ಪಡ್ಡೋಡಿ ಕೋರ್ದಬ್ಬು ಸೇವಾ ಸಮಿತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ತಾಳಮದ್ದಳೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಡ್ಡೋಡಿ ಕೋರ್ದಬ್ಬು ಸೇವಾ ಸಮಿತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ತಾಳಮದ್ದಳೆ

Share This
ಕೂಳೂರು: ಬಂಗ್ರಕೂಳೂರು ಪಡ್ಡೋಡಿ ಕೋರ್ದಬ್ಬು ದೇವಸ್ಥಾನದಲ್ಲಿ ಇತ್ತೀಚಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ ತುಳು ಯಕ್ಷಗಾನ ತಾಳಮದ್ದಳೆ ನಡೆಯಿತು.
ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಪಡ್ಡೋಡಿ ಕೋರ್ದಬ್ಬು ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕೋರ್ದಬ್ಬು ದೈವಸ್ಥಾನದ ಆಡಳಿತ ಟ್ರಸ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕೂಳೂರುಬೀಡಿನ ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಉದ್ಯಮಿ ಅಡ್ಯಾರ್ ಮಾಧವ ನ್ಯಾಕ್, ಕೋರ್ದಬ್ಬು ದೈವ ಸೇವಾ ಸಮಿತಿ ಅಧ್ಯಕ್ಷ ಅಶೋಕ ಮಾಡ ಕುದ್ರಾಡಿಗುತ್ತು, ಕಾರ್ಯದರ್ಶಿ ಸುಧೀರ್ ಭಂಡಾರಿ ಕುದ್ರಾಡಿ ಹೊಸಮನೆ, ಗೌರವಾಧ್ಯಕ್ಷ ಶ್ರೀನಿವಾಸ ರಾವ್, ಸುರೇಶ್ ಭಂಡಾರಿ ಕುದ್ರಾಡಿ ಮನೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ನಿರೂಪಿಸಿದರು.
ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ ತುಳು ಯಕ್ಷಗಾನ ತಾಳಮದ್ದಳೆಯಲ್ಲಿ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೊ ಸಂಪಾಜೆ, ಸರಪಾಡಿ ಅಶೋಕ ಶೆಟ್ಟಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ,ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಸೀತಾರಾಮ ಕುಮಾರ್ ಕಟೀಲು, ರವಿ ಅಲೆವೂರಾಯ, ಎಂ.ಎಂ.ಸಿ.ರೈ, ವಿನಯಾಚಾರ್ ಹೊಸಬೆಟ್ಟು, ಗಣೇಶಕಾವ ತಲ್ಲಂಗಡಿ, ಸುರೇಶ್ ಕೊಲೆಕಾಡಿ ಅರ್ಥಧಾರಿಗಳಾಗಿದ್ದರು. ಹರೀಶ್ ಶೆಟ್ಟಿ ಸೂಡ ಮತ್ತು ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಗೆ ರವಿರಾಜ್ ಜೈನ್ಅಕ್ಷಯ ರಾವ್ ವಿಟ್ಲ ಮತ್ತು ಚೇತನ್ ಸಚ್ಚರಿಪೇಟೆ ಅವರು ಹಿಮ್ಮೇಳದಲ್ಲಿ ಸಹಕರಿಸಿದ್ದರು.

Pages