ಮಂಗಳೂರು: ಹಿಂದೂಸ್ಠಾನ ಪೆಟ್ರೋಲಿಯಂ ಕಾರ್ಪೋರೇಶನ್ ಮಂಗಳೂರು ವಿಭಾಗದ ವತಿಯಿಂದ ಕೇರಳದ ಪ್ರವಾಹ
ಪೀಡಿತರಿಗೆ ಸಹಾಯ
ಹಸ್ತ ನೀಡಿತು. ಮಂಗಳೂರು ವಿಭಾಗದ ಎಲ್ಲಾ ಗ್ಯಾಸ್ ವಿತರಕರು, ಹೆಚ್’ಪಿಸಿಎಲ್ ನ ಅಧಿಕಾರಿಗಳು
ಮತ್ತು ಕೆಲಸಗಾರರು ಸೇರಿ 5 ಲಕ್ಷಕ್ಕೂ ಅಧಿಕ
ಮೊತ್ತದ ಔಷಧ, ಕಂಬಳಿ ಮತ್ತು
ಇತರ ಅಗತ್ಯ ವಸ್ತುಗಳನ್ನು ಕೇರಳಕ್ಕೆ
ಕಳುಹಿಸಲಾಯಿತು.
ಮಂಗಳೂರು
ವಿಭಾಗದ ಚೀಫ್ ರೀಜನಲ್ ಮ್ಯಾನೇಜರ್
ರಮೇಶ್ ನಾಗರಾಜ್
ಈ ಸಂದರ್ಭ ಮಾತನಾಡಿ
ಸಂತ್ರಸ್ತರಿಗೆ ನೆರವು
ನೀಡುವುದು ಮಾನವೀಯ ಕರ್ತವ್ಯ. ವಿಭಾಗದ
ಎಲ್ಲರು ಇದಕ್ಕೆ ಸಹಕರಿಸಿದುದರಿಂದ ಇದು
ಸಾಧ್ಯವಾಯಿತು. ಕೊಡಗಿನ ಸಂತ್ರಸ್ತರಿಗೆ ಸ್ವಲ್ಪ
ಸಮಯದ ನಂತರ ಅವರ ಅಗತ್ಯವನ್ನು
ನೋದಿ ವಸ್ತುಗಳನ್ನು ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸೇಲ್ಸ್ ಆಫೀಸರ್ ಜುನೇದ್,
ಪ್ಲಾಂಟ್ ಮ್ಯಾನೇಜರ್ ಆಕಾಶ್, ಎಲ್ಲಾ ಅಧಿಕಾರಿ
ವರ್ಗ, ಹೆಚ್.ಪಿ.ಗ್ಯಾಸ್
ವಿತರಕರ ಸಂಘದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಮತ್ತು ಗ್ಯಾಸ್
ವಿತರಕರು, ಸಿಬ್ಬಂದಿ ವರ್ಗದವರು ಉಪಸ್ಠಿತರಿದ್ದರು.