ಡಿ.10: ಪಟ್ಲ ಯಕ್ಷಾಶ್ರಯದ ಯೋಜನೆಯಡಿ ನಿರ್ಮಾಣಗೊಂಡ 3ನೇ ಮನೆ ಗೃಹಪ್ರವೇಶ - BUNTS NEWS WORLD

ಡಿ.10: ಪಟ್ಲ ಯಕ್ಷಾಶ್ರಯದ ಯೋಜನೆಯಡಿ ನಿರ್ಮಾಣಗೊಂಡ 3ನೇ ಮನೆ ಗೃಹಪ್ರವೇಶ

Share This
BUNTS NEWS, ಮಂಗಳೂರು: ನಗರದ ಕುಂಜತ್ತಬೈಲ್’’ನಲ್ಲಿ ಯಕ್ಷಗಾನ ಕಲಾವಿದ ಪುರಂದರರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ನಿರ್ಮಿಸಲಾದ ನೂತನ ಮನೆ ‘ದೇವಿ ನಿಲಯ’ದ ಗೃಹಪ್ರವೇಶವು ಡಿ.10ರಂದು ನೆರವೆರಲಿದೆ.
ಇದು ಯಕ್ಷಧ್ರುವ ಪಟ್ಲ ಫೌಂಡೇಶನ್ನಿಂದ ನಿರ್ಮಿಸಿಕೊಡುತ್ತಿರುವ 3ನೇ ಮನೆಯಾಗಿದ್ದು ಸಮಾರಂಭದಲ್ಲಿ ಪಟ್ಲ ಫೌಂಡೇಶನ್ ಘಟಕದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಹಿತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Pages