ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ
ಮೂರು ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ
ಬಿಜೆಪಿ ಒಟ್ಟು 42 ವಾರ್ಡ್ಗಲ್ಲಿ ಜಯ
ಸಾಧಿಸುವ ಮೂಲಕ ಅತಿ ಹೆಚ್ಚು
ಸ್ಥಾನ ಗೆದ್ದ ಪಕ್ಷವಾಗಿದೆ. ಈ
ಮೂರು ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಂಡಿದೆ. ಮತದಾರರು
ಬಿಜೆಪಿ ಮೇಲೆ ವಿಶ್ವಾಸವಿರಿಸಿದ್ದು, ಕಾರ್ಯಕರ್ತರ
ಪರಿಶ್ರಮದಿಂದ ಪಕ್ಷ ಇನ್ನಷ್ಟು ಬಲವರ್ಧನೆಯಾಗಿದೆ
ಎಂದು ದ..ಕ.ಸಂಸದ
ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪುತ್ತೂರು
ನಗರಸಭೆಯಲ್ಲಿ ಬಿಜೆಪಿ ಭರ್ಜರಿ ಗೆಲುವು
ಸಾಧಿಸಿದ್ದರೆ, ಬಂಟ್ವಾಳ ಪುರಸಭೆಯಲ್ಲಿ ಉತ್ತಮ
ಸಾಧನೆ ಮಾಡಿದೆ. ಈ ಹಿಂದೆ
ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವನ್ನು
ಮತದಾರರು ತಿರಸ್ಕರಿಸಿದ ಕಾರಣ ಉಳ್ಳಾಲ ನಗರಸಭೆಯಲ್ಲೂ
ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮತದಾರರು
ನೀಡಿದ ತೀರ್ಪಿಗೆ ಬದ್ಧರಾಗಿ ಬಿಜೆಪಿಯ ಪ್ರತಿನಿಧಿಗಳು ಮುಂದಿನ
ದಿನಗಳಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಗಳ
ಅಭಿವೃದ್ದಿಗೆ ಶ್ರಮಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.