BUNTS NEWS, ಮುಂಬಯಿ : ಮೀರಾರೋಡ್ ಸೆಕ್ಟರ್’ನ ಜನಪ್ರೀಯ ಕೌಶಿಕ್ ಸಿಲ್ಕ್’ನ ಪ್ರಥಮ ವರ್ಷಾಚರಣೆಯು ಸೆ. 24ರಂದು ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಸುಧಾಕರ್ ಹೆಗ್ಡೆಯವರು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಮೀರಾರೋಡ್ ಕೌಶಿಕ್ ಸಿಲ್ಕ್’ನ ಪಾಲುದಾರರಾದ ಅಮಿತ ಕಿಶೋರ್ ಶೆಟ್ಟಿ, ನಯನಾ ರಮೇಶ್ ಶೆಟ್ಟಿ, ಶಾಲಿನಿ ರತ್ನಾಕರ ಶೆಟ್ಟಿ, ಪ್ರಸನ್ನ ಪ್ರಕಾಶ್ ಶೆಟ್ಟಿರವರ ಆಡಳಿತದಲ್ಲಿ ಮುಂಬಯಿಯಲ್ಲಿ ಜನಪ್ರಿಯಗೊಂಡಿರುವ ಸೀರೆಗಳ ಮಳಿಗೆ ಕೌಶಿಕಿ ಸಿಲ್ಕ್ ಪ್ರಥಮ ವರ್ಷದ ಸಂಭ್ರಮಾಚರಣೆ ಆಚರಣೆ ನಡೆಯಿತು.
ಈ ಸಂದರ್ಭ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಸುಧಾಕರ ಹೆಗ್ಡೆ, ಉಪಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ ಶೆಟ್ತಿ, ಕಾರ್ಯಾಕಾರಿ ಸಮಿತಿಯ ಸದಸ್ಯೆ ಸುಜಾತ ಗುಣಪಾಲ ಶೆಟ್ಟಿ, ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸುನಿತಾ ಎನ್. ಹೆಗ್ಡೆ ಹಾಗೂ ಜ್ಯೋತಿ ಶೆಟ್ಟಿ ಪಾಲ್ಗೊಂಡಿದ್ದರು. ಅವರನ್ನು ಕೌಶಿಕಿ ಸಿಲ್ಕ್’ನ ಪಾಲುದಾರರು ಶಾಲು ಹೊದಿಸಿ ಗೌರವಿಸಿದರು.
ಬಳಿಕ ರಾತ್ರಿ ತನಕ ಮೀರಾ ಭಾಯಂದರಿನ ವಿವಿಧ ವಿವಿಧ ಸಂಘಟನೆಗಳ ಮಹಿಳಾ ವಿಭಾಗದ ಪ್ರಮುಖರು, ಸ್ಥಳೀಯ ಮಹಾನಗರ ಪಾಲಿಕೆಯ ಮೇಯರ್ ಡಿಂಪಲ್ ಮೆಹ್ತಾ, ಬಂಟರ ಸಂಘ ಮೀರಾ -ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ದಂಪತಿ ಹಾಗೂ ಹಿತೈಷಿಗಳು ಆಗಮಿಸಿ ಶುಭ ಕೋರಿದರು. ಚಿತ್ರ/ವರದಿ: ದಿನೇಶ್ ಕುಲಾಲ್