ಮೂಡಂಬೈಲು ರವಿ ಶೆಟ್ಟಿ ಅವರಿಗೆ ‘ತುಳುನಾಡ್ದ ಬೊಳ್ಳಿ ಪ್ರಶಸ್ತಿ’ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೂಡಂಬೈಲು ರವಿ ಶೆಟ್ಟಿ ಅವರಿಗೆ ‘ತುಳುನಾಡ್ದ ಬೊಳ್ಳಿ ಪ್ರಶಸ್ತಿ’

Share This
BUNTS NEWS, ಬೆಂಗಳೂರು: ಸೃಷ್ಠಿ ಕಲಾ ಭೂಮಿ ಬೆಂಗಳೂರು ನೀಡುವ ‘ತುಳುನಾಡ್ದ ಬೊಳ್ಳಿ ಪ್ರಶಸ್ತಿ’ಗೆ ಉದ್ಯಮಿ, ಸಮಾಜ ಸೇವಕ ಮೂಡಂಬೈಲು ರವಿ ಶೆಟ್ಟಿ ಅವರು ಪಾತ್ರರಾಗಿದ್ದಾರೆ.
ನಗರದ ಡಾI ರಾಜ್’ಕುಮಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೃಷ್ಠಿ ಕಲಾ ಭೂಮಿ ಬೆಂಗಳೂರು ಇದರ 6ನೇ ವರ್ಷದ ಸಮಾರಂಭದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಸೃಷ್ಠಿ ಕಲಾ ಭೂಮಿ ತಂಡ ಜೊತೆಯಾಗಿ ಮೂಡಂಬೈಲು ರವಿ ಶೆಟ್ಟಿ ‘ತುಳುನಾಡ್ದ ಬೊಳ್ಳಿ ಪ್ರಶಸ್ತಿ’ ನೀಡಿ ಗೌರವಿಸಿತು.

ಎಟಿಎಸ್ ಗ್ರೂಪಿನ ಆಡಳಿತ ನಿರ್ದೇಶಕರಾಗಿರುವ ರವಿ ಶೆಟ್ಟಿ ಅವರು ಸಾಮಾಜಿಕವಾಗಿ ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದಾರೆ. ಕತಾರ್ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾಗಿರುವ ರವಿ ಶೆಟ್ಟಿ ಅವರು ತುಳು ಕೂಟ ಕತಾರ್’ಗೆ ಮೂರು ಭಾರಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೋಕ್ತೆಸರರಾಗಿಯೂ ರವಿ ಶೆಟ್ಟಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಸ್ನೇಹಪರ, ಜನಪರ ಕೆಲಸಗಳಿಂದ ಜನ ಮೆಚ್ಚುಗೆಗೆ ಪಾತ್ರವಾಗಿರುವ ರವಿ ಶೆಟ್ಟಿ ಅವರು ಈಗಾಗಲೇ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Pages