BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆರ್ಥಿಕವಾಗಿ
ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಗುದ್ದಲಿ ಪೂಜೆಯನ್ನು ಬುಧವಾರ ಮಾಡಲಾಯಿತು.
ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ
ಕರ್ನಿರೆಯಲ್ಲಿ ಸುಂದರ ಶೆಟ್ಟಿಯವರಿಗೆ, ಕಾರ್ಕಳ ತಾಲೂಕಿನ ಈದು ಪ್ರದೇಶದ ಉಷಾ ಶೆಟ್ಟಿಯವರಿಗೆ, ಸಾಲೆತ್ತೂರಿನ
ಸುಜಾತ ರೈ ಯವರಿಗೆ ಹಾಗೂ ವರ್ಕಾಡಿ ಮಂಜೇಶ್ವರದ ಚಂದ್ರಹಾಸ್ ಶೆಟ್ಟಿ ಯವರಿಗೆ ಮನೆ ನಿರ್ಮಾಣಕ್ಕೆ ಭೂಮಿ
ಪೂಜೆ ನಡೆಸಲಾಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಕೋಶಾಧಿಕಾರಿ
ಕೊಲ್ಲಾಡಿ ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ ಇಂದ್ರಾಳಿ
ಜಯಕರ ಶೆಟ್ಟಿ, ನಿರ್ದೇಶಕರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಸತೀಶ್ ಅಡಪ್ಪ,
ಸುರೇಶ್ ಶೆಟ್ಟಿ ಸೂರಿಂಜೆ, ಮನೆಯ ಫಲಾನುಭವಿಗಳು ಹಾಗೂ ಸ್ಥಳೀಯ ಗಣ್ಯರ ಉಪಸ್ಥಿತರಿದ್ದರು.