ಕ್ರೀಡಾಲೋಕದ ದ್ರೋಣಾಚಾರ್ಯ ನಾರಾಯಣ ಆಳ್ವರವರಿಗೆ ವಿದಾಯಕೂಟ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕ್ರೀಡಾಲೋಕದ ದ್ರೋಣಾಚಾರ್ಯ ನಾರಾಯಣ ಆಳ್ವರವರಿಗೆ ವಿದಾಯಕೂಟ

Share This
ಮಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರದ ವಾಲಿಬಾಲ್ ತರಬೇತಿದಾರರಾಗಿ ಕ್ರೀಡಾ ಪ್ರಾಧಿಕಾರ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸತತ 32 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಎನ್. ನಾರಾಯಣ ಆಳ್ವರವರ ಸೇವೆ ಅನುಕರಣೀಯ ಎಂಬುದಾಗಿ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಕಾರ್ಪೋರೇಶನ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ತಾರಾನಾಥ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ವಾಲಿಬಾಲ್ gಬೇತುದಾರರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ  ಎನ್ ನಾರಾಯಣ ಆಳ್ವ ಇವರಿಗೆ ಕ್ರೀಡಾ ಇಲಾಖೆಯಿಂದ ಆಯೋಜಿಸಲಾದ ವಿದಾಯಕೂಟದ ಮುಖ್ಯ ಅತಿಥಿಯಾಗಿ ರೀತಿ ಹೇಳಿದರುನಾರಾಯಣ ಆಳ್ವರವರು ಸರಳ ಸಜ್ಜನಶೀಲ ವ್ಯಕ್ತಿತ್ವಹೊಂದಿದ್ದು ಅಂತರಾಷ್ಟ್ರೀಯಮಟ್ಟದ ವಾಲಿಬಾಲ್ ಆಟಗಾರರನ್ನು ರಾಜ್ಯಕ್ಕೆ ನೀಡಿದ ಹೆಗ್ಗಳಿಕೆಗೆ ಉಳ್ಳವರಾಗಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ  ಪ್ರದೀಪ್ ಡಿ ಸೋಜರವರು ಮಾತನಾಡುತ್ತಾ ಪ್ರತಿಭೆಗಳನ್ನು ಗುರುತಿಸಿ ಕಠಿಣ ತರಬೇತು ನೀಡಿ ಉತ್ತಮ ಮಟ್ಟದ ಕ್ರೀಡಾಳುಗಳನ್ನು ರೂಪಿಸುವ  ದ್ರೋಣಾಚಾರ್ಯರವರ ತಂತ್ರಗಾರಿಕೆ ಆಳ್ವರದ್ದು. ಇವರ ಗರಡಿಯಲ್ಲಿ ತರಬೇತು ಹೊಂದಿದ ಹಲವಾರು ವಾಲಿಬಾಲ್ ಕ್ರೀಡಾಪಟುಗಳು ಇಂದು ಅಂತರಾಷ್ಟ್ರೀಯಮಟ್ಟದಲ್ಲಿ ಮಿಂಚುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ನಿವೃತ್ತರು ಇಲಾಖೆಯು ತಮಗೆ ನೀಡಿದ ಸಹಕಾರವನ್ನು ಸ್ಮರಿಸಿ ಎಲ್ಲರಿಗೂ ಕೃತಞ್ಞತೆ ಅರ್ಪಿಸಿದರು ಮತ್ತು ಮುಂದೆಯೂ ಮಂಗಳಾ ಕ್ರೀಡಾಂಗಣದಲ್ಲಿ ವಾಲಿಬಾಲ್ ತರಬೇತಿಯನ್ನು ಸೇವಾಮನೋಭಾವದಿಂದ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಕಚೇರಿ ಸುಪರಿಡೆಂಟ್  . ದಯಾನಂದ ಶೆಟ್ಟಿ, ಹಾಕಿ ತರಬೇತಿದಾರರಾದ .ಸಿ. ದಿನಮಣಿ, ಕ್ರೀಡಾ ಹಾಸ್ಟೆಲ್ ವಾರ್ಡನ್  ತಿಲಕಚಂದ್ರ ನಿವೃತ್ತರ ಗುಣಗಾನ ಮಾಡಿದರು. ಉಪ ನಿರ್ದೇಶಕರಾದ ಪ್ರದೀಪ್ ಡಿ ಸೋಜರವರು ನಿವೃತ್ತರನ್ನು ಸನ್ಮಾನಿಸಿದರು. ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಲಿಲ್ಲಿ ಪಾಯಸ್ ಸ್ವಾಗತಿಸಿ ಸನ್ಮಾನಿತರ ಕಿರುಪರಿಚಯ ನೀಡಿ ಕೊನೆಯಲ್ಲಿ ವಂದಿಸಿದರು. ಶಂಕರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Pages