ಬಸವಣ್ಣರ ಪ್ರತಿ ವಚನವು ಜೀವನದ ಮೌಲ್ಯವನ್ನು ಎತ್ತಿ ತೋರಿಸುತ್ತೆ : ಜಗನ್ನಾಥಪ್ಪ ಪನ್ಸಾಲೆ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517ಬಸವಣ್ಣರ ಪ್ರತಿ ವಚನವು ಜೀವನದ ಮೌಲ್ಯವನ್ನು ಎತ್ತಿ ತೋರಿಸುತ್ತೆ : ಜಗನ್ನಾಥಪ್ಪ ಪನ್ಸಾಲೆ

Share This
ಮಂಗಳೂರು: ಬಸವಣ್ಣರ ಪ್ರತಿ ವಚನವು ಜೀವನದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಜಾತಿ ಮತ ಭೇದ-ಭಾವವನ್ನು ಮಿರಿ ನಿಂತಿರುವುದಾಗಿ ಶರಣ ಜಗನ್ನಾಥಪ್ಪ ಪನ್ಸಾಲೆ ಹೇಳಿದರು.
ಅವರು ಶಕ್ತಿನಗರದ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಸಹಯೋಗದೊಂದಿಗೆ ‘ಅನುಭಾವ ಸಂಗಮ’ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ಉಪನ್ಯಾಸ ಮಾಡಿದರು. 1156ರಲ್ಲಿ ರಚನೆಯಾದ ಅನುಭವ ಮಂಟಪದಲ್ಲಿ ಜೀವನ ಮೌಲ್ಯಗಳ ಕುರಿತಂತೆ ಚರ್ಚೆಗಳು, ಟೀಕೆಗಳು ನಡೆಯತ್ತಿತ್ತು. ಶರಣರ ಮೂಲಕ ಬಸವಣ್ಣವರು ವಚನಗಳನ್ನು ಸ್ಪಷ್ಠಿಸುತ್ತಿದ್ದರು. ಅಂದಿನ ಕಾಲದಲ್ಲಿಯು ರಾಜಕೀಯ, ಶೈಕ್ಷಣಿಕ, ಆರ್ಥಿಕ, ನೈತಿಕ, ಆದ್ಯಾತ್ಮಿಕ ಚಿಂತನೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿತ್ತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪ. ಪೂ ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್ ಮಾತನಾಡಿ, ನಾವು ಬಸವಣ್ಣವರ ಆಚಾರ ವಿಚಾರ ಅಳವಡಿಸಿದಾಗ ಮಾತ್ರ ಜೀವನ ಮೌಲ್ಯಗಳ ಸುಧಾರಣೆ ಸಾಧ್ಯ. ಕಾಯಕವೇ ಕೈಲಾಸವಾಗಬೇಕು. ದುಡಿದು ತಿನ್ನುವ ಪ್ರವೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಬಸವಣ್ಣವರ ವಚನಗಳನ್ನು ರೂಢಿಸಿಕೊಂಡ ಹಾಗಾತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾೈಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‍ನ ಸದಸ್ಯೆ ಸಗುಣ ಸಿ ನಾೈಕ್, ರತ್ನಾವತಿ ಜೆ ಬೈಕಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಳು, ಕನ್ನಡ ವಚನಗಳ ಗಾಯನವು ಇಂಚರ ತಂಡ ಉರ್ವಾ ಇವರಿಂದ ನೆರವೇರಿತು. ಶಕ್ತಿ ಪ ಪೂ ಉಪನ್ಯಾಸಕಿ ಶಶಿಕಲಾ ನಿರೂಪಿಸಿದರು. ಸುಪ್ರಿಯ ಸ್ವಾಗತಿಸಿದರು. ನಿರಂಜನ್ ವಂದಿಸಿದರು.

Pages