ರೀಮತಿ
ಪ್ರಮೀಳಾ ಅಮೀನ್ ಇವರ ಪ್ರಾರ್ಥನೆಯೊಂದಿಗೆ
ಸಭಾ ಕಾರ್ಯಕ್ರಮ ಆರಂಭವಾದರೆ, ಫ್ರೆಂಡ್ಸ್ ಸರ್ಕಲ್ ಕಣಂಜಾರು ಮುಂಬಯಿ
ಹಾಗೂ ಕ್ರಿಕೆಟ್ ಪಂದ್ಯಾಟದ ಸಂಯೋಜಕರಾದ ಶ್ರೀ ಪ್ರವೀಣ್ ಶೆಟ್ಟಿ
ಕಣಂಜಾರು,ಶ್ರೀ ಸುಪ್ರೀತ್ ಶೆಟ್ಟಿ
ನೀರೆ, ಶ್ರೀ ದಿನಕರ್ ಶೆಟ್ಟಿ,
ಶ್ರೀ ರಿತೇಶ್ ಶೆಟ್ಟಿ, ಶ್ರೀ
ಸುಕೇಶ್ ಶೆಟ್ಟಿ ಇವರುಗಳು ಅತಿಥಿ
ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ವಸಯಿ ಕರ್ನಾಟಕ ಸಂಘದ
ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಶ್ರೀ
ಯಶೋಧರ ಕೋಟ್ಯಾನ್ ಹಾಗೂ ಕ್ರೀಡಾ ಸಮಿತಿ
ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ
ಎಕ್ಕಾರು ಹಾಗೂ ಪರಿಸರದ ವಿವಿಧ
ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಸದಸ್ಯರ ವಿಶೇಷ
ಸಹಕಾರದೊಂದಿಗೆ ನಡೆದ ಕ್ರಿಕೆಟ್ ಪಂದ್ಯಾಟದ
ವೀಕ್ಷಕ ವಿವರಣೆಯನ್ನು ತುಳು ಕನ್ನಡಿಗ ಶ್ರೀ
ನಿತೇಶ್ ಶೆಟ್ಟಿಯವರು ನಿರ್ವಹಿಸಿದರೆ, ಸಭಾ ಕಾರ್ಯಕ್ರಮವನ್ನು ಶ್ರೀ
ವಿಜಯ್ ಶೆಟ್ಟಿ ಕುತ್ತೆತ್ತೂರು ಅವರು
ನಿರೂಪಿಸಿ ಧನ್ಯವಾದಗೈದರು. (ವರದಿ : ಈಶ್ವರ ಎಂ.
ಐಲ್ ಚಿತ್ರ : ದಿನೇಶ್ ಕುಲಾಲ್)