ಮೈನೇಮ್ ಇಸ್ ಅಣ್ಣಪ್ಪ ಕರಾವಳಿಯಾದ್ಯಂತ ತೆರೆಗೆ: ಒಡಿಯೂರು ಶ್ರೀಗಳಿಂದ ಶುಭ ಹಾರೈಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೈನೇಮ್ ಇಸ್ ಅಣ್ಣಪ್ಪ ಕರಾವಳಿಯಾದ್ಯಂತ ತೆರೆಗೆ: ಒಡಿಯೂರು ಶ್ರೀಗಳಿಂದ ಶುಭ ಹಾರೈಕೆ

Share This
BUNTS NEWS, ಮಂಗಳೂರು : ಲಕುಮಿ ಕ್ರಿಯೇಷನ್ ಲಾಂಛನದಲ್ಲಿ ತಯಾರಾದ ಮೈನೇಮ್ ಇಸ್ ಅಣ್ಣಪ್ಪ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು.
ಸಮಾರಂಭವನ್ನು ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಬೆಳಗಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳು ಸಂಸ್ಕøತಿಯನ್ನು ಉಳಿಸುವ ಮತ್ತು ಬೆಳೆಸುವ ಕೆಲಸ ತುಳು ಸಿನಿಮಾ ರಂಗದಿಂದ ಆಗಬೇಕಾಗಿದೆ. ತುಳುನಾಟಕರಂಗದಂತೆ ತುಳುಸಿನಿಮಾರಂಗ ಕೂಡಾ ಇಂದು ತುಳುಭಾಷಾ ಬೆಳವಣಿಗೆಯಲ್ಲಿ ಮಹತ್ವವಾದ ಕೆಲಸವನ್ನು ಮಾಡಿದೆ. ತುಳುವಿನಲ್ಲಿ ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾಗಳು ಬರಬೇಕೆಂದು ಸ್ವಾಮೀಜಿ ತಿಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ .ಸಿ. ಭಂಡಾರಿ ಅವರು ಮಾತನಾಡಿ ಇತ್ತೀಚೆಗೆ ತುಳುವಿನಲ್ಲಿ  ಸಾಲು ಸಾಲು ಚಿತ್ರಗಳು ತೆರೆಕಾಣುತ್ತಿವೆ. ಇದು ಚಿತ್ರರಂಗದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರು.

ಸಮಾರಂಭದಲ್ಲಿ ಚಿತ್ರ ನಿರ್ಮಾಪಕ  ಪ್ರಕಾಶ್ ಪಾಂಡೇಶ್ವರ್, ನಿರ್ದೇಶಕರಾದ ಡಾ. ರಿಚರ್ಡ್ ಕ್ಯಾಸ್ಟಲಿನೋ, ಸೀತಾರಾಮ ಕುಲಾಲ್, ರಾಮ ಶೆಟ್ಟಿ ಮುಂಬಾಯಿ, ಕಿಶೋರ್ ಡಿ. ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ,   ಪಟ್ಲ ಸತೀಶ್ ಶೆಟ್ಟಿ,  ಕರ್ನೂರ್ ಮೋಹನ್ ರೈ, ಯತೀಶ್ ಬೈಕಂಪಾಡಿ, ಕೋಟಿ ಚೆನ್ನಯ್ಯ ನಿರ್ಮಾಪಕ  ಆರ್. ಧನರಾಜ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರ್, ಪ್ರಮೋದ್ ಬಲ್ಲಾಲ್ ಭಾಗ್,  ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ  ಉದಯ ಪೂಜಾರಿ,  ಪಮ್ಮಿ ಕೊಡಿಯಾಲ್ ಬೈಲ್, ಗಿರೀಶ್ ಎಂ. ಶೆಟ್ಟಿ ಕಟೀಲು,  ಪುರುಷೋತ್ತಮ ಭಂಡಾರಿ ಅಡ್ಯಾರ್, ಮಾಧವ ನಾೈಕ್ ಅಡ್ಯಾರ್, ತಮ್ಮ ಲಕ್ಷ್ಮಣ್ , ಪ್ರದೀಪ್ ಆಳ್ವ ಕದ್ರಿ, ಮೊಹನ್ ಕೊಪ್ಪಲ, ಡಿ.ಕೆ ಅಶೋಕ್ ಕುಮಾರ್, ಮಂಜು ರೈ ಮುಳೂರು, ಶುಭಾ ಶೆಟ್ಟಿ, ಗೋಕುಲ್ ಕದ್ರಿ, ನಿರ್ಮಾಪಕರಾದ ರವಿ  ರೈ ಕಲಸ, ರೋಹನ್ ಶೆಟ್ಟಿ, ನಿರ್ದೇಶಕ ಮಯೂರ್ ಶೆಟ್ಟಿ, ಶ್ರದ್ದಾ ಸಾಲ್ಯಾನ್, ಶೋಭಾ ಶೆಟ್ಟಿ, ತಾರಾನಾಥ ಶೆಟ್ಟಿ  ಬೋಳಾರ್, ಲಕ್ಷ್ಮಣ ಕುಮಾರ್ ಮಲ್ಲೂರು, ನರೇಂದ್ರ ಗೌಡ, ಮೇಘರಾಜ್ , ಚಂದ್ರಹಾಸ್ ಶೆಟ್ಟಿ, ಗಂಗಾಧರ ಶೆಟ್ಟಿ ಅಳಕೆ, ಚೆಲ್ಲಡ್ಕ ಚಂದ್ರಹಾಸ ಆಳ್ವ, ಪ್ರಕಾಶ್ ಶೆಟ್ಟಿ, ನವೀನ್ ಶೆಟ್ಟಿ , ಮೋಹನ್ದಾಸ್ ರೈ, ಅಮೃತ ವಿ. ಕದ್ರಿ, ಡಾ, ದೇವದಾಸ್ ರೈ, ರಾಜೇಶ್ ಸ್ಕೈಲಾರ್, ಶೋಭಿತ್, ಅದ್ವಿಕಾ ಶೆಟ್ಟಿ, ದರ್ಶನ್, , ವಾಸುದೇವ ಕೊಟ್ಟಾರಿ, ಎಚ್.ಕೆ ಪುರುಷೋತ್ತಮ, ಜಯಂತ ಕೋಟ್ಯಾನ್, ವೇಣುಗೋಪಾಲ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.  ಕಿಶೋರ್ ಡಿ. ಶೆಟ್ಟಿ ಸ್ವಾಗತಿಸಿದರು. ಮಂಜು ರೈ ಕಾರ್ಯಕ್ರಮ ನಿರ್ವಹಿಸಿದರು.

ಅಣ್ಣಪ್ಪ ತುಳು ಚಲನ ಚಿತ್ರವು ಮಂಗಳೂರಿನಲ್ಲಿ ಜ್ಯೋತಿ, ಪಿ.ವಿ.ಆರ್, ಬಿಗ್ ಸಿನಿಮಾಸ್, ಸಿನಿಪೊಲೀಸ್, ಉಡುಪಿಯಲ್ಲಿ ಆಶೀರ್ವಾದ್, ಮಣಿಪಾಲದಲ್ಲಿ ಐನಾಕ್ಸ್,  ಬಿಗ್ಸಿನಿಮಾಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.

Pages