ಎಮ್.ಸಿ.ಸಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಪೆರ್ಮಾಯಿ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎಮ್.ಸಿ.ಸಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಪೆರ್ಮಾಯಿ ಆಯ್ಕೆ

Share This
ಮಂಗಳೂರು: ಎಮ್.ಸಿ.ಸಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಪೆರ್ಮಾಯಿ ಹಾಗೂ ಉಪಾಧ್ಯಕ್ಷರಾಗಿ ಜೆರಾಲ್ಡ್ ಜೂಡ್ ಡಿಸಿಲ್ವ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಬ್ಯಾಂಕಿನ ನೂತನ ಅಧ್ಯಕ್ಷ ಅನಿಲ್ ಲೋಬೊ ಪೆರ್ಮಾಯಿ ಮಾತನಾಡಿ, 106 ವರ್ಷಗಳ ಇತಿಹಾಸವಿರುವ ಎಮ್.ಸಿ.ಸಿ. ಬ್ಯಾಂಕ್  ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ 16 ಶಾಖೆಗಳನ್ನು ಹೊಂದಿದೆ. ಕಳೆದ ಭಾನುವಾರ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬ್ಯಾಂಕಿನ ಸದಸ್ಯರು ನನ್ನ ನಾಯಕತ್ವದ ತಂಡದ ಎಲ್ಲಾ 13 ಸದಸ್ಯರಿಗೆ ಬಹುಮತವನ್ನು ನೀಡಿದ್ದು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಈಗಾಗಲೇ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಜಾರಿಗೊಳಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು ಜವಾಬ್ದಾರಿಗೆ ನಾವೆಲ್ಲ ಬದ್ದರಾಗಿದ್ದೇವೆ. ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ ರೂ. ಕೊಡುತ್ತಿದ್ದೇವೆನಮ್ಮ ತಂಡದಲ್ಲಿ ಬ್ಯಾಂಕಿಂಗ್, ಆಡಳಿತ, ಶಿಕ್ಷಣ ಕ್ಷೇತ್ರ, ಕಾನೂನು, ಸಹಕಾರಿ ಕ್ಷೇತ್ರ, ಮಾನವ ಸಂಪನ್ಮೂಲ ಅಭಿವೃದ್ದಿ ಹಾಗೂ ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಅಪಾರ ಅನುಭವವಿರುವ ನಿರ್ದೇಶಕರಿದ್ದಾರೆ. ಸದ್ಯದಲ್ಲೇ ಬ್ಯಾಂಕಿನ ಗ್ರಾಹಕರು, ಹಿತಚಿಂತಕರು ಹಾಗೂ ಅನುಭವಿಗಳ ಸಲಹಾ ಸಮಿತಿಯನ್ನೂ ರಚಿಸಲಾಗುವುದು ಎಂದರು. 

ಸಮಿತಿಯ ಸಲಹೆ ಮತ್ತು ಗ್ರಾಹಕರ ಸಹಕಾರದಿಂದ, ಹಿಂದಿನ ಆಡಳಿತ ಮಂಡಳಿ ಆರಂಭಿಸಿದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ, ಮುಂದಿನ ಐದು ವರ್ಷಗಳಲ್ಲಿ ಉಡುಪಿಯಲ್ಲಿ ಪ್ರಾದೇಶಿಕ ಕಚೇರಿಯ ಸ್ಥಾಪನೆ, ಹೆಚ್ಚುವರಿ ಶಾಖೆಗಳನ್ನು ತೆರೆಯುವ ಬಗ್ಗೆ ಯೋಜನೆ, ಯುವಜನರಿಗೆ ಉದ್ಯೋಗಾವಕಾಶ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಬ್ಯಾಂಕಿನ ಸೇವೆಯಲಿ ಸುಧಾರಣೆ. ಹೆಚ್ಚುವರಿ .ಟಿ.ಎಮ್ ಗಳ ಅಳವಡಿಕೆ, ಶಿಬ್ಬಂದಿಗೆ ಕೌಶಲ್ಯ ತರಬೇತಿ, ವೇತನ ಪರಿಷ್ಕರಣೆ ಮತ್ತು ಸವಲತ್ತುಗಳು, ಹದಿನೆಂಟು ವರ್ಷದ ಪ್ರಾಯದವರೆಗಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಉಳಿತಾಯ ಖಾತೆಯ ಯೋಜನೆ , ಸಮುದಾಯದ ಅಭಿವೃದ್ಧಿಗಾಗಿ  ಸಿ.ಎಸ್.ಆರ್ ಕಾರ್ಯಕ್ರಮದ ಸದ್ಭಳಕೆ ಇದನ್ನು ನಮ್ಮ ತಂಡದ ಪಂಚವಾರ್ಷಿಕ ಯೋಜನೆ ಎಂದೂ ನೀವು ಕರೆಯಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಸುನಿಲ್ ಮಿನೆಜಸ್, ಪ್ರಾಂಸೀಸ್ ಮೊಂತೇರೊ ಮತ್ತಿತರರು ಉಪಸ್ಥಿತರಿದ್ದರು.

Pages