ಬಂಟ ಸಮಾಜದ ಹೆಮ್ಮೆಯ ದೊಡ್ಮನೆ: 110 ಸದಸ್ಯರ ಬಗ್ವಾಡಿ ‘ಮೆತ್ತಿನಮನೆ’ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ ಸಮಾಜದ ಹೆಮ್ಮೆಯ ದೊಡ್ಮನೆ: 110 ಸದಸ್ಯರ ಬಗ್ವಾಡಿ ‘ಮೆತ್ತಿನಮನೆ’

Share This
BUNTS NEWS, ಕುಂದಾಪುರ: ಬಂಟ ಸಮಾಜದ ಹಲವು ಪ್ರಮುಖ ಮನೆತನಗಳಲ್ಲಿ ಕುಂದಾಪುರ ತಾಲೂಕಿನ ನೂಜಾಡಿ ಗ್ರಾಮದ ಬಗ್ವಾಡಿಯ ‘ಮೆತ್ತಿನಮನೆ’ ಕೂಡ ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ.
ಬರೋಬ್ಬರಿ 110 ಜನ ಸದಸ್ಯರಿರುವ ಅವಿಭಕ್ತ ಕುಟುಂಬವನ್ನು ಹೊಂದಿರುವದು ‘ಮೆತ್ತಿನಮನೆ’ ಮನೆಯ ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಬಗ್ವಾಡಿಯ ಮೆತ್ತಿನಮನೆ ವೆಂಕಮ್ಮ ಶೆಡ್ತಿ ಹಾಗೂ ಹೊಳ್ಮಗೆ ರಾಮಣ್ಣ ಶೆಟ್ಟಿ ದಂಪತಿಗಳಿಗೆ 5 ಹೆಣ್ಣು ಹಾಗೂ 3 ಗಂಡು ಮಕ್ಕಳು. ಹಿರಿಯ ಮಗಳು ಪಾರ್ವತಿ ಶೆಟ್ಟಿಯವರಿಗೆ 86 ವರ್ಷ, ಸಹೋದರಿಯರಾದ ಲಕ್ಷ್ಮೀ ಮಂಜಯ್ಯ ಶೆಟ್ಟಿ, ಗುಲಾಬಿ ರಘು ಶೆಟ್ಟಿ, ಸಿಂಗಾರಿ ಮಂಜಯ್ಯ ಶೆಟ್ಟಿ, ಸುಮತಿ ಆನಂದ ಶೆಟ್ಟಿ, ಸಹೋದರರಾದ ಗೋಪಾಲಕೃಷ್ಣ ಶೆಟ್ಟಿ, ರಾಜೀವ್ಶೆಟ್ಟಿ ಹಾಗೂ ಬಿ.ಎನ್‌.ಶೆಟ್ಟಿ ಇದ್ದಾರೆ.

ಮೆತ್ತಿನ ಮನೆಯ 104 ವರ್ಷದ ಶತಾಯುಷಿ ವೆಂಕಮ್ಮ ಶೆಡ್ತಿಯವರು ನಿಧನದ ಬಳಿಕ ಅವರ ಹಿರಿಯ ಮಗಳು ಪಾರ್ವತಿ ಶೆಟ್ಟಿ ಅವರು ಮೆತ್ತಿನಮನೆಯ ಯಜಮಾನ್ತಿಯಾಗಿದ್ದಾರೆ.  ಪಾರ್ವತಿ ಶೆಟ್ಟಿ ಅವರ 4ನೇ ತಲೆಮಾರಿನ ಒಂದೂವರೆ ವರ್ಷದ ಸುಧನ್ವಾ ಕುಟುಂಬದ ಕಿರಿಯ ಕುಡಿಯಾಗಿದ್ದಾರೆ.

