ಕುದ್ಕಾಡಿ ವಿಶ್ವನಾಥ ರೈಯವರು ನೃತ್ಯದ ಮೂಲಕ ತುಳು ಭಾಷೆಯ ಮಾನ್ಯತೆ ಹೋರಾಡಿದರು : ಪ್ರೊ. ವಿವೇಕ ರೈ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕುದ್ಕಾಡಿ ವಿಶ್ವನಾಥ ರೈಯವರು ನೃತ್ಯದ ಮೂಲಕ ತುಳು ಭಾಷೆಯ ಮಾನ್ಯತೆ ಹೋರಾಡಿದರು : ಪ್ರೊ. ವಿವೇಕ ರೈ

Share This
BUNTS NEWS, ಮಂಗಳೂರು: ನಮ್ಮನಗಲಿದ ಹಿರಿಯ ತುಳು ವಿದ್ವಾಂಸ ಕುದ್ಕಾಡಿ ವಿಶ್ವನಾಥ ರೈ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಮುಖ್ಯವಾಗಿ ನೃತ್ಯ ಪ್ರಕಾರದ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ಸಾಕಷ್ಟು ಕೊಡುಗೆ ನೀಡಿದ ಅಪರೂಪದ ತುಳು ಅಭಿಮಾನಿ ಎಂದು ಪ್ರೊ. ವಿವೇಕ ರೈಯವರು ಹೇಳಿದರು.
ಇತ್ತೀಚೆಗೆ ನಿಧನರಾದ ಹಿರಿಯ  ವಿದ್ವಾಂಸ ಹಾಗೂ ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಸಾಲಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕುದ್ಕಾಡಿಯವರು ಕೂಡ ಅಕಾಡೆಮಿಯ ಸದಸ್ಯರಾಗಿದ್ದರು. ತುಳು ಭಾಷೆ ಹಾಗೂ ಸಂಸ್ಕøತಿಯ  ಬೆಳವಣಿಗೆಗಾಗಿ ಅವರ ಜೊತೆಯಾಗಿ ಕೆಲಸ ಮಾಡುವ ಅವಕಾಶವು ನನಗೆ ಲಭಿಸಿತ್ತು. ಶಿಕ್ಷಕರಾಗಿ, ನೃತ್ಯಗುರುವಾಗಿ, ಕನ್ನಡ ತುಳು ಲೇಖಕರಾಗಿ, ಸಂಶೋಧಕರಾಗಿ ಅಪಾರವಾದ ಜ್ಞಾನ ಸಂಶೋಧನ  ಪ್ರವೃತ್ತಿ ಹೊಂದಿದ ಅಪೂರ್ವ ವ್ಯಕ್ತಿಯಾಗಿದ್ದರು ಎಂದರು.

ಅದ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿಯವರು ಮಾತನಾಡಿ, ಕುದ್ಕಾಡಿಯವರು ತುಳುವಿನ ಯಾವುದೇ ಕಾರ್ಯಕ್ರಮವಿರಲಿ ಸಮ್ಮೇಳನವಿರಲಿ ಅಲ್ಲಿ ಕಾಣಿಸಿಕೊಡು ತನ್ನ ನಿಲುವನ್ನು ಎತ್ತಿ ತೋರಿಸುವ ವ್ಯಕ್ತಿತ್ವ ಅವರದೆಂದರು.

ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ  ಬಿ. ಸದಸ್ಯರುಗಳಾದ ತಾರಾನಾಥ ಗಟ್ಟಿ ಕಾಪಿಕಾಡ್, ಬೆನೆಟ್ ಜಿ. ಅಮ್ಮನ್ನ, ಪ್ರಭಾಕರ ನೀರುಮಾರ್ಗ, ಪ್ರಭಾಕರ  ಬಿ., ಡಾ. ವಾಮನ್ ನಂದಾವರ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Pages