BUNTS NEWS, ಮಂಗಳೂರು: ಯಕ್ಷಗಾನವು ಜನರ ಧಾರ್ಮಿಕ ನಂಬಿಕೆಯೊಂದಿಗೆ
ಬೆಳೆದು ಬಂದಿದೆ. ಶ್ರೀ ಕ್ಷೇತ್ರ ಕಟೀಲಿನಂತಹ
ಧಾರ್ಮಿಕ ಕೇಂದ್ರಗಳಿಂದ ನಡೆಸಲ್ಪಡುವ ವಿವಿಧ ಮೇಳಗಳಲ್ಲಿ ಸೇವೆ
ಸಲ್ಲಿಸುವ ಕಲಾವಿದರು ಸಾಕಷ್ಟು ಹೆಸರು, ಕೀರ್ತಿಯೊಂದಿಗೆ
ಜೀವನದ ದಾರಿಯನ್ನೂ ಕಂಡುಕೊಂಡಿದ್ದಾರೆ ಎಂದು ಮಾಜಿ ಸಚಿವ
ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಶಂಭೂರು ಗ್ರಾಮದ ಬೊಂಡಾಲದಲ್ಲಿ
ಜರಗಿದ ದಿ.ಬೊಂಡಾಲ ಜನಾರ್ದನ
ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ
ಶೆಟ್ಟಿ ಸಂಸ್ಮರಣಾ ಸಮಾರಂಭ ಹಾಗೂ ಸೇವಾ
ಬಯಲಾಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಶೀರ್ವಚನ ನೀಡಿದ ಕಟೀಲು ಕ್ಷೇತ್ರದ
ಪ್ರಧಾನ ಅರ್ಚಕ ಮತ್ತು ಆನುವಂಶಿಕ
ಆಡಳಿತ ಮೊಕ್ತೇಸರ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ
ಅವರು ಮಾತನಾಡಿ, ಗತಿಸಿ ಹೋದ ಹಿರಿಯರ
ಹೆಸರಲ್ಲಿ ಯಕ್ಷಗಾನ ಸೇವೆ ಮತ್ತು
ಕಲಾವಿದರುಗಳ ಮಾನ - ಸಮ್ಮಾನ ಮುಂದಿನ
ತಲೆಮಾರಿನಲ್ಲಿ ಜಾಗೃತಿ ಮೂಡಿಸುವುದಲ್ಲದೆ ಒಂದು
ಪರಂಪರೆಯ ಉಳಿವಿಗೆ ಅದು ಕಾರಣವಾಗುತ್ತದೆ
ಎಂದರು.
ಪ್ರಶಸ್ತಿ
ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ದಿ.ಬೊಂಡಾಲ ಜನಾರ್ದನ ಶೆಟ್ಟಿ
ಮತ್ತು ದಿ. ಬೊಂಡಾಲ ರಾಮಣ್ಣ
ಶೆಟ್ಟರ ಕೊಡುಗೆಯನ್ನು ಸ್ಮರಿಸಿ ಸಂಸ್ಮರಣಾ ಭಾಷಣ
ಮಾಡಿದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ
ಪುರಸ್ಕೃತರನ್ನು ಅವರು ಅಭಿನಂದಿಸಿದರು. ಸಮಾರಂಭದಲ್ಲಿ
ಕಟೀಲು ಮೇಳದ ಹಿರಿಯ ಕಲಾವಿದರುಗಳಾದ
ಪಡ್ರೆ ಕುಮಾರ ಮತ್ತು
ನಗ್ರಿ ಮಹಾಬಲ ರೈ ಅವರಿಗೆ
2019 ನೇ ಸಾಲಿನ 'ಬೊಂಡಾಲ ಪ್ರಶಸ್ತಿ'
ಯನ್ನು ಅತಿಥಿಗಳು ಪ್ರದಾನ ಮಾಡಿದರು. ವಿಶ್ವನಾಥ
ಶೆಟ್ಟಿ ತೀರ್ಥಹಳ್ಳಿ ಸನ್ಮಾನ ಫಲಕ ಓದಿದರು.
ಕಟೀಲು ಆರು ಮೇಳಗಳ ಸಂಚಾಲಕ
ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಹಿರಿಯ
ಅರ್ಥಧಾರಿ ರಾಯಸ ಶ್ರೀನಿವಾಸ ಪೂಜಾರಿ
ಉಪಸ್ಥಿತರಿದ್ದರು.
ಬೊಂಡಾಲ
ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ
ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.
ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಬೊಂಡಾಲ
ಸೀತಾರಾಮ ಶೆಟ್ಟಿ ವಂದಿಸಿದರು. ಬೊಂಡಾಲ
ದೇವಿಪ್ರಸಾದ್ ಶೆಟ್ಟಿ ಮತ್ತು ಸುಪ್ರೀತ್
ಶೆಟ್ಟಿ ಸಹಕರಿಸಿದರು. ಬಳಿಕ ಕಟೀಲು ಶ್ರೀ
ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ
'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಸೇವಾ ಬಯಲಾಟ
ಜರಗಿತು.