ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನಿಂದ ನುಡಿನಮನ
BUNTS NEWS, ಮಂಗಳೂರು: ಕುದ್ಕಾಡಿ ವಿಶ್ವನಾಥ ರೈಯವರು ಅವಿಭಜಿತ ದಕ್ಷಿಣ
ಕನ್ನಡ ಜಿಲ್ಲೆಯ ಹಿರಿಯ ನೃತ್ಯಗುರುಗಳು ಹೆಸರಾಂತ ಸಾಹಿತಿಗಳು. ಅವರು
ತುಳುನಾಡಿನ ಸಾಂಸ್ಕøತಿಕ ರಾಯಭಾರಿ
ಅವರನ್ನು ಕಳೆದುಕೊಂಡ ಸಾಂಸ್ಕøತಿಕ ಲೋಕ ಬಡವಾಗಿದೆ
ಎಂದು ಇಂಟರ್ ನ್ಯಾಶನಲ್
ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ನಿಧನರಾದ ಹಿರಿಯ ನೃತ್ಯ
ಶಿಕ್ಷಕ ಹಾಗೂ ವಿದ್ವಾಂಸ ಕುದ್ಕಾಡಿ
ವಿಶ್ವನಾಥ ರೈ ಅವರಿಗೆ ಬಲ್ಮಠದ ಕುಡ್ಲ ಪೆವಿಲಿನ್ನಲ್ಲಿ ಟ್ರಸ್ಟ್ ವತಿಯಿಂದ
ಆಯೋಜಿಸಿದ್ದ ‘ನುಡಿನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 'ಸದಾಶಯ' ತ್ರೈಮಾಸಿಕದ ಪ್ರಧಾನ ಸಂಪಾದಕ ಪ್ರೊ.
ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ
ಸಲ್ಲಿಸಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಸ್ಮರಿಸಿಕೊಂಡರು.
ಕುದ್ಕಾಡಿಯವರು ತುಳುನಾಡು ಕಂಡ ಓರ್ವ ಬಹುಶ್ರುತ ವಿದ್ವಾಂಸರು
ಇಂಡಿಯನ್ ಮತ್ತು ಕ್ಯಾಂಡಿಯನ್ ನೃತ್ಯದಲ್ಲಿ
ಅಪಾರ ಜ್ಞಾನ ಹೊಂದಿ ನೂರಾರು
ಶಿಷ್ಯಯರನ್ನು ಸಿದ್ದಗೊಳಿಸಿದ್ದಲ್ಲದೆ
ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದವರು.
ಅವರ ನರ್ತನ ಜಗತ್ತು
ಕೃತಿ ನೃತ್ಯಾಭ್ಯಾಸಿಗಳಿಗೆ ಕೈಪಿಡಿಯಿದ್ದಂತೆ, ಕನ್ನಡ ಮತ್ತು ತುಳು
ಭಾಷೆಗಳಲ್ಲಿ 36 ಕೃತಿಗಳನ್ನು ಬರೆದಿರುವ ಅವರು ಉಡುಪಿಯ ತುಳು
ಲಿಪಿ ಸಂಶೋಧನಾ ಕೇಂದ್ರದ ತಜ್ಞರಾಗಿ,
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ
ಸ್ಥಾಪಕ ಸದಸ್ಯರಾಗಿ, ಪುತ್ತೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ
ನಿರಂತರ ಕ್ರೀಯಶೀಲರಾಗಿದ್ದ ಇವರು ತುಳು ಅಕಾಡೆಮಿ
ಸೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ, ಕರ್ನಾಟಕ ಕಲಾಶ್ರೀಯ ಹಾಗೂ ಇತರ
200ಕ್ಕಿಂತಲೂ ಅಧಿಕ ಪ್ರಶಸ್ತಿ ಗೌರವಗಳಿಗೆ
ಪಾತ್ರರಾದ ವಿಶ್ವನಾಥ ರೈ ಯವರು ತಮ್ಮ
ಬದುಕಿನ ಕೊನೆಯವರೆಗೂ ತುಳು ರಾಜ್ಯದ ಕನಸು
ಕಂಡವರು ಎಂದು ಭಾಸ್ಕರ ರೈ
ಕುಕ್ಕುವಳ್ಳಿ ನುಡಿದರು.
ಸಂಘಟ ನಾ ಕಾರ್ಯದರ್ಶಿ ರಾಜಗೋಪಾಲ
ರೈ, ಎಂ. ಸುಂದರ ಶೆಟ್ಟಿ
ಬೆಟಂಪಾಡಿ ಮತ್ತು ಕದ್ರಿನವನೀತ ಶೆಟ್ಟಿ ಗತಿಸಿದವರ ಗುಣಗಾನ
ಮಾಡಿದರು. ಯುವ ವಿಭಾಗದ ಅಧ್ಯಕ್ಷ
ದೇವಿಚರಣ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ವಿಜಯಲಕ್ಷ್ಮೀ
ಬಿ.
ಶೆಟ್ಟಿ ವಂದಿಸಿದರು.