ಮಂಗಳೂರು: ಜಾಗತೀಕರಣದ ಈ ಸಂದರ್ಭದಲ್ಲಿ ನಮಗೆ ನಾಡಭಾಷೆಯ ಜತೆಗೆ
ಇತರ ಭಾಷೆಯ ಅರಿವಿರಬೇಕೆಂದು ಬೆಸೆಂಟ್ ಮಹಿಳಾ
ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ
ಡಾI ಮೀನಾಕ್ಷಿ ರಾಮಚಂದ್ರ ಹೇಳಿದರು.
ಅವರು ಶಕ್ತಿನಗರದ
ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ,
ಶಕ್ತಿ ವಸತಿಯುತ ಶಾಲೆ ಹಾಗೂ
ಶಕ್ತಿ ಪ.ಪೂ ಕಾಲೇಜಿನ
ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ
ಕನ್ನಡ ನಾಡು, ನುಡಿ- ಅಂದು
ಇಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಕೇವಲ ನುಡಿಯಲ್ಲ
ಅದು ರಕ್ತದಲ್ಲಿ ಬೇರೆತಿರೋ ಶಕ್ತಿ. ಇಂದು ಮಕ್ಕಳಿಗೆ ಭಾಷಾಭಿಮಾನದ ಜತೆ ದೇಶಾಭಿಮಾನವನ್ನು ಬೆಳೆಸುವ
ಅಗತ್ಯವಿದೆ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಭಾಷೆಯ ಬಗೆಗೆ ಅಭಿಮಾನ ಹುಟ್ಟಿಕೊಳ್ಳತ್ತದೆ
ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ ಶಕ್ತಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ
ಪ್ರಭಾಕರ್.ಜಿ.ಎಸ್. ಮಾತನಾಡಿ,
ಕನ್ನಡನಾಡಿನ ಇತಿಹಾಸ 2 ಸಾವಿರ ವರ್ಷಗಳಿಗಿಂತಲೂ ಪುರಾತನವಾದುದು.
ಇಂತಹ ಹೆಮ್ಮೆಯ ನಾಡಿನಲ್ಲಿ ಜನ್ಮವೆತ್ತಿರುವ
ನಾವೆಲ್ಲರೂ ಪುಣ್ಯವಂತರು, ನಮ್ಮ ಭಾವನೆಗಳ
ಅಭಿವ್ಯಕ್ತಿಗೆ ನಮ್ಮ ಮಾತೃಭಾಷೆ ಕನ್ನಡವೇ
ಆಧಾರ. ಇಂದಿನ ಯುವ ಪೀಳಿಗೆಯವರು
ಕನ್ನಡ ಸಂಸ್ಕೃತಿಯನ್ನು ಉಳಿಸಲು ಹೆಚ್ಚು ಶ್ರಮಿಸಬೇಕೆಂದು
ಹೇಳಿದರು.
ಕಾರ್ಯಕ್ರಮದಲ್ಲಿ
ಇಂಚರ ತಂಡ ಉರ್ವಾ ಇವರಿಂದ
ಕನ್ನಡ ಗೀತೆ ಗಾಯನವು ನಡೆಯಿತು.
ಶಕ್ತಿ ಶಾಲೆ ಹಾಗೂ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು
ಕನ್ನಡ ಗೀತೆ ಗಾಯನ ನಡೆಸಿ
ಕನ್ನಡದ ಕಂಪನ್ನು ಪಸರಿಸಿದರು.
ಕಾರ್ಯಕ್ರಮದಲ್ಲಿ
ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ
ಪ್ರಧಾನ ಸಂಪಾದಕಿ ಶಹನಾಝ್, ಶ್ರೀ
ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನ್ಮಾಕ್, ಶಕ್ತಿ
ಎಜುಕೇಶನ್ ಟ್ರಸ್ಟಿ ಡಾ.ಮುರಳೀದಾರ್
ನ್ಮಾಕ್ ಪ್ರಧಾನ ಸಲಹೆಗಾರ ರಮೇಶ್.ಕೆ, ಅಭಿವೃದ್ಧಿ ಅಧಿಕಾರಿ
ನಸಿಮ್ಭಾನು ಉಪಸಿತ್ಥರಿದ್ದರು. ಕಾರ್ಯಕ್ರಮದ
ಸ್ವಾಗತವನ್ನು ಆಡಳಿತ ಅಧಿಕಾರಿ ಬೈಕಾಡಿ
ಜನಾರ್ದನ ಆಚಾರ್, ವಂದಾನರ್ಪಣೆಯನ್ನು ವಿದ್ಯಾರ್ಥಿ
ಮಧುರಾಜ್ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಕ್ಷಯ ಮತ್ತು ನಿರಂಜನ
ನಡೆಸಿಕೊಟ್ಟರು.