ಸೆ.13-15: ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ - BUNTS NEWS WORLD

ಸೆ.13-15: ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ

Share This
BUNTS NEWS, ಮಂಗಳೂರು: ಬಂಟ್ಸ್ ಹಾಸ್ಟೆಲ್ ಓಂಕಾರ ನಗರದ ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.13ರಿಂದ 15ರವರೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.12ರಂದು ಶರವು ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಶ್ರೀ ಸಿದ್ಧಿ ವಿನಾಯಕ ದೇವರ ವಿಗ್ರಹವನ್ನು ಓಂಕಾರ ನಗರಕ್ಕೆ ತರಲಾಗುವುದು. ಸೆ.13ರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಂತರ ಬಿಗ್ರೇಡಿಯರ್ ವಿನೋದ್ ಅಡಪ ಮತ್ತು ಸೋನಿಯಾ ವಿ. ಅಡಪರಿಂದ ಧ್ವಜಾರೋಹಣ ನಡೆಯಲಿದೆ. ಬಳಿಕ ಮೂರ್ತಿ ಪ್ರತಿಷ್ಠೆ, ಗಣಹೋಮ, ತೆನೆಹಬ್ಬ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ಸಂಜೆ ಧಾರ್ಮಿಕ ಸಭೆ ಜರುಗಲಿದ್ದು ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 8ಕ್ಕೆ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದವರಿಂದ ನಾಟ್ಯ ವೈಭವ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸೆ.14ರಂದು ಭಜನಾ ನೃತ್ಯ ಸ್ಪರ್ಧೆ, ಸಂಜೆ 5ಕ್ಕೆ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ, ರಾತ್ರಿ 8ಕ್ಕೆ ಪುತ್ತೂರು ನರಸಿಂಹ ನಾಯಕ್ ಮತ್ತು ರಾಯಚೂರು ಶೇಷಗಿರಿ ದಾಸ್ ಬಳಗದವರಿಂದ ಭಕ್ತಿಗಾನ ವೈಭವ ನಡೆಯಲಿದೆ. ಸೆ.15ರಂದು ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣ ಯಾಗ, ಭಜನೆ, ಮಹಾ ಅನ್ನ ಸಂತರ್ಪಣೆ, ಅಪರಾಹ್ನ 3:30ಕ್ಕೆ ಶೋಭಾಯಾತ್ರೆ ಜರುಗಲಿದೆ ಎಂದರು.

ಕೊಡಗಿನ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಅಲ್ಲಿಗೆ ನೆರವು ನೀಡುವ ದೃಷ್ಟಿಯಿಂದ ಬಾರಿಯ ಗಣೇಶೋತ್ಸವವನ್ನು ಸರಳವಾಗಿ ಆಚರಿಸಿ ಉಳಿದ ಹಣವನ್ನು ಅಲ್ಲಿನ ಸಂತ್ರಸ್ತರಿಗೆ ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ  ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೆ. ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಡಾ ಆಶಾಜ್ಯೋತಿ ರೈ, ರವಿರಾಜ ಶೆಟ್ಟಿ ನಿಟ್ಟೆ ಗುತ್ತು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಡಿ. ಶೆಟ್ಟಿ, ವಸಂತ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages