ವಿಜೃಂಭಣೆಯಿಂದ ಜರಗಿದ ಚಾರ್‌’ಕೋಪ್‌ ಕನ್ನಡಿಗರ ಬಳಗದ ವಾರ್ಷಿಕೋತ್ಸವ ಮತ್ತು ಶಾರದಾ ಪೂಜೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಜೃಂಭಣೆಯಿಂದ ಜರಗಿದ ಚಾರ್‌’ಕೋಪ್‌ ಕನ್ನಡಿಗರ ಬಳಗದ ವಾರ್ಷಿಕೋತ್ಸವ ಮತ್ತು ಶಾರದಾ ಪೂಜೆ

Share This
BUNTS NEWS, ಮುಂಬಯಿ: ಕಾಂದಿವಲಿ ಪಸ್ಚಿಮ ಚಾರ್ಕೋಪ್ ಪರಿಸರದ ಕನ್ನಡಿಗರ ಪ್ರತಿಸ್ಟಿತ ಸಂಸ್ಥೆ ಚಾರ್ಕೋಪ್ಕನ್ನಡಿಗರ ಬಳಗ, ಕಾಂದಿವಲಿ ಇದರ 19ನೇ ವಾರ್ಷಿಕೋತ್ಸವ ಹಾಗೂ  ಶಾರದಾ ಪೂಜೆಯು . 14 ರಂದು ಕಾಂದಿವಲಿ ಪಶ್ಚಿಮದ ಸೆಕ್ಟರ್‌   6 ಹರ್ಯಾಣ ಭವನದಲ್ಲಿ ಜರಗಿತು.
ಶಾರದಾ ಪೂಜೆಯ ನಂತರ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಬಂಟರ ಸಂಘದ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ  ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾತಿ ಬೇದವನ್ನು ಮರೆತು ಕನ್ನಡಿಗರು ಒಂದಾಗಿದ್ದಾರೆ. ಕಳೆದ ಹತ್ತೊಂಬತ್ತು ವರ್ಷಗಳ ಹಿಂದೆ ಸಂಘಟನೆಯನ್ನು ಸ್ಥಾಪಿಸಿ ಪರಿಸರದ ಕನ್ನಡಿಗರಲ್ಲಿ ಧಾರ್ಮಿಕಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವೈದ್ಯಕೀಯ ಜಾಗೃತಿ ಮೂಡಿಸಿದೆ. ಬಂಟರ ಸಂಘದ ನಿಕಟ ಸಂಪರ್ಕದಲ್ಲಿರುವ ಸಂಸ್ಥೆಗೆ ನಮ್ಮ ಪ್ರೋತ್ಸಾಹವಿದೆ. ಬಂಟರ ಸಂಘದ ಆಡಳಿತದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡಿಗರಿಗಾಗಿ ವಿಶೇಷ ಪ್ರಾದಾನ್ಯತೆ ಇದೆ. ಕನ್ನಡಿಗರ ಒಗ್ಗಟ್ಟು ಮುಂದಿನ ಜನಾಂಗಕ್ಕೆ ಪ್ರಯೋಜನಕಾರಿಯಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿಲ್ಲವ ಚೇಂಬರ್ ಅಪ್ ಕಾಮರ್ಸ್ ಆಡಳಿತ ನಿರ್ದೇಶಕ ಎನ್.ಟಿ.ಪೂಜಾರಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಸಮಾಜದ ಗಣ್ಯ ರನ್ನು ಸೇವಕರನ್ನು ಗುರುತಿಸುವಂತಾಗುತ್ತದೆ. ಬಳಗದ ಬೆಳವಣಿಗೆಗೆ ಪರಿಸರದ ಕನ್ನಡಿಗರು ಇನ್ನಷ್ಟು ಸಹಕಾರ ನೀಡಬೇಕು ಎಂದರು.

ಮತ್ತೋರ್ವ ಅತಿಥಿ ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಇಂದಿನ ಕಾರ್ಯಕ್ರಮವು  ಶಿಸ್ತು ಮತ್ತು ಸಮಯವನ್ನು ಪಾಲಿಸಿದೆ. ಬಳಗದ ಸದಸ್ಯರ ಶ್ರಮ ಅಭಿಮಾನ ತಂದಿದೆ. ಬಂಟ ಸಮಾಜದ ಬಹಳಷ್ಟು ಜನ ಬಳಗದಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಪ್ರಾದೇಶಿಕ ಸಮಿತಿಯ ಸಹಕಾರವಿದೆ ಎಂದರು.

ಉಪಾಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ,  ಸ್ವಾಗತಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಭಾಸ್ಕರ ಸರಪಾಡಿಯವರ ಮುಂದಾಳುತ್ವದಲ್ಲಿ ಕನ್ನಡಾಂಬೆಯ ಸೇವೆಗಾಗಿ ಬಳಗ ಹುಟ್ಟಿಕೊಂಡಿತ್ತು. 800 .ಮೀ. ಸ್ಥಳ ಖರೀದಿಸಿ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ನಮ್ಮ ಸ್ವಂಥ ಜಾಗದಲ್ಲಿ ನಡೆಸುತ್ತಿರುವೆವು. ಇದಕ್ಕೆಲ್ಲ ಸದಸ್ಯರ ಹಾಗೂ ದಾನಿಕಗ ಸಹಕಾರವಿದೆ ಎಂದರು.

ಮಧ್ಯಾಹ್ನ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.  ನಾಗೇಶ್ ಭಟ್ ಅವರಿಂದ ಶಾರದಾ ಪೂಜೆ, ಸದಸ್ಯರಿಂದ ಭಜನೆ ನಡೆಯಿತು. ಬಳಗದ ಸದಸ್ಯರಿಂದ, ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ವರದಿ : ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್

Pages