ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾದ ಕುಟುಂಬಕ್ಕೆ ಆರ್ಥಿಕ ಸಹಾಯಹಸ್ತ ನೀಡಿದ ಬಂಟ್ಸ್ ಒಮನ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾದ ಕುಟುಂಬಕ್ಕೆ ಆರ್ಥಿಕ ಸಹಾಯಹಸ್ತ ನೀಡಿದ ಬಂಟ್ಸ್ ಒಮನ್

Share This
BUNTS NEWS, ಒಮನ್: ಕೊಡಗಿನ ಮಕ್ಕಂದೂರು ಹೆಮ್ಮತ್ತಾಳು ಎಂಬಲ್ಲಿ ಪ್ರಾಕೃತಿಕ ವಿಕೋಪ ಭೂಕುಸಿತದಲ್ಲಿ ಸಂತ್ರಸ್ಥರಾಗಿರುವ ಬಂಟ ಕುಟುಂಬಕ್ಕೆ ಬಂಟ್ಸ್ ಒಮನ್ ರೂ.1 ಲಕ್ಷ ಸಹಾಯ ಧನ ನೀಡಿದೆ.
ಪ್ರಾಕೃತಿಕ ವಿಕೋಪ ಭೂಕುಸಿತದಲ್ಲಿ ಚಂದ್ರಾವತಿ ರೈ, ಪುತ್ರ ಉಮೇಶ್ ರೈರವರು ಮನೆ ಆಸ್ತಿ ಸಮೇತ ಕೊಚ್ಚಿ ಹೋಗಿದ್ದು ಇನ್ನಿಬ್ಬರು ಮಕ್ಕಳಾದ ಪ್ರಕಾಶ್ ರೈ ಮತ್ತು ವಸಂತ್ ರೈ ಎಲ್ಲವನ್ನೂ ಕಳೆದು ನಿರಾಶ್ರಿತರಾಗಿದ್ದರು. ಸಂತ್ರಸ್ಥ ಕುಟುಂಬಕ್ಕೆ ಸಂದೇಶ್ ರೈ ಬೋಳೋಡಿರವರು 'ಬಂಟ್ಸ್ ಓಮನ್' ಅಧ್ಯಕ್ಷರಾದ ಶಶಿಧರ ಶೆಟ್ಟಿ ಮಾಲಾರು ಮನವಿಗೆ ಸ್ಪಂದಿಸಿ ರೂ.1 ಲಕ್ಷ ಮೊತ್ತವನ್ನು ಮೃತರ ಕುಟುಂಬ ಖಾತೆಗೆ ವರ್ಗಾಯಿಸಿರುತ್ತಾರೆ.

ಶಶಿಧರ್ ಶೆಟ್ಟಿ ಮುಂದಾಳತ್ವದಲ್ಲಿ 'ಬಂಟ್ಸ್ ಒಮನ್' ಹಿಂದೆ ಹಲವು ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿದ್ದು ಶ್ಲಾಘನೆಗೆ ಪಾತ್ರವಾಗಿದೆ.

Pages