BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಶಕ್ತರಿಗಾಗಿ
100 ಮನೆ ನಿರ್ಮಾಣ ಮಾಡಲಿದ್ದು ಅದರಲ್ಲಿ ಅಶಕ್ತ ಬಂಟರಿಗಾಗಿ 80 ಮನೆ ಹಾಗೂ 20 ಮನೆ ಇತರೆ ಸಮಾಜದವರಿಗಾಗಿ
ನೀಡಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ
ಬಂಟರ ಯಾನೆ ನಾಡವರ ಮಾತೃಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಬಂಟರ
ಒಕ್ಕೂಟವು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಮಾಡುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ
ಕರ್ನಿರೆ ವಿಶ್ವನಾಥ ಶೆಟ್ಟಿ ಅವರು 1 ಎಕ್ರೆ ಭೂಮಿಯನ್ನು ನೀಡಿದ್ದು ಅವರದಲ್ಲಿ 20 ಮನೆಗಳನ್ನು ನಿರ್ಮಿಸಿ
ಸಮಾಜದ ಅಶಕ್ತ ಕುಟುಂಬಕ್ಕೆ ನೀಡಲಾಗುವುದು. ಈಗಾಗಲೇ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಒಟ್ಟು
8 ತಿಂಗಳೊಳಗೆ ಸಂಪೂರ್ಣವಾಗಲಿದೆ ಎಂದರು.
ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ವತಿಯಿಂದ ಸಮಾಜದ ಅಶಕ್ತ ಬಂಟರ ವಿದ್ಯಾಭ್ಯಾಸ, ವೈದ್ಯಕೀಯ ನೆರವು ಇನ್ನಿತರ ಆರ್ಥಿಕ ನೆರವನ್ನು
ನೀಡಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಒಕ್ಕೂಟವು ಮಾಡಲಿದ್ದು ದಾನಿಗಳು
ಈ ಕಾರ್ಯದಲ್ಲಿ ಕೈ ಜೋಡಿಸಿ ಸಹಕರಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯಪ್ರಸಾದ್
ಆಳ್ವಾ, ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಜತೆ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಪೋಷಕ
ಸದಸ್ಯ ಉಳ್ತೂರು ಮೋಹನದಾಸ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.