ಸಮಾಜದ ಒಡಕುಗಳನ್ನು ಸರಿಪಡಿಸಲು ರೋಟರಿ ಸಂಸ್ಥೆ ಶ್ರಮಿಸಬೇಕು : ಡಾ. ಎನ್.ವಿನಯ್ ಹೆಗ್ಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಮಾಜದ ಒಡಕುಗಳನ್ನು ಸರಿಪಡಿಸಲು ರೋಟರಿ ಸಂಸ್ಥೆ ಶ್ರಮಿಸಬೇಕು : ಡಾ. ಎನ್.ವಿನಯ್ ಹೆಗ್ಡೆ

Share This
BUNTS NEWS NETWORK, ಮಂಗಳೂರು: ಸಮಾಜ ಸೇವೆಗಳು, ಜನಪ್ರತಿನಿಧಿಯ ಆಯ್ಕೆಗಳು ಸಮಾಜದ ಒಂದಾಗುವಿಕೆಗೆ ಕಾರಣವಾಗಬೇಕು. ಬ್ರಿಟಿಷರು ಒಡೆದಾಳುವುದನ್ನೇ ಬಂಡವಾಳ ಮಾಡಿ ಆಳಿದರು, ಅಂತಹದ್ದೇ ಶಿಕ್ಷಣನೂ ನೀಡಿದರು. ಎಂಬತ್ತು ವರುಷದ ನಾನು  ಸ್ವಾತಂತ್ರ್ಯ ಸಮಯದ ದಿನಗಳನ್ನು ಆಶಯಗಳನ್ನು ಕಂಡಿದ್ದೇನೆ. ಈಗೀಗ ಸಮಾಜದಲ್ಲಿ ಒಡಕು ಮೂಡಿಸಿ ವಿಜ್ರಂಭಿಸುವುದು ಕಂಡು ಮರುಗುತ್ತಿದ್ದೇನೆ. ರೋಟರಿ ಮತ್ತು ಇಂತಹ ಸೇವಾ ಸಂಸ್ಥೆಗಳು ಈ ಒಡಕು ಮೀರಿ ನಿಂತು ಸಮಾಜ ಒಂದುಗೂಡಿಸುವ ಸೇವೆ ಮಾಡಬೇಕೆಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎನ್. ವಿನಯ್ ಹೆಗ್ಡೆ ನುಡಿದರು.
ಅವರು ಕುಲಶೇಕರದ ಕೊರ್ಡೆಲ್ ಹಾಲ್ನಲ್ಲಿ ರೋಟರಿ 3181 ಜಿಲ್ಲೆ ಇದರ ನೂತನ ಗವರ್ನರ್ ರೋಟೇರಿಯನ್ ಎಂಪಿಎಚ್ ಎಫ್ ರೊಹಿನಾಥ್ ಪಿ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 250 ಅಂಗನವಾಡಿಗಳನ್ನು ದತ್ತು ಪಡೆವ ಮಾರ್ಗದರ್ಶಿ ಚಿತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಅಂಗನವಾಡಿ ಶಾಲೆಗಳ ಸೌಕರ್ಯಗಳನ್ನು ಅಭಿವೃಧ್ದಿಪಡಿಸುವುದು ಸರಿಯಾದ  ಕಾರ್ಯಕ್ರಮವಾಗಿದೆ, ಎಳೆ ವಯಸ್ಸಿನಲ್ಲಿ ಸರಿಯಾದ ಕ್ರಮದಲ್ಲಿ ಶಿಕ್ಷಣದ ವಾತಾವರಣ ಮಾಡಿದರೆನೇ ಸ್ವಸ್ಥ ಸಮಾಜಕ್ಕೆ ಬುನಾದಿಯಾದೀತು. ಇದಕ್ಕೆಲ್ಲಾ ಕಟಿಬದ್ದರಾಗಿ ಶ್ರಮಿಸಲು ಮುಂದೆ ಬಂದಾಗ ಈ ಸಂಸ್ಥೆಗಳಿಗೆ ಅರ್ಥ. ಇಲ್ಲವಾದಲ್ಲಿ ಶ್ರೀಮಂತರ ಮೋಜಿನ ಕೂಟ ಎಂದು ಮಾತ್ರ ಪರಿಗಣಿಸಿ ಜನಸಾಮಾನ್ಯರ ಮನಗೆಲ್ಲುವಲ್ಲಿ ವಿಫಲವಾದೀತು ಎಂದರು.

ಪದ ಸ್ವೀಕಾರ ಮಾಡಿದ ನೂತನ ಗವರ್ನರ್ ರೊಟೇರಿಯನ್ ರೋಹಿನಾಥ್ ಮಾತನಾಡಿ, ರೊಟೇರಿಯನರು ಶೀಮಂತ ಹೃದಯದವರು. ಪೊಲಿಯೋ ಇಡೀ ಲೊಕದ ನಕ್ಷೆಯಂದಲೇ ತೆಗೆದವರು. ಇಂದಿಗೆ ಭರತದಲ್ಲಿ ಒಂದೂ ಮಗು ಕಂಟುತ್ತಾ ನಡೆಯದೆ ಇರುವ ದೃಶ್ಯ ರೋಟರಿಯ ಕೊಟ್ಯಾಂತರ ಬಿಲಿಯನ್ ರುಪಾಯಿ ಖರ್ಚು ಮಾಡಿದ ಹೃದಯ ವೈಶಲ್ಯಯದ ರುಜುವಾತಾಗಿದೆ ಎಂದರು.
ರೊಟೇರಿಯನ್ ಕೃಷ್ಣ ಶೆಟ್ಟೆ, ರೋಟೇರಿಯನ್ ದೇವ್ ದಾಸ್ ರೇಯ್ ಶುಭ ಹಾರೈಸಿದರು. ನಿರ್ಗಮನ ಗವರ್ನರ್ ಎಂ.ಎಂ ಸುರೇಶ್ ಚಂಗಪ್ಪ ಮಾತನಾಡಿ ತನ್ನ ವರುಷದ ಸಾಧನೆಗಳನ್ನು ಬಣ್ನಿಸಿದರು. ಜಿಲ್ಲಾ  ಆಡಳಿತ ಕಾರ್ಯದರ್ಶಿ ವಿಕ್ರಮ್ ದತ್ತ ಸ್ವಾತಿಸಿ ಕಾರ್ಯಕ್ರಮ ಕಾರ್ಯದರ್ಶಿ ವಿನಾಯಕ ಪ್ರಭು ವಂದಿಸಿದರು. ಆಲ್ವಿವನ್ ಡೆಸಾ ನಿರೂಪಿಸಿದರು. ಉಪ ಗವರ್ನರ್ ಒಂಬತ್ತು ಮಂದಿ ಮತ್ತು ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಹಾಲಿ ಮತ್ತು ನಿಕಟಪೂರ್ವ ಗವರ್ನರ್ ಪತ್ನಿಯರು ವೇದಿಕೆಯಲ್ಲಿದ್ದರು. ದ.ಕ. ಮಡಿಕೇರಿ,ಚಾಮರಾಜನಗರ,ಮೆಯ್ಸೂರ್ ಜಿಲ್ಲೆಗಳ ಎರಡು ಸಾವಿರ ಜನರು ಹಾಜರಿದ್ದರು.

Pages