ಭವಾನಿ ಫೌಂಡೇಶನ್’ಗೆ ರಾಷ್ಟ್ರೀಯ ಉದ್ಯೋಗ ಸಮ್ಮಾನ ಪ್ರಶಸ್ತಿ ಗೌರವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಭವಾನಿ ಫೌಂಡೇಶನ್’ಗೆ ರಾಷ್ಟ್ರೀಯ ಉದ್ಯೋಗ ಸಮ್ಮಾನ ಪ್ರಶಸ್ತಿ ಗೌರವ

Share This
BUNTS NEWS, ಮಂಗಳೂರುದೆಹಲಿಯ ನ್ಯಾಷನಲ್ ಎಚುವರ್ಸ್ ರೆಕೋಗ್ನಿಷನ್  ಫೋರಂ ಸಂಸ್ಥೆಯ ವಾರ್ಷಿಕ ರಾಷ್ಟ್ರ ಮಟ್ಟದ ಪ್ರಶಸ್ತಿಯು ಪ್ರತಿಷ್ಠಿತ  ಸಾಮಾಜಿಕ ಸಂಸ್ಥೆಯಾಗಿರುವ ಭವಾನಿ  ಫೌಂಡೇಶನ್ಗೆ  ಲಭಿಸಿದೆ.
ಭವಾನಿ ಶಿಪ್ಟಿಂಗ್ ಸರ್ವಿಸಸ್ ಸಂಸ್ಥೆಯ ಮೂಲಕ ಪ್ರತಿಷ್ಠಿತ ಉದ್ಯಮಿ ಎನಿಸಿಕೊಂಡಿರುವ  ಕೆ.ಡಿ ಶೆಟ್ಟಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿ ರುವ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್ಗೆ ಪ್ರಸ್ತುತ  ರಾಷ್ಟ್ರೀಯ ಉದ್ಯೋಗ ಸಮ್ಮಾನ ಪ್ರಶಸ್ತಿ ಲಭಿಸಿದೆ.

ಡಿ. 7 ರಂದು ನವದೆಹಲಿಯಲ್ಲಿ  ನ್ಯಾಷನಲ್ ಎಚುವರ್ಸ್ ರೆಕೊಗ್ನಿಷನ್ ಫೋರಂ  ಸಂಸ್ಥೆಯು ಆಯೋಜಿಸಿದ ಪ್ರಶಸ್ತಿ  ಪ್ರಧಾನ ಸಮಾರಂಭದಲ್ಲಿ ಉದ್ಯಮಿ,  ಸಮಾಜ ಸೇವಕ ಕೆ.ಡಿ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಭವಾನಿ  ಶಿಪ್ಟಿಂಗ್ ಸರ್ವಿಸಸ್ ಇಂಡಿಯಾ ಫೈವೇಟ್ ಲಿಮಿಟೆಡ್ ಮಹಾ ಪ್ರಬಂಧಕ  ಮನೋಜ್ ಶುಕ್ಲ ಅವರು ಭವಾನಿ ಫೌಂಡೇಷನ್ ಸಂಸ್ಥೆಯ ಪರವಾಗಿ  ಪ್ರಶಸ್ತಿನ್ನು ಸ್ವೀಕರಿಸಿದರು.

ಕಳೆದ ನಾಲ್ಕು  ವರ್ಷಗಳಲ್ಲಿ ಭವಾನಿ ಫೌಂಡೇಶನ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಇನ್ನಿತರ  ಕ್ಷೇತ್ರಗಳಲ್ಲಿ  ಸಲ್ಲಿಸುತ್ತಿರುವ ಅಪಾರ ಸೇವೆಯನ್ನು  ಪರಿಗಣಿಸಿ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಮುಂಬಯಿ ಹಾಗೂ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಚಾರವಿಲ್ಲದೆ ನಿರಂತರ ವಾಗಿ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಭವಾನಿ ಫೌಂಡೇಶನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಆದಿವಾಸಿ ಜನಾಂಗವಿರುವ ಪ್ರದೇಶಗಳಾದ  ಖಾಲಾಪುರ, ಬಿಲ್ವಾಲೆ, ಠಾಕೂರ್ ವಾಡಿ, ಪಿರ್ಕಟ್ವಾಡಿ ಹಾಗೂ ಬಿಲ್ ವಾಲೆ ಜಿಲ್ಲಾ ಪರಿಷದ್ ಆದಿವಾಸಿ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ದುರಸ್ಥಿಗೈದು ನೂರಾರು  ಮಕ್ಕಳ ಬಾಳಿಗೆ  ಬೆಳಕು ನೀಡಿದೆ.

ಅಲ್ಲದೆ ಆದಿವಾಸಿ ಜನಾಂಗದವ ರಿಗಾಗಿ 400 ಮಂದಿ ಕೂರುವ ಸಭಾಂಗಣವೊಂದನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ  ಸಿದ್ಧತೆ ನಡೆಸಲಾಗುತ್ತಿದೆ. ಮರಾಠಿ ಮಣ್ಣಿನಲ್ಲಿ ಮತ್ತು ತಾಯ್ನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದವರ ಕಷ್ಟ-ಕಾರ್ಪಣ್ಯಗಳಿಗೆ  ಸದಾ ಸ್ಪಂದಿಸುತ್ತಿರುವ ಸಂಸ್ಥೆಯು ಈಗಾಗಲೇ ತುಳು-ಕನ್ನಡಿಗರ ಮನ-ಮನೆಗಳನ್ನು ಗೆಲ್ಲುವಲ್ಲಿ ಯಶಸ್ವಿ ಯಾಗಿದೆ. ಜಾತಿ, ಮತ,  ಧರ್ಮವನ್ನು ಮರೆತು ಎಲ್ಲರು ಸಮಾನರು ಎಂಬ ದೃಷ್ಟಿಯಿಂದ ಸಂಸ್ಥೆಯು ಸೇವೆಯಲ್ಲಿ ತೊಡಗಿದ್ದು, ಈಗಾಗಲೇ ಕೋಟ್ಯಾಂತರ ರೂ.ಗಳನ್ನು ಸಮಾಜ ಸೇವೆಗಾ ಗಿಯೇ ವ್ಯಯಿಸಿದ ಹೆಗ್ಗಳಿಕೆ  ಹೊಂದಿದೆ.

ಭವಾನಿ ಫೌಂಡೇಶನ್  ಸಮಾನ ಮನಸ್ಕ ವಿಶ್ವಸ್ತರು ಮತ್ತು ಸದಸ್ಯರ ಸಾಘಿಕ ಪ್ರಯತ್ನದ ಫಲದಿಂದ ಹಲವಾರು ಪ್ರಶಸ್ತಿಪುರಸ್ಕಾರಗಳು ಲಭಿಸುತ್ತಿವೆ. ಇದರಿಂದಾಗಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತಿದೆ. ಪ್ರಶಸ್ತಿ-ಪ್ರಚಾರಗಳಿಗೋಸ್ಕರ ಸಂಸ್ಥೆಯು ಸಮಾಜ ಸೇವೆಯಲ್ಲಿ ತೊಡಗಿಲ್ಲ. ದೀನ-ದಲಿತರ ಸೇವೆ ಸಂಸ್ಥೆಯ ಉದ್ದೇಶವಾಗಿದ್ದು ಭವಿಷ್ಯ ದಲ್ಲೂ ಇದು ಮುಂದುವರಿಯಲಿದೆ ಎಂದು  ಭವಾನಿ ಫೌಂಡೇಶನ್  ಸಂಸ್ಥೆಯ ಸಂಸ್ಥಾಪಕ  ಕೆ.ಡಿ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pages