BUNTS NEWS, ದುಬೈ: ವಿಶ್ವ ತುಳು ಸಮ್ಮೇಳನ
ದುಬಾಯಿ ನವೆಂಬರ್ 23 ಮತ್ತು 24 ರಂದು ದುಬಾಯಿ ನಾಸರ್
ಲೀಸರ್ ಲ್ಯಾಂಡ್ ಐಸ್ ರಿಂಕ್
ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ
ಸಲಹಾ ಸಮಿತಿ ಮತ್ತು ಇನ್ನಿತರ
ಸಮಿತಿಗಳ ವಿಶೇಷ ಸಭೆಯಲ್ಲಿ ಅಧಿಕೃತ
ಆಹ್ವಾನ ಪತ್ರವನ್ನು ಅಖಿಲ ಭಾರತ ತುಳು
ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ದೇವಾಡಿಗರು ಬಿಡುಗಡೆ
ಮಾಡಿದರು.
ದುಬಾಯಿ
ದೇರಾದಲ್ಲಿರುವ ಕ್ವಿಕ್ ಬೈಟ್ ರೆಸ್ಟೊರೆಂಟ್
ಸಭಾಂಗಣದಲ್ಲಿ ಸೆಪ್ಟೆಂಬರ್ 28 ನೇ ತಾರೀಕು ಶುಕ್ರವಾರ
ಬೆಳಿಗ್ಗೆ ನಡೆದ ಸಭೆಯ ಅಧ್ಯಕ್ಷತೆಯನ್ನು
ಸರ್ವೋತ್ತಮ ಶೆಟ್ಟಿಯವರು ವಹಿಸಿದ್ದರು. ಸಮ್ಮೇಳನದ ಪೂರ್ವ ತಯಾರಿಯ ಬಗ್ಗೆ
ಪೂರ್ಣ ಮಾಹಿತಿಯನ್ನು ನೀಡಿದರು. ದುಬಾಯಿಯಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ
ಪೂರ್ವ ತಯಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ
ಧರ್ಮಪಾಲ ದೇವಾಡಿಗರು ಮೆಚ್ಚುಗೆ ವ್ಯಕ್ತ ಪಡಿಸಿ ಸಮ್ಮೇಳನದ
ಯಶಸ್ಸಿಗೆ ಶುಭವನ್ನು ಹಾರೈಸಿದರು.
ಸಮ್ಮೇಳನದ
ಪೂರ್ಣ ವಿವರಗಳನ್ನು ಇವೆಂಟ್ ಮ್ಯಾನೆಜರ್ ಶೋಧನ್
ಪ್ರಸಾದ್ ವಿವರವಾಗಿ ಸಭೆಯ ಮುಂದಿಟ್ಟರು. ವಿಶ್ವ
ತುಳು ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆ
ಗೊಳ್ಳಲಿರುವ "ವಿಶ ತುಳು ಐಸಿರಿ"
ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾದ
ಬಿ. ಕೆ. ಗಣೇಶ್ ರೈಯವರು
ಸ್ಮರಣ ಸಂಚಿಕೆಯ ಕಾರ್ಯಯೋಜನೆಯ ಬಗ್ಗೆ
ವಿವರಿಸಿದರು. [ಬಿ. ಕೆ. ಗಣೇಶ್
ರೈ - ಯು.ಎ.ಇ.]