BUNTS NEWS, ಸುರತ್ಕಲ್: ಬಂಟರ ಸಂಘ ಬಜಪೆ
ವಲಯ ಇದರ ಆಶ್ರಯದಲ್ಲಿ ಸುಂಕದಕಟ್ಟೆ
ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು
ಮೈದಾನ ದಲ್ಲಿ ಜರಗಿದ ತಾಲೂಕು
ಮಟ್ಟದ `ಬಂಟೆರ್ನ ಗೊಬ್ಬುಲು' ಕ್ರೀಡಾಕೂಟದಲ್ಲಿ
ಸುರತ್ಕಲ್ ಬಂಟರ ಸಂಘವು ಹಗ್ಗ
ಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ಮತ್ತು ಮಹಿಳೆಯರ
ತಂಡವು ಪ್ರಥಮ ಸ್ಥಾನಗಳನ್ನು ಹಾಗೂ
ಮಹಿಳೆಯರ ತ್ರೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ
ಸ್ಥಾನವನ್ನು ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ
ಬಂಟರ ಯಾನೆ ನಾಡವರ ಮಾತೃ
ಸಂಘದ ಪ್ರಧಾನ ಕಾರ್ಯದರ್ಶಿ ವಸಂತ
ಶೆಟ್ಟಿ, ಎಕ್ಕಾರ್ ಬಂಟರ ಸಂಘದ
ಅಧ್ಯಕ್ಷ ರತ್ನಾಕರ ಶೆಟ್ಟಿ, ಕಾವೂರು
ಬಂಟರ ಸಂಘದ ಅಧ್ಯಕ್ಷ ಆನಂದ
ಶೆಟ್ಟಿ ವೇಣೂರು ಹಾಗೂ
ಬಜಪೆ ವಲಯ ಬಂಟರ ಸಂಘದ
ಅಧ್ಯಕ್ಷ ವಿಜಯನಾಥ ವಿಠಲ್ ಶೆಟ್ಟಿ
ಬಹುಮಾನ ವಿತರಿಸಿದರು.
ಕ್ರೀಡಾಕೂಟದಲ್ಲಿ
ಸುರತ್ಕಲ್ ಬಂಟರ ಸಂಘದ ಸದಸ್ಯರು
ಓಟ ಸ್ಪರ್ಧೆ, ರಿಲೇ,
ಪೆನಾಲ್ಟಿ ಶೂಟೌಟ್
ಮೊದಲಾದ ಸ್ಫರ್ಧೆಗಳಲ್ಲಿ ಪ್ರಶಸ್ತಿ ಪಡೆದರು. ಮಹಿಳೆಯರ
ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸಾಥ್ವಿ
ಶೆಟ್ಟಿ ಸುರತ್ಕಲ್ ಉತ್ತಮ ಆಟ
ಗಾರ್ತಿ ಪ್ರಶಸ್ತಿ ಹಾಗೂ ಸಾನ್ವಿ ಶೆಟ್ಟಿ ಪಡುಪದವು
ಉತ್ತಮ ಆಲ್
ರೌಂಡರ್ ಪ್ರಶಸ್ತಿಗಳನ್ನು ಗಳಿಸಿದರು.
ಮಹಿಳೆಯರ
ತ್ರೋ ಬಾಲ್ ಪಂದ್ಯಾಟದಲ್ಲಿ
ಸೆಮಿಫೈನಲ್ನಲ್ಲಿ ಸುರತ್ಕಲ್ ಎ
ತಂಡವು ಬಜಪೆ
ಬಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಅದೇ ರೀತಿ ಇನ್ನೊಂದು ಪಂದ್ಯದಲ್ಲಿ
ಸುರತ್ಕಲ್ನ ಬಿ ತಂಡವು
ಬಜಪೆ ಎ
ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಫೈನಲ್ನಲ್ಲಿ ಸುರತ್ಕಲ್ನ ಎ
ತಂಡವು ಸುರತ್ಕಲ್ ಬಿ ತಂಡವನ್ನು ಸೋಲಿಸಿ
ಪ್ರಶಸ್ತಿ ಪಡೆಯಿತು.
ಹಗ್ಗಾ ಜಗ್ಗಾಟ ಸ್ಪರ್ಧೆಯಲ್ಲಿ ಮಹಿಳೆಯರ
ತಂಡವು ಫೈನಲ್ನಲ್ಲಿ ಸುರತ್ಕಲ್ ತಂಡ
ಉಳ್ಳಾಲ ತಂಡದ ಎದುರು 2-1 ಅಂತರದಲ್ಲಿ
ಗೆದ್ದು ಕೊಂಡಿತು. ಪುರುಷರ ವಿಭಾಗದ ಹಗ್ಗ
ಜಗ್ಗಾಟ ಸ್ಪರ್ಧೆಯಲ್ಲಿ ಫೈನಲ್ನಲ್ಲಿ ಸುರತ್ಕಲ್
ತಂಡ ಬಜಪೆ ತಂಡವನ್ನು 2-0 ಅಂತರದಲ್ಲಿ
ಸೋಲಿಸಿ ಪ್ರಶಸ್ತಿ
ಪಡೆಯಿತು.
ಸುರತ್ಕಲ್
ಬಂಟರ ಸಂಘದ ಅಧ್ಯಕ್ಷ ಸುಧಾಕರ
ಎಸ್ ಪೂಂಜ, ಕಾರ್ಯದರ್ಶಿ ಲೋಕಯ್ಯ
ಶೆಟ್ಟಿ ಮುಂ ಚೂರು, ನಿಕಟ
ಪೂರ್ವ ಅಧ್ಯಕ್ಷ ಉಲ್ಲಾಸ್ ಆರ್.
ಶೆಟ್ಟಿ, ಕ್ರೀಡಾ
ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ತಡಂಬೈಲ್ಗುತ್ತು,
ಗುಣಶೇಖರ ಶೆಟ್ಟಿ ಕಟ್ಲ, ವಿದ್ಯಾಚರಣ್
ಭಂಡಾರಿ, ಪುಷ್ಪರಾಜ ಶೆಟ್ಟಿ ಕುಡುಂಬೂರು, ಕಿರಣ್
ಪ್ರಸಾದ್ ರೈ, ಅಕ್ಷತಾ ಶೆಟ್ಟಿ,
ಬಬಿತಾ ಶೆಟ್ಟಿ, ವೇದಾವತಿ ಶೆಟ್ಟಿ
ಮೊದಲಾದವರು ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದಲ್ಲಿ
ಬಜಪೆ ಬಂಟರ ಸಂಘದ ಉಪಾಧ್ಯಕ್ಷ
ರಿತೇಶ್ ಶೆಟ್ಟಿ, ಪ್ರಧಾನ
ಕಾರ್ಯದರ್ಶಿ ಸುಕೇಶ್ ಮಾಣಾೈ, ಖಜಾಂಚಿ
ಹೇಮಂತ್ ಶೆಟ್ಟಿ, ಆರ್.ಎನ್.
ಶೆಟ್ಟಿ ಕಳವಾರು, ವರಪ್ರಸಾದ್ ಶೆಟ್ಟಿ,
ಗುರುಪುರ ಬಂಟರ ಸಂಘದ ಅಧ್ಯಕ್ಷ ರಾಜ್
ಕುಮಾರ್ ಶೆಟ್ಟಿ, ಉಳ್ಳಾಲ ಬಂಟರ
ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.