ಚಿಣ್ಣರಬಿಂಬದಲ್ಲಿ ಮಕ್ಕಳ ಜ್ಞಾನಭಂಡಾರವನ್ನು ಹೆಚ್ಚಿಸುವ ಕಾರ್ಯ ಸ್ತುತ್ಯಾರ್ಹ : ಬಿ.ಎಸ್. ಕುಮಾರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಚಿಣ್ಣರಬಿಂಬದಲ್ಲಿ ಮಕ್ಕಳ ಜ್ಞಾನಭಂಡಾರವನ್ನು ಹೆಚ್ಚಿಸುವ ಕಾರ್ಯ ಸ್ತುತ್ಯಾರ್ಹ : ಬಿ.ಎಸ್. ಕುಮಾರ್

Share This
ಮುಂಬಯಿ: ಮಕ್ಕಳು ಶಾಲೆಯಲ್ಲಿನ ವಿಷಯಕ್ಕಿಂತ ಹೊರತಾದ ಹೊಸ ವಿಷಯ, ಆಚಾರ ವಿಚಾರ, ಸಂಸ್ಕಾರ-ಸಂಸ್ಕ್ರತಿಯನ್ನು ಕಲಿಸುವ ಚಿಣ್ಣರಬಿಂಬದಂತಹ ಸಂಸ್ಥೆಯೊಂದು ಸಾಕಿನಾಕದ ಪರಿಸರದ ಮಕ್ಕಳಿಗೆ ಅವಶ್ಯವಾಗಿದ್ದು ಚಿಣ್ಣರಬಿಂಬದ ಮಕ್ಕಳ ಜ್ಞಾನಭಂಡಾರವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿರುವುದು ಸ್ತುತ್ಯಾರ್ಹವೆಂದು ಸಾಕಿನಾಕದ ನಿರ್ದೇಶಕರಾದ ಕುಮಾರ್ ಅವರು ಹೇಳಿದರು.
ಅವರು ಸಾಕಿನಾಕದ ಶಾರದಾ ಹೈಸ್ಕೂಲಿನಲ್ಲಿ ನಡೆದ ಚಿಣ್ಣರಬಿಂಬದ ನೂತನ ಶಾಖೆಯನ್ನು  ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಚಿಣ್ಣರಬಿಂಬ ಕೇವಲ ಒಂದು ಸಂಸ್ಥೆಯಲ್ಲ. ಅದು ಒಂದು ಶಿಕ್ಷಣ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಮ್ಮ ನಾಡು-ನುಡಿಯೊಂದಿಗೆ ಜೀವನಕ್ಕೆ ಬೇಕಾದ ಅವಶ್ಯಕವಾದ ನೀತಿ ಭೋಧೆಗಳನ್ನು ತಿಳಿಸಲಾಗುತ್ತದೆ. ಅವರಲ್ಲಿನ ಪ್ರತಿಭೆಗೆ ಪೂರಕವಾದ ಸ್ಪರ್ಧೆಗಳನ್ನು ಏರ್ಪಡಿಸಿ ಯಾವ ಭೇದ ಭಾವವೂ ಇಲ್ಲದೆ ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರಕಾಶಗೊಳಿಸುವ ಕಾರ್ಯವನ್ನು ನಡೆಸಲಾಗುತ್ತದೆ ಎಂದರು.

ಕಳೆದ 16 ವರ್ಷಗಳಿಂದ ಚಿಣ್ಣರಬಿಂಬದಲ್ಲಿ ಅರಳಿದ ಪ್ರತಿಭೆಗಳು ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿವಿಧ ಸ್ತರಗಳಲ್ಲಿ ಹೆಸರು ಮಾಡಿದ್ದಾರೆ ಎಂದು ಚಿಣ್ಣರಬಿಂಬದ ಕನ್ನಡ ಕಲಿಕೆಯ ಸಂಚಾಲಕರಾಗಿರುವ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಚಿಣ್ಣರಬಿಂಬ ನಡೆದು ಬಂದ ದಾರಿಯನ್ನು ಪಾಲಕರ ಮುಂದೆ ತೆರೆದಿಟ್ಟರು.

ಕೇಂದ್ರ ಸಮಿತಿಯ ರಮೇಶ್ ರೈ ಅವರು ಮಾತನಾಡಿ, ಚಿಣ್ಣರಬಿಂಬ ನಮ್ಮ ಸಾಕಿನಾಕ ಪರಿಸರದಲ್ಲಿರುವುದು ಖುಷಿಯ ವಿಷಯ. ಇಲ್ಲಿ ನಮ್ಮ ತುಳು ಕನ್ನಡಿಗರು ಹೆಚ್ಚು ಜನರಿದ್ದು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಪಾಲಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದು ನುಡಿದರು.

ಅನಿತಾ ಉದಯ ಶೆಟ್ಟಿ ಅವರು ಮಾತನಾಡಿ, ಪರಿಸರದ ಮಕ್ಕಳು, ಪಾಲಕರು ಪರಸ್ಪರ ಸಹಕರಿಸುತ್ತಾ ಶಿಬಿರದಲ್ಲಿ ಹೆಚ್ಚೆಚ್ಚು ಮಕ್ಕಳು ಕಲಿತು ಒಳ್ಳೆಯ ಸಂಸ್ಕಾರವಂತರಾಗಬೇಕು ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಶಿಕ್ಷಕಿ ಅನಿತಾ ಶೆಟ್ಟಿ ಕನ್ನಡ ಕಲಿಕಾ ತರಗತಿ ಹಾಗೂ ಪ್ರತಿಭಾ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು. ವಲಯ ಮುಖ್ಯಸ್ಥರಾದ ಆಶಾ ಶೆಟ್ಟಿ ಅವರು ನೂತನ ಶಿಬಿರದ ಎಲ್ಲಾ ಕಾರ್ಯಗಳಲ್ಲಿ ನಮ್ಮ ಸಹಕಾರ ಇದ್ದೇ ಇರುತ್ತದೆ. ಇಲ್ಲಿನ ಪಾಲಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹಿತ ನುಡಿದರು. ಅರುಣಾ ಶೆಟ್ಟಿ, ವಿದ್ಯಾ ಶೆಟ್ಟಿ, ಪುಷ್ಪಾ ಗೌಡ, ಸುರೇಖಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ಮಕ್ಕಳು ಉಪಸ್ಥಿತರಿದ್ದರು. ಸುರೇಶ್ ಜೈನ್ ವಂದಿಸಿದರು.

Pages