ದಸರಾ ರಜೆಯನ್ನು ಕಡಿತಗೊಳಿಸದಂತೆ ವಿಹಿಂಪ-ಬಜರಂಗದಳದಿಂದ ಜಿಲ್ಲಾಧಿಕಾರಿಗೆ ಮನವಿ - BUNTS NEWS WORLD

ದಸರಾ ರಜೆಯನ್ನು ಕಡಿತಗೊಳಿಸದಂತೆ ವಿಹಿಂಪ-ಬಜರಂಗದಳದಿಂದ ಜಿಲ್ಲಾಧಿಕಾರಿಗೆ ಮನವಿ

Share This
ಮಂಗಳೂರು: ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ದಸರಾ ರಜೆಯಲ್ಲಿ ಕಡಿತಗೊಳಿಸಲು ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ವಿಶ್ವಹಿಂದೂ ಪರಿಷದ್ ಬಜರಂಗದಳ ಖಂಡಿಸಿದ್ದು ಅ.7ರಿಂದ 21ರ ವರಗೆ ನಿಗದಿಗೊಳಿಸಿದ ರಜೆಯನ್ನು ನೀಡಬೇಕೆಂದು ಆಗ್ರಹಿಸಿದೆ.
ನವರಾತ್ರಿಗೆ ನೀಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದೆಂದು ದ.ಕ ಜಿಲ್ಲಾಧಿಕಾರಿಯವರಿಗೆ ಮತ್ತು ದ.ಕ ಜಿಲ್ಲಾ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಿತು.

ಈ ಸಂದರ್ಭ ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ವಿಶ್ವಹಿಂದೂ ಪರಿಷದ್ ಜಿಲ್ಲಾಕಾರ್ಯಧ್ಯಕ್ಷರಾದ ಗೋಪಾಲ್ ಕುತ್ತಾರ್, ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್  ಭುಜಂಗ ಕುಲಾಲ್, ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕ್ ಪ್ರವೀಣ್ ಕುತ್ತಾರ್ ಇದ್ದರು.

Pages