ದುಬೈ: ಕರ್ನಾಟಕ ಸಂಘ ಶಾರ್ಜಾ
ತನ್ನ 16ನೇ ವಾರ್ಷಿಕೋತ್ಸವ, ಕರ್ನಾಟಕ
ರಾಜ್ಯೋತ್ಸವ ಮತ್ತು ಪ್ರತಿಷ್ಠಿತ ಮಯೂರ
ಪ್ರಶಸ್ತಿ ಪ್ರಧಾನ ಸಮಾರಂಭವು ನ.16ರಂದು ಸಂಜೆ 4ಕ್ಕೆ
ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್
ಸಭಾಂಗಣದಲ್ಲಿ ಸಂಭ್ರಮದಲ್ಲಿ ಜರಗಿತು.
ಸಮಾರಂಭದ
ಮುಖ್ಯ ಅತಿಥಿಗಳಾಗಿ ಕನ್ನಡದ ಹಿರಿಯ ನಟ
ಅನಂತ್ ನಾಗ್, ಅವರ ಪತ್ನಿ
ಗಾಯತ್ರಿ ಅನಂತ್ ನಾಗ್ ಸೇರಿದಂತೆ
ಮತ್ತಿತರರು ಭಾಗವಹಿಸಲಿದ್ದರು.
ಈ ಬಾರಿಯ ಪ್ರತಿಷ್ಠಿತ
'ಮಯೂರ ಪ್ರಶಸ್ತಿ'ಯನ್ನು ಉದ್ಯಮಿ, ದಾನಿ,
ಐವರಿ ಗ್ರ್ಯಾಂಡ್ ಹೋಟೆಲ್ ಸಮೂಹ ಸಂಸ್ಥೆಗಳ
ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜ ಅವರಿಗೆ
ನೀಡಿ ಗೌರವಿಸಲಾಯಿತು. ಈ ಸಂದರ್ಭ ಕರ್ನಾಟಕ ಸಂಘ ಶಾರ್ಜಾ ಸಮಿತಿಯು ಕನ್ನಡ
ಚಿತ್ರರಂಗದ ಹಿರಿಯ ನಟ ಅನಂತನಾಗ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿತು.
ದುಬೈಯ ಹೆಸರಾಂತ ಉದ್ಯಮಿ, ಸಿನೆಮಾ
ನಿರ್ಮಾಪಕ, ಖ್ಯಾತ ಗಾಯಕರೂ ಆಗಿರುವ
ಹರೀಶ ಶೇರಿಗಾರ್ ಸಾರಥ್ಯದಲ್ಲಿ ಸುಮಧುರ ಕಂಠಸಿರಿಯ ಖ್ಯಾತ
ಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ
ನಡೆಯಿತು. ಮಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ
ರಾಜ್ ಗೋಪಾಲ್ ಮತ್ತು ಅವರ
ತಂಡ ಸಂಗೀತ ಕಾರ್ಯಕ್ರಮ ನೀಡಿತು.
ಸಮಾರಂಭದಲ್ಲಿ
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ನಟ ಅನಂತ್ ನಾಗ್,
ಯುಎಇಯ ಹೆಸರಾಂತ ಉದ್ಯಮಿ ಹರೀಶ್
ಶೇರಿಗಾರ್, ರೊನಾಲ್ಡ್ ಕುಲಾಸೋ, ರಾಮ ಚಂದ್ರ
ಹೆಗಡೆ, ಮಾರ್ಕ್ ಡೆನ್ನಿಸ್, ಶಾರ್ಜಾ
ಕರ್ನಾಟಕ ಸಂಘದ ಅಧ್ಯಕ್ಷ ಆನಂದ್
ಬೈಲೂರು, ನೋಯೆಲ್ ಅಲ್ಮೇಡಾ ದೀಪ
ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಅನಂತ್ ನಾಗ್ ಹಾಗು
ಪತ್ನಿ ಗಾಯತ್ರಿ ಅವರನ್ನು ವೇದಿಕೆಯಲ್ಲಿದ್ದ
ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಶಾರ್ಜಾ
ಕರ್ನಾಟಕ ಸಂಘ ಪ್ರತಿ ವರ್ಷ
ಸಂಘದ ಒಳಿತಿಗಾಗಿ ಶ್ರಮಿಸುವವವರಿಗೆ ನೀಡುವ ಪ್ರಶಸ್ತಿಯನ್ನು ಉದ್ಯಮಿ
ಸತೀಶ್ ಪೂಜಾರಿ ಹಾಗು ಅವರ
ಧರ್ಮಪತ್ನಿ ಸುವರ್ಣ ಸತೀಶ್ ಅವರಿಗೆ
ಗಣ್ಯರು ನೀಡಿ ಸನ್ಮಾನಿಸಿದರು. ದುಬೈಯಲ್ಲಿ
ಕನ್ನಡ ಪಾಠ ಶಾಲೆ ನಡೆಸುತ್ತಿರುವ
ಶಶಿಧರ್ ನಾಗರಾಜಪ್ಪ ಹಾಗು ಅವರ ಧರ್ಮಪತ್ನಿಗೂ
ಈ ವೇಳೆ ಸನ್ಮಾನಿಸಿ
ಅಭಿನಂದಿಸಿದರು.
ಮನರಂಜನಾ
ಕಾರ್ಯಕ್ರಮದ ಭಾಗವಾಗಿ ವಿವಿಧ ನೃತ್ಯ
ತಂಡಗಳಿಂದ ನೃತ್ಯ, ಯಕ್ಷಗಾನ, ದೇಶ
ಭಕ್ತಿಯ ರೂಪಕಗಳು ಪ್ರದರ್ಶನಗೊಂಡಿತು. ಲೇಖಕ
ಗಣೇಶ ರೈ, ನವೀನ್ ಕೊಪ್ಪ,
ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.