12 ಡಾಕ್ಟರ್’ಗಳು, 26 ಮಂದಿ ಇಂಜಿನಿಯರ್ಸ್, ವಿಜ್ಞಾನಿಗಳು ಮೆತ್ತಿನಮನೆಯಲ್ಲಿದ್ದಾರೆ: 110 ಜನ ಸದಸ್ಯರನ್ನು ಹೊಂದಿರುವ ಮೆತ್ತಿನಮನೆಯ ಕುಟುಂಬಿಕರು ವಿಶ್ವದೆಲ್ಲೆಡೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ 12 ಮಂದಿ ಡಾಕ್ಟರ್’ಗಳು, 26 ಮಂದಿ ಇಂಜಿನಿಯರ್’ಗಳು, ಇಂಡಿಯನ್ಇನ್ಸ್ಟಿಟ್ಯೂಟ್ಆಫ್ಸೈನ್ಸ್ನಲ್ಲಿ ವಿಜ್ಞಾನಿಯಾಗಿ, ಕೇಂದ್ರ ಸರ್ಕಾರದ ಸಂಪುಟ ಸಚಿವರ ಆಪ್ತ ಕಾರ್ಯದರ್ಶಿಯಾಗಿ, ವಿದೇಶಿ ಕಂಪೆನಿಯಲ್ಲಿ ಸಿಇಓ, ವಿಶ್ವವಿದ್ಯಾಲಯದ ಸೆನೆಟ್ಸದಸ್ಯರಾಗಿಯೂ ಹಾಗೂ ಪ್ರಮುಖ ಉದ್ಯಮಗಳನ್ನು ನಿರ್ವಹಿಸುತ್ತಿರುವುದು ‘ಮೆತ್ತಿನಮನೆ’ಯ ಹೆಗ್ಗಳಿಕೆಯಾಗಿದೆ. ಅಲ್ಲದೆ 24 ಮಂದಿನ ವಿದೇಶದ ಬೇರೆ ಬೇರೆ ಕಡೆ ಪ್ರಮುಖ ಉದ್ಯೋಗದಲ್ಲಿದ್ದಾರೆ.
ಮೆತ್ತಿನಮನೆಯ 5ನೇ ತಲೆಮಾರು)
(ಎಥಿಯೋಪಿಯಾ ಆಡಿಸ್ ಅಬಬಾದ ಪ್ರಮುಖ ಕೈಗಾರಿಕೋದ್ಯಮಿ ಬಿ. ಶೇಖರ ಶೆಟ್ಟಿ ಮೆತ್ತಿನಮನೆ)

[ಹೊಸದಾಗಿ ನಿರ್ಮಾಣಗೊಂಡಿರುವ ‘ಮೆತ್ತಿನಮನೆ’]
[ರಾಜೀವ್ ಗಾಂಧಿ ದಂತ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ 2ನೇ ಭಾರಿ ಆಯ್ಕೆಗೊಂಡ ಡಾ. ಸುನಿಲ್ ಶೆಟ್ರಿಗೆ ಕುಟುಂಬದ ಟ್ರಸ್ಟ್ ಅಧ್ಯಕ್ಷ ಬಿ.ಎನ್. ಶೆಟ್ರಿಂದ ಸನ್ಮಾನ]
[ಮೆತ್ತಿನಮನೆ ಕುಟುಂಬದ ಟ್ರಸ್ಟಿನ ಸಭೆ/ಚರ್ಚೆ]
(ತಾವು ಶಿಕ್ಷಣ ಪಡೆದ ಬಗ್ವಾಡಿ ಶಾಲೆಗೆ ಡಾ. ದಿನಕರ ಶೆಟ್ಟಿ  ಹಾಗೂ ಹುಬ್ಬಳ್ಳಿಯ ಉದ್ಯಮಿ ಇಂಜಿನಿಯರ್ ಪ್ರೇಮನಾಂದ ಶೆಟ್ಟಿ ಭೇಟಿ)
(ಡಾ. ದಿನಕರ ಶೆಟ್ರಿಂದ ಅವರ ಸಹೋದರ ಶೇಖರ ಶೆಟ್ರ ಆರೋಗ್ಯ ತಪಾಸಣೆ - ಅಮೇರಿಕಾದ ಡಾ.ದಿನಕರ ಶೆಟ್ಟಿ ಅವರ ಆರೋಗ್ಯ ಕೇಂದ್ರದಲ್ಲಿ]
 
