BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮತ್ತು ಉಡುಪಿ
ಜಿಲ್ಲಾ ಬಂಟ ಸಂಘಗಳ ಸಹಯೋಗದಲ್ಲಿ ಸೆ.9ರಂದು ನಡೆಯುವ ‘ವಿಶ್ವ ಬಂಟರ ಸಮ್ಮೇಳನ’ವು ಅಶಕ್ತ ಬಂಟರಿಗೆ
ನೆರವು ನೀಡುವ ಉದ್ದೇಶವನ್ನು ಹೊಂದಿರುವದಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಇದರ ಅಧ್ಯಕ್ಷ ಐಕಳ
ಹರೀಶ್ ಶೆಟ್ಟಿ ಹೇಳಿದರು.
ಅವರು ನಗರದಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಬಂಟರ ಸಮ್ಮೇಳನವು ಉಡುಪಿಯ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ
ವೇದಿಕೆ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಸಮಾಜಬಾಂಧವರನ್ನು
ಒಗ್ಗೂಡಿಸಿ ಬಂಟ ಸಮಾಜದ ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯ ದಾನಿಗಳಿಂದ ದೇಣಿಗೆ ಪಡೆದು ನೀಡಲಾಗುದು
ಎಂದರು.
ವಿಶ್ವ ಬಂಟರ ಸಮ್ಮೇಳನದ
ಉದ್ಘಾಟನೆಯನ್ನು ಜಸ್ಟಿಸ್ ನಿಟ್ಟೆ ಸಂತೋಷ್ ಶೆಟ್ಟಿಯವರು ನೆರವೆರಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಲೋಕಾಯುಕ್ತ ನ್ಯಾ. ವಿ.ವಿಶ್ವನಾಥ ಶೆಟ್ಟಿ, ಡಾ.ಆರ್.ಎನ್
ಶೆಟ್ಟಿ, ಡಾ.ವಿನಯ್ ಹೆಗ್ಡೆ, ಸ್ವಾಮೀಜಿಗಳು, ಸಮಾಜದ ಹಿರಿಯ ಗಣ್ಯರು, ಅನಿವಾಸಿ ಉದ್ಯಮಿಗಳು, ಜನಪ್ರತಿನಿಧಿಗಳು,
ಚಲನಚಿತ್ರ ಹಾಗೂ ಕಿರುತೆರೆಯ ನಟನಟಿಯರು, ಒಕ್ಕೂಟದ ನಿರ್ದೇಶಕರುಗಳು, ದೇಶವಿದೇಶದ ಬಂಟ ಸಂಘಗಳ ಅಧ್ಯಕ್ಷರು,
ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿರುವರರೆಂದು ಮಾಹಿತಿ
ನೀಡಿದರು.
ಸಮ್ಮೇಳನದಲ್ಲಿ 50 ಜನ ಪ್ರಮುಖ ಬಂಟ ಮನೆತನಗಳ ಗಡಿಪ್ರದಾನ ಸಮ್ಮೀಲನ ಕಾರ್ಯಕ್ರಮ,
ಪಟ್ಲ ಸತೀಶ್ ಶೆಟ್ಟಿ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯ ಯಕ್ಷಗಾನ, ವಿವಿಧ ಮನೋರಂಜನಾ ಕಾರ್ಯಕ್ರಮಗಳು
ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವಾ, ಖಂಜಾಚಿ ಕೊಲ್ಲಾಡಿ ಬಾಲಕೃಷ್ಣ ರೈ, ಜೊತೆ
ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.