ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ
ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ‘ಶಕ್ತಿ ಕ್ಯಾನ್ ಕ್ರಿಯೇಟ್’ ದಸರಾ ರಜಾಕಾಲದ ಶಿಬಿರವು ಅ9ರಿಂದ
ಅ.14ರ ವರೆಗೆ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಶಿಬಿರವು 1ರಿಂದ
4ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು
ಬೆಳಗ್ಗೆ 9ರಿಂದ ಸಂಜೆ 5ರ ತನಕ ನಡೆಯಲಿದೆ. ಶಿಬಿರದಲ್ಲಿ ಚಿತ್ರಕಲೆ, ಕರಕುಶಲಕಲೆ, ವ್ಯಂಗ್ಯಚಿತ್ರ,
ಫೋಮ್ ಆರ್ಟ್ ಮುಖವಾಡ ರಚನೆ, ಆವೆ ಮಣ್ಣಿನ ರಚನೆ, ವರ್ಲಿ ಆರ್ಟ್, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್,
ಗಾಳಿಪಟ ರಚನೆ, ರಂಗೋಲಿ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ ಭಾಷಣ ಕಲೆ, ಕೈ ಬರಹ ಸುಧಾರಣೆ,
ಹಾಡು, ಕುಣಿತ, ಪೇಪರ್ ಕಟ್ಟಿಂಗ್, ಜನಪದ ಕುಣಿತ, ಕಥೆ ಕೇಳು - ಹೇಳು, ನಟನೆ, ಕಿರು ನಾಟಕ ತರಬೇತಿ
ನಡೆಯಲಿದೆ. ಕೊನೆಯ ದಿನ ಗಾಳಿಪಟ ಹಾರಿಸುವುದು ಹಾಗೂ ಪಿಲಿಕುಳ ಗೃಹ ವೀಕ್ಷಣಾಲಯ ಸಂದರ್ಶನ ನಡೆಯಲಿದೆ.
ಅಂತರರಾಷ್ಟ್ರೀಯ
ಹಾಗೂ ರಾಷ್ಟ್ರೀಯ ಖ್ಯಾತಿಯ ವೆಂಕಿ ಪಲಿಮಾರ್, ಪಿ.ಎನ್ ಆಚಾರ್ಯ ಮಣಿಪಾಲ, ಪೆರ್ಮುದೆ ಮೋಹನ್ ಕುಮಾರ್,
ಜಾನ್ ಚಂದ್ರನ್, ದಿನೇಶ್ ಹೊಳ್ಳ, ವೀಣಾ ಶ್ರೀನಿವಾಸ್, ಜಯರಾಮ್ ನಾವುಡ, ಸುಧೀರ್ ಕಾವೂರು, ಪೂರ್ಣೇಶ್
ಪಿ. ರತ್ನಾವತಿ ಜೆ. ಬೈಕಾಡಿ, ದೇವಿ ಉಡುಪಿ, ಸಚಿತಾ ನಂದಗೋಪಾಲ್ ಇನ್ನಿತರ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು
ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ನೋಂದಣಿಗೆ ಸಂಪರ್ಕಿಸಿ: ಬೈಕಾಡಿ ಜನಾರ್ದನ ಆಚಾರ್ - 9449054962, ಪ್ರಭಾಕರ್
ಜಿ.ಎಸ್ - 9916535668, ರಮೇಶ್.ಕೆ – 9611588813. ಶಕ್ತಿ ವಸತಿ ಶಾಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ
ಹತ್ತಿರ, ಶಕ್ತಿನಗರ, ಮಂಗಳೂರು-575016, ಕಚೇರಿ:0824-2230452