(ಡಾ. ಕಿಶೋರ್ ಶೆಟ್ಟಿ ಮೆತ್ತಿನಮನೆ ಅವರ ಆಫ್ರಿಕಾ ಪ್ರವಾಸದ ಸಂದರ್ಭ)
ಕುಟುಂಬಿಕರ ಸಂವಹನಕ್ಕೆ ವಾಟ್ಸಾಪ್ ಗ್ರೂಪ್: ವಿಶ್ವದೆಲ್ಲೆಡೆ ಇರುವ ಮೆತ್ತಿನಮನೆ ಕುಟುಂಬದ ಸದಸ್ಯರು ಕುಟುಂಬದ ಕಾರ್ಯಕ್ರಮ, ಮತ್ತಿತರ ವಿಚಾರಗಳ ಮಾಹಿತಿ, ಚರ್ಚೆಗಾಗಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಅಲ್ಲದೆ ಊರ ಹಬ್ಬ, ಮಾರಣಕಟ್ಟೆ ಜಾತ್ರೆ, ಬಸ್ರೂರು ಚಿಕ್ಕು ದೈವದ ಮನೆ ಗೆಂಡ ಸೇವೆ ಹಾಗೂ ಕುಟುಂಬದ ಪೂಜೆ ಕಾರ್ಯಕ್ರಮದಲ್ಲಿ ಎಲ್ಲರೂ ಒಟ್ಟು ಸೇರುತ್ತಾರೆ.

ಬಿಎಂವಿಆರ್ಟ್ರಸ್ಟ್ಮೂಲಕ ಸಮಾಜಮುಖಿ ಕಾರ್ಯ: ಮೆತ್ತಿನಮನೆಯ ಸದಸ್ಯರು ಸೇರಿಕೊಂಡು ಮೆತ್ತಿನಮನೆಯ ಹಿರಿಯರ ಹೆಸರಿನಲ್ಲಿ ಬಗ್ವಾಡಿ ಮೆತ್ತಿನ ಮನೆ ಶ್ರೀಮತಿ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್‌ (ರಿ). ಸ್ಥಾಪಿಸಿದ್ದಾರೆ. ಈ ಟ್ರಸ್ಟ್ ಮೂಲಕ ಬಗ್ವಾಡಿ ಶಾಲೆಗೆ ನೂತನ ರಂಗಮಂಟಪ ನಿರ್ಮಾಣ, ಶಾಲಾ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತೃಸ್ತರಿಗೆ ನೆರವು, ಶಾಲಾ ಮಕ್ಕಳಿಗಾಗಿ ನೈತಿಕ ಮೌಲ್ಯವರ್ಧನ ಶಿಬಿರ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸಿಂಗಾರಿ ಶೆಟ್ಟಿಯವರ ಮಕ್ಕಳ ಸಾರಥ್ಯದಲ್ಲಿ ಹಳೆಯ ಮೆತ್ತಿನಮನೆಗೆ ಇಂದಿನ ಆಧುನಿಕತೆಗೆ ತಕ್ಕಂತೆ ಹೊಸರೂಪ, ವಿನ್ಯಾಸವನ್ನು ಮಾಡಲಾಗಿದ್ದು ನೂತನ ಮೆತ್ತಿನಮನೆಯ ಗೃಹಪ್ರವೇಶವು ನ.15ರಂದು ಸಂಭ್ರಮದಲ್ಲಿ ನಡೆದಿದೆ.
[ಹಳೆಯ ‘ಮೆತ್ತಿನಮನೆ’ ಫೋಟೊ]
[ದೀಪಗಳಿಂದ ಕಂಗೊಳಿಸುತ್ತಿರುವ ಹೊಸದಾಗಿ ನಿರ್ಮಾಣವಾದ ಮೆತ್ತಿನಮನೆ]
ಇಂತಹ ಅಪೂರ್ವ 110 ಜನ ಸದಸ್ಯರಿರುವ ಅವಿಭಕ್ತ ಕುಟುಂಬದ ಬಗ್ವಾಡಿ ಮೆತ್ತಿನಮನೆ ಸಮಾಜಕ್ಕೆ ಅತ್ಯುತ್ತಮ ಮಾದರಿಯಾಗಿದೆ. ಮೆತ್ತಿನಮನೆಯು ಬಂಟ ಸಮಾಜದ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾಗಿರೋದು ಬಂಟ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ.

Pages