BUNTS NEWS, ದುಬಾಯಿ: ಸಾರ್ವಜನಿಕ ಸತ್ಯನಾರಾಯಣ ಸೇವಾ ಸಮಿತಿ ದುಬಾಯಿ
ವತಿಯಿಂದ 11ನೇ ವರ್ಷದ ಸಾರ್ವಜನಿಕ
ಸತ್ಯನಾರಾಯಣ ಪೂಜೆಯು ಡಿಸೆಂಬರ್ 14ರಂದು
ಶುಕ್ರವಾರ ನಗರದ ಬರ್ ದುಬಾಯಿಯ
ಸಿಂಧಿ ಸೆರೆಮೊನಿಯಲ್ ಸಭಾಂಗಣದಲ್ಲಿ ಭಕ್ತಿ
ಸಡಗರದಿಂದ ಜರಗಿತು.
ಬೆಳಿಗ್ಗೆ
ಶ್ರೀ ದೇವರ ಪ್ರತಿಷ್ಠಾಪನೆ ಹಾಗೂ
ದೀಪ ಪ್ರಜ್ವಲನೆಯೊಂದಿಗೆ ಪೂಜಾ ಕಾರ್ಯಕ್ರಮ ಆರಂಭಗೊಂಡಿತು.
11 ಗಂಟೆಗೆ ಶ್ರೀ ಡಾ. ಗುರುದಾಸ್
ರವರಿಂದ ಹರಿಕಥಾ
ಸಂಕೀರ್ತನ ನೆರವೇರಿತು. 1 ಗಂಟೆಗೆ ಶ್ರೀ ದೇವರಿಗೆ
ಮಹಾಪೂಜೆ ಮಂಗಳಾರತಿ ಜರಗಿತು.
ಪೂಜೆಯ ನಂತರ ಹರಿಕಥಾ ಸಂಕೀರ್ತನ
ಕಾರ್ಯಕ್ರಮ ನೆರವೇರಿಸಿಕೊಟ್ಟ ಶ್ರೀ ಡಾ. ಗುರುದಾಸ್
ರವರಿಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಸಮಿತಿಯ ವತಿಯಿಂದ
ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಸತೀಶ್
ಪೂಜಾರಿ, ವಿಶ್ವನಾಥ ಶೆಟ್ಟಿ, ಶಾಂತರಾಮ ಆಚಾರ್ಯ,
ದಿನೇಶ್ ಆಚಾರ್ಯ ನೆರವೇರಿಸಿದರು. ಗಣೇಶ್
ರೈ ನಿರೂಪಣೆಗೈದರು.
ಗಮ್ಮತ್ ಕಲಾವಿದರ ನಾಟಕಕ್ಕೆ
ಮುಹೂರ್ತ:
ಪೂಜೆಯ ಸಮಯದಲ್ಲಿ ಗಮ್ಮತ್ ಕಲಾವಿದರು ದುಬಾಯಿ
ಇದರ 6ನೇ ವರ್ಷದ ನಾಟಕ
ಮುಹೂರ್ತ ಜರಗಿತು. ಪೂಜೆಯ ಪುರೋಹಿತರು
ನಾಟಕದ ಪ್ರತಿಯನ್ನು ಉದ್ಯಮಿ ಹರೀಶ್ ಬಂಗೇರರವರಿಗೆ
ಹಾಗು ನಿರ್ದೇಶಕ ವಿಶ್ವನಾಥ
ಶೆಟ್ಟಿಯವರಿಗೆ ನೀಡಿದರು.ಗಮ್ಮತ್ ಕಲಾವಿದರು
ದುಬಾಯಿಯ ಅಧ್ಯಕ್ಷರಾದ ಶ್ರೀಮತಿ ಸುವರ್ಣ ಸತೀಶ್
ಪೂಜಾರಿ, ವಾಸು ಶೆಟ್ಟಿ, ಚಿತ್ರ
ಶೆಟ್ಟಿ ಹಾಗೂ ತಂಡದ ಸದಸ್ಯರು
ಉಪಸ್ಥಿತರಿದ್ದರು. ರಾಜೇಶ್ ಕುತ್ತಾರ್ ಕಾರ್ಯಕ್ರಮ
ನಿರೂಪಣೆಗೈದರು. ನಂತರ ಅನ್ನದಾನ ಜರಗಿತು.
[ವರದಿ : ವಿಜಯಕುಮಾರ್
ಶೆಟ್ಟಿ
ಮಜಿಬೈಲ್
ದುಬಾಯಿ]