ಕ್ಯಾಂಪ್ಕೊ : ಐತಿಹಾಸಿಕ ದಾಖಲೆಯ 1742 ಕೋಟಿ ರೂ. ವ್ಯವಹಾರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕ್ಯಾಂಪ್ಕೊ : ಐತಿಹಾಸಿಕ ದಾಖಲೆಯ 1742 ಕೋಟಿ ರೂ. ವ್ಯವಹಾರ

Share This
ಮಂಗಳೂರು: ಬೆಳೆಗಾರರ ಹೆಮ್ಮೆಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ 2017-18ನೇ ಸಾಲಿನಲ್ಲಿ 1742 ಕೋಟಿ ರೂ.ಗಳ ವ್ಯವಹಾರಗಳ ಮೂಲಕ ತನ್ನ 45 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸ ದಾಖಲೆ ಮಾಡಿರುವುದಾಗಿ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಯಾಂಪ್ಕೊ ಸಂಸ್ಥೆಯು 1452.92 ಕೋಟಿ ರೂ. ಮೌಲ್ಯದ 52,450.12 ಮೆ.ಟನ್ ಅಡಿಕೆ ಖರೀದಿಸಿದ್ದು 1472.45 ಕೋಟಿ ರೂ. ಮೌಲ್ಯದ 50566.76 ಮೆ.ಟನ್ ಅಡಿಕೆಯನ್ನು ಮಾರಾಟ ಮಾಡಿದೆ. 182 ಕೋಟಿ ಮೌಲ್ಯದ ಚಾಕೋಲೇಟ್ ಮಾರಾಟವಾಗಿದ್ದು ಕೇಂದ್ರದ ಭಾರತೀಯ ರಫ್ತು ಸಂಸ್ಥೆಗಳ ಫೆಡರೇಶನ್ (FIEO) ನೀಡುವ ವಲಯ ಶ್ರೇಷ್ಠ ಪ್ರಶಸ್ತಿಯನ್ನು ನಾಲ್ಕನೇ ಬಾರಿಗೆ ಕ್ಯಾಂಪ್ಕೊ ಸಂಸ್ಥೆ ಪಡೆದಿರುವುದಾಗಿ ಮಾಹಿತಿ ನೀಡಿದರು.

ಈಗಾಗಲೇ ಭಾರತೀಯ ನೌಕಾಪಡೆಯ ಬಾಂಬೆ, ವಿಶಾಖಪಟ್ಟಣ ಹಾಗೂ ಕೊಚ್ಚಿ ನೆಲೆಗಳಿಗೆ ಕ್ಯಾಂಪ್ಕೊದ ‘ಡೈರಿಡ್ರೀಮ್’ ಶುದ್ದ ಹಾಲಿನ ಚಾಕಲೇಟ್’ಗಳು ಪೂರೈಕೆಯಾಗುದುದು ಅಭಿಮಾನದ ವಿಷಯವಾಗಿದೆ. ಕ್ಯಾಂಪ್ಕೊ ಸಂಸ್ಥೆಯು 17.52 ಕೋಟಿ ರೂ. ಮೌಲ್ಯದ ಕೊಕ್ಕೊ ಹಸಿಬೀಜ, 38.22 ಕೋಟಿ ರೂ. ಮೌಲ್ಯದ ಕೊಕ್ಕೋ ಒಣಬೀಜ, 48.87 ಕೋಟಿ ರೂ. ಮೌಲ್ಯದ ರಬ್ಬರ್, 9.25 ಕೋಟಿ ರೂ. ಮೌಲ್ಯದ ಕಾಳುಮೆಣಸು ಖರೀದಿಸಿದ್ದು ಸಮರ್ಪಕ ರೀತಿಯಲ್ಲಿ ಮಾರಾಟ ಮಾಡಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 47,990 ಕೊಕ್ಕೊ ಹಾಗೂ 10,900 ಕಾಳುಮೆಣಸಿನ ಸಸಿ ವಿತರಣೆ, ಭಾರತೀಯ ಸಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ ಕೋಯಿಕ್ಕೋಡು ಜತೆ ಕ್ಯಾಂಪ್ಕೊ ಒಡಂಬಡಿಕೆ, ಗ್ರಾಹಕರಿಗೆ ಕ್ಯಾಂಪ್ಕೊ ಚಾಕಲೇಟ್ ಉತ್ಪನ್ನ ಲಭ್ಯತೆಗೆ ‘ಚಾಕಲೇಟ್ ಕಿಯೋಸ್ಕ್’ ಮಳಿಗೆಗಳ ಆರಂಭ, ‘ತೆಂಗಿನಕಾಯಿ ಪರಿಷ್ಕರಣ ಯೋಜನೆ’ಗೆ ಬೇಕಾದ ಯಂತ್ರೋಕರಣಗಳ ಆಳವಡಿಕೆಯ ನಿಟ್ಟಿನಲ್ಲಿ ಕಾರ್ಯಚರಣೆ, ಕಳೆದ ಸಾಲಿನಲ್ಲಿ 17 ಫಲಾನುಭವಿ ಸದಸ್ಯ ಬೆಳೆಗಾರ ವೈದ್ಯಕೀಯ ಖರ್ಚಿಗಾಗಿ ಆರ್ಥಿಕ ಸಹಾಯ ನೀಡಿರುವುದಾಗಿ ಹೇಳಿದರು.

ಇದೇ ಸೆ.29ರಂದು ಮಣ್ಣಗುಡ್ಡದ ಸಂಘನಿಕೇತನದಲ್ಲಿ ಕ್ಯಾಂಪ್ಕೊ 44ನೇ ವಾರ್ಷಿಕ ಮಹಾಸಭೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages