ಗುಜರಾತಿನಲ್ಲಿ ಉದ್ಯಮಿ ರವಿನಾಥ್‌ ವಿಶ್ವನಾಥ್‌ ಶೆಟ್ಟಿ ಸಾರಥ್ಯದಲ್ಲಿ ನಡೆದ 3 ದಿನಗಳ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಗುಜರಾತಿನಲ್ಲಿ ಉದ್ಯಮಿ ರವಿನಾಥ್‌ ವಿಶ್ವನಾಥ್‌ ಶೆಟ್ಟಿ ಸಾರಥ್ಯದಲ್ಲಿ ನಡೆದ 3 ದಿನಗಳ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

Share This
BUNTS NEWS,  ಭರೂಚ್‌ (ಗುಜರಾತ್‌): ಗುಜರಾತ್ ಭರೂಚ್ಜಿಲ್ಲೆಯ ಅಂಕಲೇಶ್ವರದ ನವೀಕರಣಗೊಂಡ ಸುಮಾರು ಐನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಗುಮನ್ದೇವ್ಮಂದಿರದಲ್ಲಿ ಉದ್ಯಮಿ ರವಿನಾಥ್ವಿಶ್ವನಾಥ್ಶೆಟ್ಟಿ ಮತ್ತು ಭಾರತಿ ರವಿನಾಥ್ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ  ಮೂರು ದಿನಗಳ  ಶ್ರೀನಿವಾಸ ಕಲ್ಯಾಣೋತ್ಸವವು ಮೇ 10ರಿಂದ ಮೇ 12 ತನಕ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಮೇ 10ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಸಂಜೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾ ಮಾತೆಯ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು. ರಾತ್ರಿ ವಾಸ್ತು ಹೋಮ ಮತ್ತು ಗಣಹೋಮ ನಡೆಯಿತು. ಮೇ 11 ರಂದು ಮುಂಜಾನೆ ನವಗ್ರಹ ಹೋಮ, ತತ್ವ ಕಲಶಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಅನಂತರ ಮಲ್ಲಯುದ್ದ (ಕುಸ್ತಿ) ಸಂಜೆ 4 ಗಂಟೆಗೆ ಮದ್ವಭಾಗ್ಸೊಸೈಟಿಯಿಂದ ಜಲಧಾರ ಚೋಕಡಿ, ಜಿ..ಡಿ.ಸಿ. ಅಂಕಲೇಶ್ವರದಿಂದ ಗುಮನ್ದೇವ್ಮಂದಿರಕ್ಕೆ ಭವ್ಯ ಶೋಭಾಯಾತ್ರೆ ನಡೆಯಿತು. ಸಂಜೆ ಚಕ್ರಭ್ಕ ಮಂಡಲ ಪೂಜೆ, ರಾಮದೇವತಾ ಕಲಶಾಧಿವಾಸ, ಅಧಿವಸ ಹೋಮ ನಡೆಯಿತು.

ಅನಂತರ ಶ್ರೀ ಒಡಿಯೂರು ಗುರು ದೇವ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ರವಿನಾಥ ವಿ. ಶೆಟ್ಟಿ ದಂಪತಿ ಮಾತ್ರವಲ್ಲದೆ ಅವರ ತಾಯಿ ತೋನ್ಸೆ ಪಡುಮನೆ ಲಕ್ಷ್ಮೀ ವಿ. ಶೆಟ್ಟಿ, ಮಕ್ಕಳಾದ ಡಾ| ಆಶ್ನಾ ಆರ್‌. ಶೆಟ್ಟಿ, ಆಸ್ಥ ಆರ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮೇ. 12 ರಂದು ಬೆಳಿಗ್ಗೆ ಪಂಚಾಂಮೃತಾಭಿಷೇಕ, ಶಿಖರ ಕಲಾಭಿಷೇಕ, ಭ್ರಹ್ಮ ಕಲಾಶಾಭಿಷೇಕ, ಪ್ರಸನ್ನ ಪೂಜೆ, ಅಲಂಕಾರ ಪೂಜೆ, ಅಭಿಷೇಕ ಪೂಜೆ, ಹವನಗಳು ನಡೆಯಿತು. ಬಳಿಕ ದೇವಸ್ಥಾನದ ಹೊರಾವರಣದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಪೂಜೆಯು ನಡೆಯಿತು.

ರವಿನಾಥ್ವಿಶ್ವನಾಥ್ಶೆಟ್ಟಿ ಮತ್ತು ಭಾರತಿ ರವಿನಾಥ್ಶೆಟ್ಟಿ ಯವರ ಯಜಮಾನಿಕೆಯಲ್ಲಿ  ಪೂಜೆಯಲ್ಲಿ ತೋನ್ಸೆ ಪಡುಮನೆ ಲಕ್ಷ್ಮೀ ವಿಶ್ವನಾಥ ಶೆಟ್ಟಿ ಪರಿವಾರ, ತೋನ್ಸೆ ಜಯಕೃಷ್ಣ ಶೆಟ್ಟಿ ಪರಿವಾರ, ಪಳ್ಳಿ ಶಾಂತಿ ನಿವಾಸ ಮನೆಯ ಪರಿವಾರ ಹಾಗೂ ಕುಟುಂಬದವರು, ಹಿತೈಷಿಗಳು, ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಹೋತ್ಸವದ ನಾದ ವಾಲಗವನ್ನು ಅನಿಲ್ ಕೋಟ್ಯಾನ್ ಬಳಗ, ಜರಿಮೆರಿ ದಿನೇಶ್ ವಿ. ಕೋಟ್ಯಾನ್ ಬಳಗ,  ಚೆಂಡೆಯಲ್ಲಿ ಅಶೋಕ್ ದೇವಾಡಿಗ  ಬಳಗ ನಡೆಸಿಕೊಟ್ಟರು.

ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ರಂಗಪೂಜೆಯಲ್ಲಿ ದೇವಸ್ಥಾನದ ಪೀಠಾಧಿಪತಿ ಮಹಾನ್ ಶ್ರೀ ಮೋಹನ್ ದಾಸ್ ಸ್ವಾಮೀಜಿ ಯವರು ದಾಂಪದ್ಯ ಜೀವನದ ಬೆಳ್ಳಿ ಹಬ್ಬವನ್ನು ಮಹಾ ಅನ್ನಸಂತರ್ಪಣೆಯೊಂದಿಗೆ ವಿಶೇಷ ರೀತಿಯಲ್ಲಿ ಪೂರೈಸಿದ ರವಿನಾಥ್ವಿಶ್ವನಾಥ್ಶೆಟ್ಟಿ ಮತ್ತು ಭಾರತಿ ರವಿನಾಥ್ಶೆಟ್ಟಿ ದಂಪತಿಗೆ ಬ್ರಹತ್ ಹಾರವಾನ್ನು ಹಾಕಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.  ಬಳಿಕ ಮಾತನಾಡಿದ ಸ್ವಾಮೀಜಿಯವರು ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದಲ್ಲಿ ಅದು ಈಡೇರುತ್ತದೆ ಎಂಬುದನ್ನು ರವಿನಾಥ್ಶೆಟ್ಟಿಯ ಮೂಲಕ ಕಾಣಬಹುದು. ಕ್ಷೇತ್ರದಲ್ಲಿ ಇಂತಹ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುತ್ತಿರಲಿ. ಭಕ್ತರಿಗೆ ಇದನ್ನು ಕಾಣುವ ಬಾಗ್ಯ ಆಗಾಗ ಲಭಿಸಲಿ. ರವಿನಾಥ್ಶೆಟ್ಟಿಯ ವರಂತಹ ಧರ್ಮ ರಕ್ಷಕರು ದೇಶದ ಎಲ್ಲೆಡೆಗಳಲ್ಲಿ ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ದೇಶದ ವಿವಿಧ ಬಾಗಗಳಿಂದ ಆಗಮಿಸಿದ ಅನೇಕ ಸಾಧು ಸಂತರು ದಂಪತಿಗಳನ್ನು ಹಾರೈಸಿದರು.

ಸಮಾರಂಭದಲ್ಲಿ ಸೂರತ್ ಶಿವ ಹಾಸ್ಪಿಟಾಲಿಟಿ ಸರ್ವೀಸ್ ಶಿವರಾಮ ಶೆಟ್ಟಿ,  ರವಿನಾಥ್ಶೆಟ್ಟಿಯ ಸಹೋದರರಾದ ರಮಾನಾಥ ಶೆಟ್ಟಿ ಪರಿವಾರ, ಉಮಾನಾಥ ಶೆಟ್ಟಿ ಪರಿವಾರ, ಕೇಶವ ಆಳ್ವ ಕುಂಜತ್ತೂರು ಪರಿವಾರ, ಪ್ರಜ್ವಲ್ ಶೆಟ್ಟಿ ಪರಿವಾರ, ಪ್ರಶಾಂತ್ ಶೆಟ್ಟಿ , ಸಚಿತ್ ಶೆಟ್ಟಿ, ಮೋಹಿತ್ ಕೆ. ಆಳ್ವ ಮತ್ತಿತರರ ಕುಟುಂಬಸ್ತರು ಮತ್ತು ಕಡಂದಲೆ ಶೇಖರ ಶೆಟ್ಟಿ, ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಖಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕಾಶೀಮೀರ ಭಾಸ್ಕರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ,  ಹರೀಶ್ ಶೆಟ್ಟಿ ಗುರ್ಮೆ, ಹರೀಶ್ ಪಿ. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ,  ತುಳು ಸಂಘದ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಸೂರತ್ ಕರ್ನಾಟಕ ಸಮಾಜದ ಅಧ್ಯಕ್ಷ  ದಿನೇಶ್ ಶೆಟ್ಟಿ,  ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ಬರೋಡಾ ತುಳು ಸಂಘದ ಮಾಜಿ ಅಧ್ಯಕ್ಷ  ಜಯ ಶೆಟ್ಟಿ ಮತ್ತು ಪದಾಧಿಕಾರಿಗಳು,  ಅಂಕಲೇಶ್ವರದ ಉದ್ಯಮಿ ಅಜಿತ್ ಶೆಟ್ಟಿ, ಸುರೇಶ್ ಶೆಟ್ಟಿ,  ಹರೀಶ್ ಪೂಜಾರಿ, ಶಂಕರ್ ಶೆಟ್ಟಿ,  ಕರುಣಾಕರ ಶೆಟ್ಟಿ ಅಂಕಲೇಶ್ವರ, ಶೆಲ್ಟರ್ ಗ್ರೂಪ್ ಸತೀ ಶೆಟ್ಟಿ,  ಸನ್ ಶೈನ್  ಇನ್ ಹೋಟೇಲ್ ನವೀನ್  ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ, ದ್ವಾರಕ ಹೋಟೇಲಿನ ಅರುಣ್ ಹೆಗ್ಡೆ,  ಸೂರತ್ ಹೋಟೇಲು ಉಡುಪಿಯ ಪ್ರತೀನ್ ಶೆಟ್ಟಿ,  ಮೀರಾರೋಡ್ ಭರತ್  ಶೆಟ್ಟಿ,  ರುದ್ರ ಶೆಲ್ಟರ್  ಹರೀಶ್ ಶೆಟ್ಟಿ,  ಉದ್ಯಮಿ ಪುನೀತ್ ದಾವನ್,  ಸಿಂಧು ಶೆಟ್ಟಿ,   ಸುಧಾಮನಿ ಕೆ ಶೆಟ್ಟಿ,  ಮಾಲತಿ ಎಸ್. ಶೆಟ್ಟಿ,  ಕಿರಣ್ ಶೆಟ್ಟಿ,  ಕಿರಣ್ ಪಿ ಶೆಟ್ಟಿ,  ಪ್ರೀತಿ ವಿ ಶೆಟ್ಟಿ,  ಪ್ರತಾಪ್ ಎಸ್.ಶೆಟ್ಟಿ,   ಅನುಷ್,  ಅನುಶ್ರೀ, ಅನ್ಯ, ಅವನಿ,  ಅವಿಕಾ,  ತುಳು ಸಂಘ ಬರೋಡಾ ಸ್ಥಾಪಕ ಅಧ್ಯಕ್ಷ ಜಯರಾಮ್ ಶೆಟ್ಟಿ, ಸೂರತ್ ಹೋಟೇಲು ರಾಧಾಕೃಷ್ಣ  ರತ್ನಾಕರ ಶೆಟ್ಟಿ,  ಮತಾಶ್ರೀ ಹೋಸ್ಪಿಟೇಲಿಟಿ ಸರ್ವೀಸ್ ಅಂಕಲೇಶ್ವರ ಅಜಿತ್ ಶೆಟ್ಟಿ, ಉದ್ಯಮಿ ಅನಿಲ್ ಸುವರ್ಣ, ಗೀತಾ ಹೋಸ್ಪಿಟೇಲಿಟಿ ಸರ್ವಿಸ್ ಆರ್ ವಿ ಶೆಟ್ಟಿ, ನರ್ಮದಾ ಕೇಟರರ್ಸ್ ನ್ ಶಂಕರ್ ಕೆ ಶೆಟ್ಟಿ,  ಶ್ರೀ ದುರ್ಗಾ ಕೇಟರರ್ಸ್ ಅಂಕಲೇಶ್ವರ ಉದಯ ಜಿ ಶೆಟ್ಟಿ,  ಪ್ರಕಾಶ್ ಶೆಟ್ಟಿ, ಸೂರತ್, ರವಿ ಶೆಟ್ಟಿ, ಸೂರತ್,  ಅನಿಲ್ ಸುವರ್ಣ  ಪಣೋಲ್, ತ್ರಿಶೂಲ್ ಕಂಟೈನರ್ ಅಂಕಲೇಶ್ವರ ಗಣೇಶ್ ಆಚಾರ್ಯ, ಸೂರತ್ ಆರ್ ವಿ ಶೆಟ್ಟಿ, ಗುಜರಾತಿನ ಅನೇಕ ರಾಜಕೀಯ ಮುಖಂಡರುಗಳು, ಉದ್ಯಮಿಗಳು, ಸಮಾಜ ಸೇವಕರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. (ಚಿತ್ರ-ವರದಿ : ಈಶ್ವರ ಎಂ. ಐಲ್‌)

Pages