BUNTS NEWS, ದೋಹಾ: ಉದ್ಯಮಿ, ಸಮಾಜ ಸೇವಕ ಮೂಡಂಬೈಲು ರವಿ ಶೆಟ್ಟಿ ಅವರು
‘ಮದರ್ ತೇರೆಸಾ ಸಾಮಾಜಿಕ ಸಾಮರಸ್ಯ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.
ಇತ್ತಿಚೇಗೆ ದೋಹಾ
ಮೊರ್ಡನ್ ಇಂಡಿಯನ್ ಸ್ಕೂಲ್’ನಲ್ಲಿ ನಡೆದ ಮಂಗಳೂರು ಕ್ರಿಕೆಟ್ ಕ್ಲಬ್ ಅವರ 16ನೇ ವಾರ್ಷಿಕ ಎಂಸಿಸಿ
ಮಹಿಳಾ ಮುಕ್ತ ಟ್ರೋಬಾಲ್ ಕ್ರೀಡಾಕೂಟದ ಸಮಾರಂಭದಲ್ಲಿ ರವಿ ಶೆಟ್ಟಿ ಮೂಡಂಬೈಲು ಅವರು ಪ್ರತಿಷ್ಠಿತ
ಮದರ್ ತೇರೆಸಾ ಸಾಮಾಜಿಕ ಸಾಮರಸ್ಯ ಪ್ರಶಸ್ತಿಯನ್ನು ಪಡೆದರು.
ಎಟಿಎಸ್ ಗ್ರೂಪಿನ
ಆಡಳಿತ ನಿರ್ದೇಶಕರಾಗಿರುವ ರವಿ ಶೆಟ್ಟಿ ಅವರು ಸಾಮಾಜಿಕವಾಗಿ ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದಾರೆ.
ಕತಾರ್ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾಗಿರುವ ರವಿ ಶೆಟ್ಟಿ ಅವರು ತುಳು ಕೂಟ ಕತಾರ್’ಗೆ ಮೂರು ಭಾರಿ
ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೋಕ್ತೆಸರರಾಗಿಯೂ
ರವಿ ಶೆಟ್ಟಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸ್ನೇಹಪರ,
ಜನಪರ ಕೆಲಸಗಳಿಂದ ಜನ ಮೆಚ್ಚುಗೆಗೆ ಪಾತ್ರವಾಗಿರುವ ರವಿ ಶೆಟ್ಟಿ ಅವರು ಈಗಾಗಲೇ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.