ನ.16-18 ಆಳ್ವಾಸ್ ನುಡಿಸಿರಿ 2018: ಪ್ರಧಾನ ಪರಿಕಲ್ಪನೆ: ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನ.16-18 ಆಳ್ವಾಸ್ ನುಡಿಸಿರಿ 2018: ಪ್ರಧಾನ ಪರಿಕಲ್ಪನೆ: ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು

Share This
BUNTS NEWS, ಮಂಗಳೂರು: ಆಳ್ವಾಸ್ ನುಡಿಸಿರಿ-2018 ಸಮ್ಮೇಳನವು  ನ.16ರಿಂದ 18ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿದೆ.
ಪ್ರತಿವರ್ಷದಂತೆ ವರ್ಷವೂ ಆಳ್ವಾಸ್ ನುಡಿಸಿರಿಯುಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು’ ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ನಡೆಯಲಿದೆ. ಕರ್ನಾಟಕದ ಲಿಖಿತ ಹಾಗೂ ಮೌಖಿಕ ಇತಿಹಾಸಗಳನ್ನು ಅವಲೋಕಿಸುವಾಗ ಕರ್ನಾಟಕತ್ವವನ್ನು ರೂಪಿಸಿದ ವೈವಿಧ್ಯಮಯ ಕಾಣಿಕೆಗಳು, ಐತಿಹ್ಯಗಳು, ಚರಿತ್ರೆ, ತಾತ್ವಿಕತೆ ಮುಂತಾದವು ಅಗಾಧವಾಗಿ ನಮ್ಮನ್ನು ಸೆಳೆಯುತ್ತವೆ.

ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ, ಶೈಕ್ಷಣಿಕ, ಧಾರ್ಮಿಕವೇ ಮುಂತಾದ ವಿಚಾರಗಳಲ್ಲೂ ಅವುಗಳ ವೈವಿಧ್ಯಮಯ ಸಾಧ್ಯತೆಗಳು ದೃಗ್ಗೋಚರವಾಗುತ್ತವೆ. ಎಲ್ಲಾ ಸಾಧ್ಯತೆಗಳು ಕಾಲದಿಂದ ಕಾಲಕ್ಕೆ ಕನ್ನಡ ನಾಡನ್ನು ಕಟ್ಟುತ್ತಾ ಸುಧಾರಣೆಗೆ ಒಳಪಡಿಸುತ್ತಾ ಕರ್ನಾಟಕದ ಅನನ್ಯತೆ ಹಾಗೂ ಅಸ್ಮಿತೆಗಳನ್ನು ಆಂತರಿಕವಾಗಿಯೂ ಬಹಿರಂಗವಾಗಿಯೂ ಜೀವಂತವಿರಿಸಿವೆ. ತೆರನಾದ ಜೀವಂತಿಕೆಯಿಂದಲೇ ಕರ್ನಾಟಕದ ಬಹುರೂಪತ್ವಕ್ಕೆ ಗೌರವ ಪ್ರಾಪ್ತವಾಗಿದೆ.

ಬಗೆಯ ಬಹುರೂಪತ್ವಕ್ಕೆ ಕಾರಣವಾದ ಅಂಶಗಳನ್ನು ಸ್ಥೂಲವಾಗಿ ಗುರುತಿಸಿ ಅವುಗಳ ಅನನ್ಯತೆಯನ್ನು ಚರ್ಚೆಗೊಡ್ಡುವ ಹಾಗೂ ಮರುವಿವೇಚನೆಗೊಳಪಡಿಸಿ ಮಥಿಸುವ ಮೂಲಕ ಬರಬಹುದಾದ ಅಮೃತವನ್ನಾಗಲೀ ಹಾಲಾಹಲವನ್ನೇ ಆಗಲೀ ಮತ್ತೊಮ್ಮೆ ನಿಕಷಕ್ಕೊಡ್ಡುವ ಪ್ರಯತ್ನವಿದು.

ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನಆಳ್ವಾಸ್ ನುಡಿಸಿರಿಕನ್ನಡ ಬಾಂಧವರ ಸಹಾಯ-ಸಹಕಾರ-ಪ್ರೀತಿ-ವಿಶ್ವಾಸಗಳೊಂದಿಗೆ ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಇದೀಗ 15ನೇ ವರ್ಷದ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದೆ. 

ಕನ್ನಡ ನಾಡು, ಕನ್ನಡ ನುಡಿಯ ಕುರಿತಾದ ಎಚ್ಚರ, ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಸಮ್ಮೇಳನವು ಕನ್ನಡದ ಒಳಿತಿಗಾಗಿ ದುಡಿಸಬೇಕಾದ ಎಲ್ಲಾ ಆಯಾಮಗಳನ್ನು ದುಡಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಆದುದರಿಂದಲೇ ಸಮ್ಮೇಳನವು ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಾಗಿರದೆ ಕನ್ನಡದ ವಿರಾಟ್ ಸ್ವರೂಪದ ಅಭಿವ್ಯಕ್ತಿಯಾಗಿ ಜನಮನದ ಗಮನಸೆಳೆಯುತ್ತಿದೆ.

Pages