ಸೋಮೇಶ್ವರದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ, ಹಸ್ತಾಂತರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸೋಮೇಶ್ವರದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ, ಹಸ್ತಾಂತರ

Share This
BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಸೋಮೇಶ್ವರ ಬಂಟರ ಸಂಘ, ಲಯನ್ಸ್ ಕ್ಲಬ್ ಕಾವೇರಿ, ಮಂಗಳೂರು ಇವರುಗಳ ಸಹಯೋಗದೊಂದಿಗೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲಿನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಬಹುರೂಪಿತ ಕನಸಿನಆಶ್ರಯ ಯೋಜನೆ’ಯಡಿ ಶ್ರೀಮತಿ ವಿನೋದ ಶೆಟ್ಟಿಯವರಿಗೆ ಅವರ 2.5ಸೆಂಟ್ಸ್ ಜಾಗದ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮವು ಎ.27ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಜಾಗತಿಕ  ಬಂಟರ ಸಂಘಗಳ ಒಕ್ಕೂಟದ ಗೌರವ ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಅವರು ಒಕ್ಕೂಟದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ಮಾತನಾಡಿ, ಅಶಕ್ತ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿ ಕೊಡುವ ಕೆಲಸವು ಒಂದು ದೇವರ ಕಾರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಭಾಗವಹಿಸಿ ಇಂಥ ಯೋಜನೆಗಳು ಫಲಿಸುವುದು ಸ್ತುತ್ಯರ್ಹವಾದ ಒಂದು ಮಾದರಿ ನಡೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ  ಸಂಘಗಳ ಒಕ್ಕೂಟದ ನಿಕಟಪೂರ್ವ ಗೌರವ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ, ಮಾಜಿ ಜಿಲ್ಲಾ ಲಯನ್ ಗವರ್ನರ್ ಕವಿತಾ ಶಾಸ್ತ್ರಿ ಶುಭ ಹಾರೈಸಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸೋಮೇಶ್ವರ ಬಂಟರ ಸಂಘದ ಗೌರವ ಅಧ್ಯಕ್ಷ ಯು.ಸುಧಾಕರ್ ಭಂಡಾರಿ, ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವರ್ಕಾಡಿ, ಪ್ರಧಾನ ಸಂಚಾಲಕ ಗಂಗಾಧರ ಶೆಟ್ಟಿ ಉಳ್ಳಾಲ, ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷೆ ಶಾಲಿನಿ ರೈ, ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಯಶು ಪಕ್ಕಳ ತಲಪಾಡಿ, ಸದಸ್ಯರುಗಳಾದ ಮೋಹನ್ ಶೆಟ್ಟಿ ಕುಂಪಲ, ಗಣೇಶ್ ಶೆಟ್ಟಿ ಬೋಡಂಗಿಲ, ಆನಂದ್ ಶೆಟ್ಟಿ, ಪ್ರದೀಪ್ ಕಿಲ್ಲೆ, ರಾಜಾರಾಮ ಅಡ್ಯಂತಾಯ. ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯ ಪ್ರತಿನಿಧಿ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದರು.

Pages