BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಶೈಕ್ಷಣಿಕ,
ವೈದ್ಯಕೀಯ ಹಾಗೂ ಇತರ ಆರ್ಥಿಕ ನೆರವಿನ ಧನಸಹಾಯದ ಚೆಕ್ ವಿತರಿಸಲಾಯಿತು.
ನಗರದ ಬಂಟ್ಸ್ ಹಾಸ್ಟೆಲ್’ನಲ್ಲಿರುವ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ನೆರವು ಕೋರಿ ಅರ್ಜಿ ಸಲ್ಲಿಸಿದ್ದ ಬಂಟರಿಗೆ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಧನಸಹಾಯದ ಚೆಕ್ ವಿತರಿಸಿದರು.
ಈ ಸಂದರ್ಭ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವಾ, ಖಜಾಂಚಿ ಕೊಲ್ಲಾಡಿ ಬಾಲಕೃಷ್ಣ ರೈ, ಆಡಳಿತಾಧಿಕಾರಿ
ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲು ಉಪಸ್ಥಿತರಿದ್ದರು.